Home Blog Page 3031

ಮತ್ತೆ ಮುಂದುವರೆಯುವುದೇ ಲಾಕ್ ಡೌನ್!?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಘೋಷಣೆ ಮಾಡಿದೆ. ಸದ್ಯ ಘೋಷಣೆಯಾಗಿರುವ ಲಾಕ್ ಡೌನ್ ನಿಂದಾಗಿ ಕೊರೊನಾ ಹತೋಟಿಗೆ ಬರುತ್ತಿದೆ. ಹೀಗಾಗಿ ಸರ್ಕಾರ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಲಾಕ್ ಡೌನ್ ಗೂ ಮುನ್ನ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತ ಸಾಗಿತೇ ಹೊರತು, ಕಡಿಮೆಯಾಗಿರಲಿಲ್ಲ. ಕರ್ಫ್ಯೂ ಸಂದರ್ಭದಲ್ಲಿಯೂ ಜನ – ಜೀವನ ಎಂದಿನಂತೆಯೇ ಇತ್ತು. ಹೀಗಾಗಿ ಕೊರೊನಾ ಹತೋಟಿಗಾಗಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಇದು ಈಗಾಗಲೇ ಜಾರಿಯಾಗಿ 4 ದಿನಗಳು ಕಳೆಯುತ್ತಿವೆ. ಆದರೆ, ಅಷ್ಟರಲ್ಲಿಯೇ ಕೊರೊನಾ ಹತೋಟಿಗೆ ಬರಲು ಪ್ರಾರಂಭವಾಗಿದೆ. ಹೀಗಾಗಿ ಸರ್ಕಾರ ಸಂಪೂರ್ಣವಾಗಿ ಕೊರೊನಾ ಹತೋಟಿಗೆ ಬರುವವರೆಗೂ ಲಾಕ್ ಡೌನ್ ಘೋಷಿಸಲು ಚಿಂತನೆ ನಡೆಸಿದೆ.

ಅಲ್ಲದೇ, ಈಗಿರುವ ಲಾಕ್ ಡೌನ್ ನ್ನು ಇನ್ನಷ್ಟು ಕಠಿಣ ಮಾಡಬೇಕೆಂದು ಕೂಡ ಈಗಾಗಲೇ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಲಾಕ್ ಡೌನ್ ಕಠಿಣವಾಗಿದ್ದರೂ ಜನರು ಅನಾವಶ್ಯಕವಾಗಿ ಹೊರಗೆ ಓಡಾಡುತ್ತಿದ್ದಾರೆ. ಪ್ರತಿದಿನ ದಿನಸಿ ಅಂಗಡಿ ಇದ್ದರು ಒಂದೇ ದಿನ ಎಲ್ಲ ಕೊಂಡುಕೊಳ್ಳಲು ಜನರು ಬರುತ್ತಿದ್ದಾರೆ. ಅಲ್ಲದೇ, ದಿನಂಪ್ರತಿ ಒಂದಿಲ್ಲೊಂದು ಕಾರಣ ಹೇಳಿ ಜನರು ಹೊರಗೆ ತಿರುಗಾಡುತ್ತಿದ್ದಾರೆ.

ಸದ್ಯದ ಲಾಕ್ ಡೌನ್ ಮೇ. 24ರ ವರೆಗೂ ಇರಲಿದೆ. ಈ ಲಾಕ್ ಡೌನ್ ನ್ನು ಇನ್ನಷ್ಟು ಕಠಿಣಗೊಳಿಸಿ, ಇನ್ನಷ್ಟು ದಿನ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ – ರಾಜ್ಯದಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉಲ್ಭಣಗೊಂಡಿದ್ದರ ಪರಿಣಾಮ ಇಂದು ಹಾಗೂ ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಪರಿಣಾಮ, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿನ ಜನರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಈ ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ಇಂದು ಯೆಲ್ಲೋ ಅಲರ್ಟ್ ಹಾಗೂ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ನಾಳೆ ಕೊಡಗಿನಲ್ಲಿ 204 ಮೀ.ಮೀನಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಬಾಗಮಂಡಲ, ಕೋರಂಗಾಲ ಸುತ್ತಮುತ್ತ ಭಾರೀ ಮಳೆ ಸಾಧ್ಯತೆ ಇದೆ ಎಂದು ಆಟೋಗಳಲ್ಲಿ ಮೈಕ್ ಕಟ್ಟಿ ಜಿಲ್ಲಾಡಳಿತ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ. ಎರಡು ದಿನಗಳ ಕಾಲ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಹ ಸೂಚನೆ ನೀಡಿದೆ.

ಜಗತ್ತಿನಲ್ಲಿ ಯಾರೂ ಸರ್ವಜ್ಞರಿಲ್ಲ….ನ್ಯಾಯಾಲಯ ನಿಂದಿಸಿ ಕ್ಷಮೆ ಕೇಳದೆ, ಮತ್ತೆ ಉದ್ಧಟತನ ಮೆರೆದರಾ ಸಿ.ಟಿ. ರವಿ?

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ನ್ಯಾಯಾಲಯದ ಕುರಿತು ನನಗೆ ಅಪಾರ ಗೌರವವಿದೆ. ನಾನು ನ್ಯಾಯಾಲಯದ ಬಗ್ಗೆ ಅಗೌರವದ ಮಾತುಗಳನ್ನು ಹೇಳಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಬಗ್ಗೆ ನಮಗೆ ಗೌರವ ಯಾವಾಗಲೂ ಇರುತ್ತದೆ. ನ್ಯಾಯಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ. ಅವರು ಕೂಡ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ನೀಡುತ್ತಾರೆ. ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿಲ್ಲ ಎಂದು ಹೇಳಿದ್ದಾರೆ.

ಸರ್ವಜ್ಞ ಅಲ್ಲದ ಅಪನಂಬಿಕೆಯ ಪದವೇ, ನಿಂದನೆಯ? ಟೀಕೆಯೇ? ಏನೂ ಅಲ್ಲ. ನಾನು ಭಾವಿಸಿದಂತೆ ಜಗತ್ತಿನ 780 ಕೋಟಿ ಜನರಲ್ಲಿಯೂ ಎಲ್ಲ ಬಲ್ಲ ಸರ್ವಜ್ಞರಿಲ್ಲ. ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟಿಡ್ ಇದ್ದೇನೆ. ಯಾರೂ ತಪ್ಪು ಗ್ರಹಿಸಬಾರದು ಎಂದು ಹೇಳಿದ್ದಾರೆ.

ನ್ಯಾಯಾಧೀಶರ ವಿರುದ್ಧ ಮಾತನಾಡಿರುವ ಸಿ.ಟಿ. ರವಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು

ವಿಜಯಸಾಕ್ಷಿ ಸುದ್ದಿ, ಮೈಸೂರು

ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಹೇಳಿಕೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಿ.ಟಿ. ರವಿ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.

ಸಿ.ಟಿ. ರವಿ ಅವರು ಇತ್ತೀಚೆಗೆ ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ, ನಗರದಲ್ಲಿನ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಸಿಟಿ ರವಿ ಅವರ ವಿರುದ್ಧ ಪಾಲಿಕೆ ಸದಸ್ಯ ಲೋಕೇಶ್ ಪಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಒಬ್ಬ ನ್ಯಾಯಾಧೀಶರ ವಿರುದ್ಧ ಇಂತಹ ಹೇಳಿಕೆ ನೀಡುವುದು ತಪ್ಪು. ನ್ಯಾಯಾಧೀಶರನ್ನು ಲೇವಡಿ ಮಾಡಿರುವ ಸಿ.ಟಿ. ರವಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಧೀಶರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೇಳಿರುವ ಮಾತನ್ನು ಸಿ.ಟಿ. ರವಿ ಅಲ್ಲಗಳೆದು ಈ ರೀತಿ ಮಾತನಾಡಿದ್ದು, ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಗೌರವಯುತ ನ್ಯಾಯಾಧೀಶರ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು. ಈ ರೀತಿಯ ಹೇಳಿಕೆಗಳನ್ನು ನೀಡಿರುವ ಸಿ.ಟಿ. ರವಿ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ ನಡೆಸಿದ ಪಾಪಿ

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಕೊರೊನಾ ಮಹಾಮಾರಿಯಿಂದ ಈಗಾಗಲೇ ಇಡೀ ದೇಶವೇ ಕಂಗಾಲಾಗಿದೆ. ಆದರೆ, ಹಲವು ಪಾಪಿಗಳು ಇಂತಹ ಸನ್ನಿವೇಶವನ್ನೇ ಉಪಯೋಗಿಸಿಕೊಂಡು ಅವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ 43 ವರ್ಷದ ಮಹಿಳೆಯೊಬ್ಬರು ಏ. 6ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ನರ್ಸ್ ಒಬ್ಬ, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಅತ್ಯಾಚಾರ ಎಸಗಿದ ವ್ಯಕ್ತಿಯ ಮೇಲೆ ಮಹಿಳೆ ದೂರು ದಾಖಲಿಸಿದ್ದರು. ವೈದ್ಯರಿಗೆ ಈ ಕುರಿತು ಹೇಳಿಕೆ ನೀಡಿವಾಗ ಆರೋಪಿಯನ್ನು ಕೂಡ ಅವರು ಗುರುತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅತ್ಯಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿದೆ. ಗಂಭೀರತೆಯನ್ನು ಅರಿತು ಕೂಡಲೇ ಆಕೆಯನ್ನು ವೆಂಟಿಲೇಟರ್ ಗೆ ಸ್ಥಳಾಂತರ ಮಾಡಲಾಯಿತು. ಆದರೆ ಅದೇ ದಿನ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತೋಷ್(40) ಎಂದು ಗುರುತಿಸಲಾಗಿದೆ. ಸದ್ಯ ಬಂಧಿತ ಆರೋಪಿಯನ್ನು ಭೋಪಾಲ್ ನ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.

ಗೋವಾದಲ್ಲಿ ಕೇವಲ 4 ದಿನಗಳಲ್ಲಿ ಆಕ್ಸಿಜನ್ ಇಲ್ಲದೆ ಎಷ್ಟು ಜನ ಸಾವನ್ನಪ್ಪಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಪಣಜಿ

ಆಕ್ಸಿಜನ್ ಕೊರತೆಯಿಂದಾಗಿ ಕೇವಲ ನಾಲ್ಕು ದಿನಗಳಲ್ಲಿ ಗೋವಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬರೋಬ್ಬರಿ 74 ಜನ ಸಾವನ್ನಪ್ಪಿರುವ ಘಟನೆ ನಡದಿದೆ.
13 ಜನ ಶುಕ್ರವಾರ(ಮೇ.14)ರಂದು ಸಾವನ್ನಪ್ಪಿದ್ದಾರೆ ಎಂದು ಮಾಜಿ ಡಿಸಿಎಂ ವಿಜಯ್ ಸರ್ದೇಸಾಯಿ ಬಹಿರಂಗ ಪಡಿಸಿದ್ದಾರೆ.

ಆಕ್ಸಿಜನ್ ಕೊರತೆಯಿಂದಾಗಿ ಗುರುವಾರವೇ ಬೆಳಿಗ್ಗೆ 15 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಬುಧವಾರ 20 ಜನ ಹಾಗೂ ಮಂಗಳವಾರ 26 ಜನ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮೆಡಿಕಲ್ ಆಕ್ಸಿಜನ್ ಲಭ್ಯತೆಯ ಕೊರತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಕೊರತೆ ಇಲ್ಲ. ಮೇ 1ರಿಂದ 10ರ ವರೆಗೆ ರಾಜ್ಯವು ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಗದಿಪಡಿಸಿದ್ದ 110 ಮೆಟ್ರಿಕ್ ಟನ್ ಗಳಲ್ಲಿ ಕೇವಲ 66.74 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಪಡೆದಿರುವುದಾಗಿ ಕೂಡ ಗೋವಾ ಸರ್ಕಾರ ಹೇಳಿದೆ.

ಹಸಿದವರಿಗೆ ಅನ್ನ ನೀಡಿ ಬಸವ ಜಯಂತಿ ಆಚರಿಸಿದ ಶಿರಹಟ್ಟಿ ಪಿಎಸ್ಐ ನವೀನ್ ಜಕ್ಕಲಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ಪಿಎಸ್ಐ ನವೀನ್ ಜಕ್ಕಲಿ, ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಊಟ ಕಲ್ಪಿಸುವುದರ ಮೂಲಕ ಬಡವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ಕರ್ಫ್ಯೂ ಕರ್ತವ್ಯದಲ್ಲೂ ಸಹ ಬಿಡುವು ಮಾಡಿಕೊಂಡು ಇಂತಹ ಮಾನವೀಯತೆಯನ್ನು ಮೆರೆಯುವಂತಹ ಹಲವಾರು ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾರ್ವಜನಿಕ ವಲಯದಲ್ಲಿ ಪಿಎಸ್ಐ ನವೀನ ಜಕ್ಕಲಿ ಪ್ರಸಂಸೆಗೆ ಪಾತ್ರರಾಗಿದ್ದಾರೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿದ ಸಚಿವ ಎಸ್.ಟಿ. ಸೋಮಶೇಖರ್!

ವಿಜಯಸಾಕ್ಷಿ ವಿಶೇಷ, ಮೈಸೂರು

ಇಲ್ಲಿಯ ಕೆ.ಆರ್. ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ವೈದ್ಯರ ಮೇಲೆ ಹಲ್ಲೆ ನಡೆಯಬಾರದು. ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅಲ್ಲದೇ, ಈಗಾಗಲೇ ಕೆ.ಆರ್. ಆಸ್ಪತ್ರೆಯಲ್ಲಿ ಬಂದೋಬಸ್ತ್ ಮಾಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಅಲದೇ, ಕೆ.ಆರ್.ಆಸ್ಪತ್ರೆಗೆ ಅಡಿಷನಲ್ ಡೀನ್ ನೇಮಕ ಮಾಡುತ್ತೇವೆ. ಒಬ್ಬರೇ ಅಧಿಕಾರಿಗಳಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸಿಎಂ ಅವರ ಜೊತೆ ಮಾತನಾಡಿದ್ದೇನೆ. ವೈದ್ಯರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಆಸ್ಪತ್ರೆಯಲ್ಲಿ ವೈದ್ಯರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ಆಸ್ಪತ್ರೆಯಲ್ಲಿ ಬಂದೋಬಸ್ತ್ ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಘನಘೋರ ಘಟನೆ – ಬರೋಬ್ಬರಿ 18 ಆನೆಗಳ ಸಾವು!

ವಿಜಯಸಾಕ್ಷಿ ಸುದ್ದಿ, ಗುವಾಹಟಿ

ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಆನೆಗಳ ಸಾಲು ಸಾಲು ಸಾವು ಕಂಡು ಬಂದಿದೆ. ಒಂದೇ ಪ್ರದೇಶದಲ್ಲಿ 18 ಆನೆಗಳು ಸಾವನ್ನಪ್ಪಿರುವ ಘಟನೆ ನಡೆದಿವೆ. ಈ ಆನೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಈ ಕುರಿತು ವನ್ಯಜೀವಿ ವಿಭಾಗದಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಶಾಯ್ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಪ್ರದೇಶ ತೀರಾ ದುರ್ಗಮವಾಗಿದೆ.

ಗುರುವಾರ ಮಧ್ಯಾಹ್ನದವೆಗೂ ನಮ್ಮ ತಂಡಕ್ಕೆ ಅಲ್ಲಿಯವರೆಗೆ ತೆರಳಲು ಆಗಲಿಲ್ಲ. ಅಷ್ಟೊಂದು ದುರ್ಗಮ ಮಾರ್ಗ ಇದಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಬೆಟ್ಟದ ಮೇಲೆ 14 ಹಾಗೂ ಬೆಟ್ಟದ ಕೆಳಗೆ 4 ಆನೆಗಳ ಶವಗಳು ಪತ್ತೆಯಾಗಿವೆ. ಆನೆಗಳು ಸಿಡಿಲು ಬಡಿದು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಮೃತಪಟ್ಟ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಆನೆಗಳು ಸಾಲಾಗಿ ಸತ್ತು ಬಿದ್ದಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜನ ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸುತ್ತಿದ್ದಾರೆ.

ತಲ್ವಾರ್ ನಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ತಲ್ವಾರ್ ನಿಂದ ಕೊಚ್ಚಿ ಯುವಕನೊಬ್ಬನನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮರಾಯ (22) ಕೊಲೆಯಾದ ದುರ್ದೈವಿ ಯುವಕ. ಅದೇ ಗ್ರಾಮದ 20 ವರ್ಷದ ಸಿದ್ದಪ್ಪ ಎಂಬ ಯುವಕನಿಂದ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇಂದು ಬೆಳಿಗ್ಗೆ 3 ಗಂಟೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂನ್ನಲಾಗಿದೆ.

ಕೊಲೆಯಾಗಿರುವ ಭೀಮರಾಯ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲ್ವಾರ್ ನಿಂದ ದುಷ್ಕರ್ಮಿ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

error: Content is protected !!