Home Blog Page 3029

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹುಟ್ಟು ಹಬ್ಬವಿಂದು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಬಾಲಿವುಡ್ ನ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರು ಇಂದು ತಮ್ಮ 54ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಮಾಧುರಿ ದೀಕ್ಷಿತ್ ಅವರು 1967ರ ಮೇ. 15ರಂದು ಜನಿಸಿದ್ದರು. ಅವರು 1984ರಲ್ಲಿ ಅಬೋಧ್ ಚಿತ್ರದ ಮೂಲಕ ತಮ್ಮ ಬಣ್ಣದ ಲೋಕ ಪ್ರಾರಂಭಿಸಿದ್ದರು. ಆ ನಂತರ 1988ರಲ್ಲಿ ತೇಜಾಬ್ ಸಿನಿಮಾದಲ್ಲಿ ಅಭಿನಯಿಸಿದ್ದ ಮಾಧುರಿ, ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಆ ನಂತರ ಮಾಧುರಿ ದೀಕ್ಷಿತ್ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ಅಭಿಮಾನಿಗಳಿಗೆ ಕೊಟ್ಟರು.

ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲ ಸೂಪರ್ ಸ್ಟಾರ್ ಗಳೊಂದಿಗೂ ಮಾಧುರಿ ನಟಿಸಿದ್ದಾರೆ. ಅಲ್ಲದೇ, ಒಂದು ಕಾಲದಲ್ಲಿ ಇಡೀ ಬಾಲಿವುಡ್ ನ್ನೇ ಇವರು ಆಳಿದ್ದರು. ಅಷ್ಟೊಂದು ಬೇಡಿಕೆ ಇವರಿಗೆ ಇತ್ತು. ಒಂದು ಕಾಲದಲ್ಲಿ ನಾಯಕ ನಟನಿಗಿಂತಲೂ ಮಾಧುರಿಗೆ ಹೆಚ್ಚಿನ ಅಭಿಮಾನಿಗಳಿದ್ದರು.

ಬಾಲಿವುಡ್ ಚಿತ್ರ ರಂಗದಲ್ಲಿ ಹಲವಾರು ಫಿಲ್ಮ್ ಫೇರ್ ಅವಾರ್ಡ್ ಗಳನ್ನು ಅವರು ಬಾಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹಲವಾರು ನಟ – ನಟಿಯರು ವಿಶ್ ಮಾಡಿದ್ದಾರೆ. ಆದರೆ, ಸೆಲೆಬ್ರಿಟಿಗಳು ಮಾತ್ರ ಈ ಕೊರೊನಾ ಸಂಕಷ್ಟದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಈ ಸಾಲಿಗೆ ಮಾಧುರಿ ಕೂಡ ಸೇರಿದ್ದಾರೆ.

ಕೈ ಕೊಟ್ಟ ಮಹಿಳೆ; ಕೊಡಲಿ ಕಾವಿನಿಂದ ಹಲ್ಲೆ ಮಾಡಿದ ಯುವಕ!

ವಿಜಯಸಾಕ್ಷಿ ಸುದ್ದಿ, ಗದಗ

ಪತಿಯಿಂದ ದೂರವಾಗಿದ್ದ ಮಹಿಳೆಯೊಂದಿಗೆ
ಮೂರು ‌ವರ್ಷಗಳಿಂದ ಸಂಬಂಧ ಇಟಕೊಂಡಿದ್ದ ಲಾರಿ ಚಾಲಕನೊಬ್ಬ ಆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು, ಬಿಡಿಸಲು ಬಂದ ಮಹಿಳೆಯ ತಾಯಿಯ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ

ಜಿಲ್ಲೆಯ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಈ ಘಟನೆ ನಡೆದದ್ದು, ಆರೋಪಿ ಲಾರಿ ಚಾಲಕ ಗೂಡಸಾಬ್ ಅಮೀನಸಾಬ್ ನದಾಫ್ ಎಂಬಾತ ಅದೇ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಇಟಗೊಂಡಿದ್ದ. ಮೂರು ವರ್ಷಗಳ ಕಾಲ ಚೆನ್ನಾಗಿಯೇ ಇದ್ದ ಸಂಬಂಧ ಇತ್ತೀಚೆಗೆ ಹಳಸಿದೆ. ಆ ಮಹಿಳೆ ಇತ್ತೀಚೆಗೆ ಗೂಡುಸಾಬ್ ನನ್ನು ನಿರ್ಲಕ್ಷ್ಯ ಮಾಡಲು ಶುರು ಹಚ್ಚಗೊಂಡಿದ್ದಾಳೆ.

ಇದರಿಂದಾಗಿ ಆರೋಪಿ ಗೂಡುಸಾಬ್ ನಿಗೆ ಸಿಟ್ಟು ಬಂದಿದೆ. ಆಗಾಗ ಆ ಮಹಿಳೆಯ ಮನೆ ಮುಂದೆ ತಿರುಗಾಡುತ್ತಾ ಅವಾಚ್ಯ ಪದಗಳನ್ನು ಬಳಸಿ ಬೈದಾಡುತ್ತಾ ಹೋಗುತ್ತಿದ್ದ.

ಹೀಗೆ ಕೈಯಲ್ಲಿ ಕೊಡಲಿ ಹಿಡಕೊಂಡ ಆರೋಪಿ ಮೊನ್ನೆ ಮಹಿಳೆಯ ಮನೆ ಮುಂದೆ ಹೋಗಿ ದುಡ್ಡು ಕೊಡು ಅಂತ ಕೇಳಿದ್ದಾನೆ. ನೀ ಯಾವುದು ದುಡ್ಡು ಕೊಟ್ಟಿಲ್ಲ ಅಂತ ಮಾತಿಗೆ ಮಾತು ಬೆಳೆದ ಜಗಳ ದೀರ್ಘಕ್ಕೆ ಹೋಗಿ ಕೈಯಲ್ಲಿದ್ದ ಇದ್ದ ಕೊಡಲಿ ಕಾವಿನಿಂದ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಆ ಮಹಿಳೆಯ ತಾಯಿಗೂ ಗಾಯವಾಗಿದೆ.

ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಗೂಡುಸಾಬ್ ಪೊಲೀಸರ ಅತಿಥಿಯಾಗಿದ್ದಾನೆ

ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಸಾವಿನಿಂದ ಮನನೊಂದ ಪತಿ; ಪೋಟೋ ಜೇಬಲ್ಲಿ ಇಟಕೊಂಡೇ ಆತ್ಮಹತ್ಯೆಗೆ ಶರಣು

ವಿಜಯಸಾಕ್ಷಿ ಸುದ್ದಿ, ಗದಗ

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವಿನಿಂದ ಮನನೊಂದ ಪತಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.

ಡೋಣಿ ಗ್ರಾಮದ ಪರಸಪ್ಪ ಮುದಿಯಪ್ಪ ಜಂಗಳಿ (42) ಎಂಬಾತನೇ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಒಂದು ತಿಂಗಳ ಹಿಂದೆ ಪರಸಪ್ಪನ ಪತ್ನಿ ಶಾಂತವ್ವ( 36) ಅನಾರೋಗ್ಯದಿಂದ ಮೃತಪಟ್ಟಿದ್ದಳು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಪರಸಪ್ಪ ಮಾನಸ್ಸಿಕವಾಗಿ ಕುಗ್ಗಿ ಹೋಗಿದ್ದ.

ಶುಕ್ರವಾರ ರಾತ್ರಿ ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಜಾನೆ ಮರದಡಿಯಲ್ಲಿ‌ ನೇತಾಡುತ್ತಿದ್ದ ಶವ ನೋಡಿದ ಗ್ರಾಮಸ್ಥರು‌ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ‌ನೀಡಿದ್ದಾರೆ.

ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಪರಿಶೀಲನೆ ಮಾಡಿದಾಗ, ಮೃತ ಪರಸಪ್ಪನ ಜೇಬಲ್ಲಿ ಪತ್ನಿ ಶಾಂತವ್ವಳ ಪೋಟೋ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಲೆ ಇಲ್ಲದೆ ನಡು ರಸ್ತೆಯಲ್ಲಿಯೇ ಟೊಮ್ಯಾಟೋ ಸುರಿದು ಹೋಗುತ್ತಿರುವ ರೈತರು!

ವಿಜಯಸಾಕ್ಷಿ ಸುದ್ದಿ, ಕೋಲಾರ

ಕೊರೊನಾ ಚೈನ್ ಕಟ್ ಮಾಡುವ ಉದ್ಧೇಶದಿಂದ ರಾಜ್ಯದಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ರೈತರ ಬದುಕು ಬೀದಿಗೆ ಬಂದಿದೆ.
ರೈತರ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗುತ್ತಿದೆ. ಇದರಿಂದಾಗಿ ರೈತರು ಹೈರಾಣಾಗುತ್ತಿದ್ದಾರೆ. ಎಕರೆಗೆ ರೂ. 3 ಲಕ್ಷ ವ್ಯಯಿಸಿ ಬೆಳೆದ ಮೂರು ಲಕ್ಷ ಖರ್ಚು ಮಾಡಿ ಬೆಳೆದ ಬೆಳೆ.

15 ಕೆಜಿ ತೂಕದ ಟೊಮ್ಯಾಟೋ ಇರುವ ಒಂದು ಬಾಕ್ಸ್ ಕೇವ ರೂ. 30ಕ್ಕೆ ಮಾರಾಟವಾಗುತ್ತಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಮಾರುಕಟ್ಟೆಯಲ್ಲಿ ಈ ರೀತಿ ಮಾರಾಟವಾಗುತ್ತಿದೆ. ಕೆಜಿ ಟೊಮ್ಯಾಟೋ ಕೇವಲ ರೂ. 2ಕ್ಕೆ ಮಾರಾಟಾವಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಈ ಕಾರಣದಿಂದಾಗಿ ರೈತರು ಟೊಮ್ಯಾಟೋ ಮಾರಾಟ ಮಾಡದೆ ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ. ದಲ್ಲಾಳಿಗಳಿಗೆ ಟೊಮೊಟೊ ಬಾಕ್ಸ್ ಗಳನ್ನು ಹಿಂದಿರುಗಿಸುವ ಉದ್ಧೇಶದಿಂದ ರೈತರು ರಸ್ತೆಯಲ್ಲಿಯೇ ಟೊಮ್ಯಾಟೋ ಸುರಿಯುತ್ತಿದ್ದಾರೆ.
ಇಂದು ಈ ಮಾರುಕಟ್ಟೆಗೆ ರೂ. 30 ಸಾವಿರ ಟೊಮ್ಯಾಟೋ ಬಾಕ್ಸ್ ಗಳು ಬಂದಿದ್ದವು. ಈ ಪೈಕಿ 5 ಸಾವಿರ ಬಾಕ್ಸ್ ಗಳು ರೂ. 3 ರೂಪಾಯಿಯಂತೆ ಮಾರಾಟವಾಗಿವೆ.

ಇನ್ನುಳಿದ 25 ಸಾವಿರ ಟೊಮ್ಯಾಟೋ ಬಾಕ್ಸ್ ಗಳನ್ನು ಕೇವಲ ರೂ. 10 ರಿಂದ 20ಕ್ಕೆ ಕೇಳಿದ ದಲ್ಲಾಳಿಗಳು. ಇದಕ್ಕೆ ಮನನೊಂದು ರಸ್ತೆ ಬದಿ ಸುರಿದು ರೈತರು ಹೋಗುತ್ತಿದ್ದಾರೆ. ಪ್ರತಿಯೊಬ್ಬ ರೈತರು ಒಂದು ಎಕೆರೆಗೆ ರೂ. 3 ಲಕ್ಷ ಖರ್ಚು ಮಾಡಿ ಟೊಮ್ಯಾಟೋ ಬೆಳೆದಿದ್ದಾರೆ. ಆದರೆ, ರೈತರ ಕೈಗೆ ಮಾತ್ರ ಪುಡಿಗಾಸು ಸಿಗುತ್ತಿದೆ. ಹೀಗಾಗಿ ರೈತರ ನೋವನ್ನು ಕೂಡಲೇ ಸರ್ಕಾರ ಆಲಿಸಿ, ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ದೇಶದಲ್ಲಿ ಇಳಿಮುಖದತ್ತ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗುತ್ತಿದೆ. ಚೇತರಿಕೆ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,26,098 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,890 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಈ ನಿಟ್ಟಿನಲ್ಲಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,43,72,907ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 2,66,207ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 36,73,802ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 18,04,57,579 ಜನರಿಗೆ ಲಸಿಕೆ ನೀಡಲಾಗಿದೆ.

ಏಮ್ಸ್ ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೆಹಲಿ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ನಿಂದ ಪ್ರಸಕ್ತ ಸಾಲಿಗೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಏಮ್ಸ್‌ ಸೀನಿಯರ್ ರೆಸಿಡೆಂಟ್ಸ್‌ ಮತ್ತು ಸೀನಿಯರ್ ಡೆಮಾಂಸ್ಟ್ರೇಟರ್ಸ್‌ ಹುದ್ದೆಗಳನ್ನು ಜುಲೈ – 2021 ಸೆಷನ್‌ ಗೆ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಏಮ್ಸ್‌ ಅಧಿಕೃತ ವೆಬ್‌ಸೈಟ್ aiimsexams.ac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 28, 2021 ಕೊನೆಯ ದಿನವಾಗಿದೆ.

ಏಮ್ಸ್‌ ಸೀನಿಯರ್ ರೆಸಿಡೆಂಟ್ಸ್‌ ಮತ್ತು ಸೀನಿಯರ್ ಡೆಮಾಂಸ್ಟ್ರೇಟರ್ಸ್‌ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 416 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಹುದ್ದೆಗಳ ಅವಧಿ ಕನಿಷ್ಠ 3 ವರ್ಷ ಇರುತ್ತದೆ. ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆಗಳಿಗೆ ಅನುಗುಣವಾಗಿ ಎಂಡಿ, ಎಂಎಸ್, ಎಂಡಿಎಸ್, ಡಿಎನ್‌ ಬಿ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ಗರಿಷ್ಠ 45 ವರ್ಷ ವಯೋಮಿತಿ ಮೀರಿರಬಾರದು.

ದೇಶದ ಕೊರೊನಾ ಪರಿಸ್ಥಿತಿಗೆ ಆತಂಕ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಭಾರತ ದೇಶದಲ್ಲಿ ಕೊರೊನಾ ಸ್ಥಿತಿ ಭೀಕರವಾಗುತ್ತಿದೆ. ಅಲ್ಲಿನ ಕೆಲವು ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳು ಆತಂಕ ಮೂಡಿಸುತ್ತಿವೆ. ಇದನ್ನು ಗಮನಿಸಿದರೆ ಎರಡನೇ ವರ್ಷ ಇನ್ನೂ ಭಯನಕವಾಗಿರುವ ಬಗ್ಗೆ ಎಚ್ಚರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಆತಂಕ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಕುರಿತು ಮಾತನಾಡಿ, ಭಾರತದ ಪರಿಸ್ಥಿತಿಗೆ ವಿಶ್ವ ಸಂಸ್ಥೆ ಸ್ಪಂದಿಸುತ್ತಿದೆ. ಸಾವಿರಾರು ಆಕ್ಸಿಜನ್ ಕಾನ್ಸಟ್ರೇಟರ್ ಗಳು, ಮೊಬೈಲ್ ಫೀಲ್ಡ್ ಹಾಸ್ಪಿಟಲ್‍ ಗಳಿಗಾಗಿ ಟೆಂಟ್ಗಸಳು, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಭಾರತವು ಇನ್ನೂ ಮಹಾಮಾರಿ ವಿರುದ್ಧ ಹೋರಾಡಬೇಕಾದ ಅಗತ್ಯವಿದೆ. ಹಲವು ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಚಿಂತೆಗೀಡು ಮಾಡುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಸಾವುಗಳನ್ನು ನೋಡಿದರೆ ಭಯವಾಗುತ್ತಿದೆ. ಭಾರತಕ್ಕೆ ಬೆಂಬಲ ನೀಡುತ್ತಿರುವ ದೇಶಗಳಿಗೆ ವಿಶ್ವ ಸಂಸ್ಥೆ ಧನ್ಯವಾದ ಅರ್ಪಿಸುತ್ತದೆ ಎಂದು ಹೇಳಿದ್ದಾರೆ.

ಈ ಪರಿಸ್ಥಿತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ನೇಪಾಳ, ಶ್ರೀಲಂಕಾ, ವಿಯಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್ ಹಾಗೂ ಈಜಿಪ್ಟ್ ದೇಶಗಳಲ್ಲಿ ಕೂಡ ಇದೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಇಸ್ರೇಲ್, ಪ್ಯಾಲಿಸ್ತೇನ್ ಜಗಳದಲ್ಲಿಬಲಿಯಾಗುತ್ತಿದ್ದಾರೆ ಅಮಾಯಕರು

ವಿಜಯಸಾಕ್ಷಿ ಸುದ್ದಿ, ಇಸ್ರೇಲ್

ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಮರಕ್ಕೆ ಅಲ್ಲಿನ ಜನ ಬಲಿಯಾಗುತ್ತಿದ್ದು, ಇಡೀ ವಿಶ್ವವೂ ಆತಂಕ ವ್ಯಕ್ತಪಡಿಸುತ್ತಿದೆ.
ಈಗಾಗಲೇ ಎರಡೂ ರಾಷ್ಟ್ರಗಳ ವೈಷಮ್ಯಕ್ಕೆ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಸದ್ಯ ಅಮಾಯಕ ಜನರ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಸದ್ಯದ ಸ್ಥಿತಿ ನೋಡಿದರೆ ಪ್ಯಾಲೆಸ್ತೇನ್ – ಇಸ್ರೇಲ್ ಮಧ್ಯೆ ಯುದ್ಧದ ಭೀತಿ ಆವರಿಸಿದೆ.

ಗಾಜಾ ಪಟ್ಟಿಗೆ ಇಸ್ರೇಲ್ ರಾಷ್ಟ್ರವು ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ರವಾನಿಸಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳ ನಾಯಕರಲ್ಲಿ ಭಯ ಕಾಣುತ್ತಿದೆ. ಇನ್ನೊಂದೆಡೆ ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಆದರೆ, ಈ ಜಗಳದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ.

ಸಾವಿರಾರು ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ರಾಕೆಟ್‌ ಗಳು ಹಾರಿ ಬರುತ್ತಿವೆ. ಗಡಿ ಭಾಗದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ. ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ನಡುವಿನ ಸಮರ ಇದೇ ಮೊದಲಲ್ಲ. ಶತಮಾನಗಳ ಇತಿಹಾಸವೇ ಆ ಯುದ್ಧಕ್ಕೆ ಇದೆ.

ಸದ್ಯ ಇಡೀ ವಿಶ್ವ ಕೊರೊನಾ ಅಟ್ಟಹಾಸದಲ್ಲಿ ನಲುಗುತ್ತಿದ್ದರೆ, ಈ ಎರಡೂ ರಾಷ್ಟ್ರಗಳು ಪ್ರತಿಷ್ಠೆಗಾಗಿ ಬಡಿದಾಡುತ್ತಿವೆ.
ದಾಳಿ – ಪ್ರತಿದಾಳಿ ನೋಡಿದರೆ ಮೂರನೇ ಯುದ್ಧದ ಆತಂಕ ಎದುರಾಗುತ್ತಿದೆ. ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್‌ ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಮೂರನೇ ಯುದ್ಧದ ಭಯವಾಗುತ್ತಿದೆ.

ಇಸ್ರೇಲ್ ಸಣ್ಣ ದೇಶವಾದರೂ ಅರಬ್‌ ಒಕ್ಕೂಟದ ಹತ್ತಾರು ದೇಶಗಳನ್ನು ಎದುರು ಹಾಕಿಕೊಂಡಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ.

ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ.

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶ ಮಾಡಲಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಕ್ಕೆ ಮುಂಗಾರು ಮಳೆ ಹೊತ್ತು ತರುವ ನೈಋತ್ಯ ಮಾನ್ಸೂನ್ ಮಾರುತಗಳು ಮೇ. 31ರಂದೇ ಕೇರಳ ಪ್ರವೇಶ ಮಾಡುತ್ತಿವೆ. ಹೀಗಾಗಿ ಬೆಂಗಳೂರಿಗೆ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ ನಂತರ ಬೆಂಗಳೂರಿಗೆ ಈ ಮುಂಗಾರು ಪ್ರವೇಶಿಸಲು ಕನಿಷ್ಠವೆಂದರೂ ಆರೇಳು ದಿನ ಬೇಕಾಗುತ್ತದೆ. ಹೀಗಾಗಿ ಜೂ. 7ರಂದು ಬೆಂಗಳೂರಿಗೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಆಗಮನ ಹವಾಮಾನ ವ್ಯವಸ್ಥೆಗಳ ರಚನೆಯಿಂದ ಕೂಡಿದ್ದು, ಕೆಲವೊಮ್ಮೆ ವಿಳಂಬವಾಗುವ ಸಾಧ್ಯತೆಯೂ ಇದೆ. ಅಲ್ಲದೇ, ಬೇಗನೆ ಪ್ರವೇಶ ಕೂಡ ಮಾಡಬಹುದು. ಪ್ರಸ್ತುತದ ವಾತಾವರಣ ಗಮನಿಸಿದರೆ ನಿಗದಿತ ಸಮಯಕ್ಕೆ ಈ ಬಾರಿ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಮೇ. 20 ರಂದೇ ಮಾನ್ಸೂನ್ ಮಾರುತಗಳು ಬೀಸಲಿದ್ದು, ಮೇ. 21ರಂದು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶ ಮತ್ತು ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಮೇ. 21ರಂದೇ ಮಾನ್ಸೂನ್ ಮಾರುತಗಳ ಪ್ರವೇಶವಾಗಲಿದೆ. ಈ ಸಲಹ ಮಾನ್ಸೂನ್ ಮಾರುತಗಳು ಸಾಮಾನ್ಯ ಮಳೆ ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಆಸ್ಪತ್ರೆ ಮುಂದೆ ನರಳಾಡಿದರೂ ಅಮಾನವೀಯತೆ ಮೆರೆದ ಆಸ್ಪತ್ರೆ ಸಿಬ್ಬಂದಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ ಮಹಿಳೆಯೊಬ್ಬರು ನರಳಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಿಷನ್ ಆಸ್ಪತ್ರೆಯ ಸಿಬ್ಬಂದಿ ಅಕ್ಸಿಜನ್ ಮಾಸ್ಕ್ ಇಲ್ಲ ಎಂದು ಸೋಂಕಿತರನ್ನು ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿದೆ. ಹೀಗಾಗಿ ಸೋಂಕಿತೆಯೊಬ್ಬರು ಆಸ್ಪತ್ರೆಯ ಹೊರಗಡೆ ಆಟೋ ರಿಕ್ಷಾದಲ್ಲಿಯೇ ನರಳಾಡಿದ್ದಾರೆ.

ಮಹಿಳೆಯ ಒದ್ದಾಟ ನೋಡಿ ಮರುಕಪಟ್ಟ ಕುಟುಂಬಸ್ಥರು ನೀವು ಕೇಳಿದಷ್ಟು ಹಣ ನೀಡುತ್ತೇವೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅಂಗಲಾಚಿದ್ದಾರೆ. ಆದರೂ ಮರುಗದ ಆಸ್ಪತ್ರೆ ಸಿಬ್ಬಂದಿ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಹೇಳಿದ್ದಾರೆ.

ಈ ಸೋಂಕಿತ ಮಹಿಳೆಯು ಬೆಡ್ ಸಿಗದ ಕಾರಣಕ್ಕೆ ಮೂರು ಆಸ್ಪತ್ರೆಗಳನ್ನು ಅಲೆದಾಡಿ ಬಂದಿದ್ದರು. ನಗರದ ಭೋಗಾದಿಯ ರಾಜಮ್ಮ ಎಂಬ ಮಹಿಳೆಯ ಈ ದುರ್ದೈವಿ. ಕಣ್ಣ ಮುಂದೆಯೇ ಉಸಿರಾಟದ ಸಮಸ್ಯೆಯಿಂದ ನರಳಾಡಿದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಮರುಕ ಪಡಲಿಲ್ಲ.
ಆ ನಂತರ ಬೇರೆಡೆ ಮಾಸ್ಕ್ ತಂದು ದಾಖಲು ಮಾಡಿಕೊಳ್ಳಿ ಎಂದು ಸಂಬಂಧಿಕರು ಬೇಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಇದಕ್ಕೂ ಆಸ್ಪತ್ರೆ ಸಿಬ್ಬಂದಿ ಒಪ್ಪಿಲ್ಲ. ಆನಂತರ ಕುಟುಂಬಸ್ಥರು ಪರಿ ಪರಿಯಾಗಿ ಬೇಡಿಕೊಂಡ ನಂತರ ಒಪ್ಪಿ, ಮಹಿಳೆಯನ್ನು ದಾಖಲಿಸಿಕೊಂಡಿದ್ದಾರೆ.

error: Content is protected !!