Home Blog Page 3079

ಪ್ರತ್ಯೇಕ ದಾಳಿ: 16 ಜನ ಜೂಜುಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಎರಡು ಗುಂಪುಗಳ ಮೇಲೆ ಮುಂಡರಗಿ ಪೊಲೀಸರು ದಾಳಿ ಮಾಡಿ 16 ಜನರನ್ನು ಬಂಧಿಸಿ, 25 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಡರಗಿ ಠಾಣೆಯ ಪಿಎಸ್‌ಐ ನೂರಜಾನ್ ಸಬರ್ ಹಾಗೂ ಪೊಲೀಸರು ಈ ದಾಳಿ ನಡೆಸಿದ್ದರು.

ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಕಾಲುವೆ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮೇವುಂಡಿ ಗ್ರಾಮದ ಕಾಶಪ್ಪ ಸಿದ್ದಪ್ಪ ತಳವಾರ, ಮುಂಡರಗಿಯ ಹಳೆ ಮಾರುಕಟ್ಟೆ ಬಳಿ ನಿವಾಸಿ ಯಮನೂರು ರಾಮಣ್ಣ ಭಜಂತ್ರಿ, ಮೇವುಂಡಿ ಗ್ರಾಮದ ಶಿವಪುತ್ರಪ್ಪ ಬಾಳಪ್ಪ ಹಾರೋಗೇರಿ, ಮುಂಡರಗಿ ಪಟ್ಟಣದ ಕೋಟೆ ಓಣಿಯ ಮಾದೇಗೌಡ್ ಹನಮಂತ ಡೋಣಿ, ಡಂಬಳದ ಮದರಸಾಬ್ ಕಾಶಿಮಸಾಬ್ ಖಸ್ತರ್, ಗದಗ ಶಹರದ ಹಾಳದಿಬ್ಬ ಓಣಿಯ ಭರತ್ ಯಲ್ಲೂಸಾ ಬದಿ, ಒಕ್ಕಲಗೇರಿ ಓಣಿಯ ಮಾರುತಿ ಮುದಕಪ್ಪ ಚನ್ನದಾಸರ್, ಟಾಂಗಾಕೂಟ್ ಬಳಿಯ ನಿವಾಸಿ ಸಂತೋಷ ಬಸವರಾಜ್ ಕುಕನೂರು, ಡಂಬಳದ ಮಲ್ಲಪ್ಪ ರಾಮಪ್ಪ ಹೊಸಕೇರಿ ಎಂಬುವವರನ್ನು ಬಂಧಿಸಿ ಅವರಿಂದ 18,100 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಿಂಗಟರಾಯನಕೇರಿತಾಂಡಾದಲ್ಲಿ ಜೂಜಾಟದಲ್ಲಿ ತೊಡಗಿದ್ದ ಅದೇ‌ ಗ್ರಾಮದ ವಿನಾಯಕ ಗುರುನಾಥ್ ನಾಯಕ್, ಥಾಕ್ರೆಪ್ಪ ಚಂದ್ರಪ್ಪ ನಾಯಕ್, ತುಕರಾಮ್ ಪರಶುರಾಮ ನಾಯಕ್, ಗುರು ಹಾಮೇಶ್ ನಾಯಕ್, ಕುಮಾರ್ ಲಕ್ಷ್ಮಣ್ಣ ನಾಯಕ್, ನಾಗೇಶ್ ಹಾಮೇಶ್ ಲಮಾಣಿ, ಶೇಖರ್ ಚೆನ್ನಪ್ಪ ಲಮಾಣಿ ಎಂಬುವವರನ್ನು ಬಂಧಿಸಿ, ಅವರಿಂದ ನಗದು 7100 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ.

ಗ್ರಾಪಂ ಆವರಣದಲ್ಲಿ‌ ಕಾಂಡೋಮ್ಸ್‌ಗಳ ರಾಶಿ!!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ಜಿಲ್ಲೆಯ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಪಂ ಆವರಣದಲ್ಲಿ ಕಾಂಡೋಮ್‌ಗಳ ರಾಶಿ ಬಿದ್ದಿರುವುದು ಗ್ರಾಪಂ ಆವರಣ ಅನೈತಿಕ ಚಟುವಟಿಕೆಗಳ ತಾಣ ಎನ್ನಲು ಪುಷ್ಠಿ‌ ನೀಡಿದಂತಿದೆ.

ಗ್ರಾಮದ ಮಹಿಳೆಯರಿಗೆ ಇದು ತೀವ್ರ ಮುಜುಗರ ತಂದಿದ್ದು, ಗ್ರಾಪಂ ಕಚೇರಿಗೆ ಕಾಲಿಡಲು ಯೋಚಿಸುವ ಪ್ರಮೇಯ ಬಂದೊದಗಿದೆ.‌ ಪುಂಡರು ರಾಜಾರೋಷವಾಗಿ ಕಾಂಡೋಮ್‌ಗಳನ್ನು ಗ್ರಾಪಂ ಆವರಣದಲ್ಲಿ ಬಿಸಾಡಿದ್ದಾರೆ.

ಆರೋಗ್ಯ ಇಲಾಖೆ ನಿರ್ಲಕ್ಷ್ಯ
ಈಚೆಗೆ ಗ್ರಾಪಂ ಕಚೇರಿಯಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು. ಆ ವೇಳೆ ಕಾಂಡೋಮ್‌ಗಳ‌ ಪೆಟ್ಟಿಗೆಯನ್ನು ಶೌಚಾಲಯದಲ್ಲಿ‌ ಇಟ್ಟಿದ್ದರೆ ಅಗತ್ಯ ಇರುವವರು ಮಾತ್ರ ಬಳಸುತ್ತಿದ್ದರು. ಆದರೆ ಕಾಂಡೋಮ್‌ಗಳ ಪೆಟ್ಟಿಗೆಯನ್ನು ಕಚೇರಿ ಮುಂಭಾಗದಲ್ಲೇ ಹಾಕಿದ್ದರಿಂದ ಕಚೇರಿ ಸಮಯದ ನಂತರ ಕಿಡಿಗೇಡಿಗಳು ಬಂದು ಈ ರೀತಿ ಮಾಡಿದ್ದಾರೆ. ವಿಷಯ ನನ್ನ ಗಮನಕ್ಕೆ ತಂದಿದ್ದೀರಿ. ತಕ್ಷಣಚೇ ಅದನ್ನು ತೆರವುಗೊಳಿಸುತ್ತೇನೆ.
-ವೆಂಕಟೇಶ ನಾಯಕ್, ಪಿಡಿಓ, ಹುಳ್ಕಿಹಾಳ ಗ್ರಾಪಂ

ತಂದೆಯ ಆಸ್ತಿ, ಹಣಕ್ಕಾಗಿ ಮಲತಾಯಿ ಮೇಲೆ ಹಲ್ಲೆ

ವಿಜಯಸಾಕ್ಷಿ ಸುದ್ದಿ, ಗದಗ

ರಸ್ತೆಯ ಪಕ್ಕದಲ್ಲಿ ಆಕಳು ಮೇಯಿಸುತ್ತಿದ್ದ ಮಲತಾಯಿ ಮೇಲೆ ಆಸ್ತಿ ಹಾಗೂ ಹಣ ಕೊಡುವಂತೆ ಜಗಳವಾಡಿ ಯುವಕನೋರ್ವ ಕೊಡಲಿಯಿಂದ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರುದ್ರಾಪುರ ಗ್ರಾಮದ ಬಳಿ ನಡೆದಿದೆ.

ರುದ್ರಾಪುರ ಗ್ರಾಮದ ಯುವಕ ಹನುಮಂತ ದ್ಯಾಮಣ್ಣ ಮುತಾರಿ ಎಂಬಾತ ಕಲ್ಲಿಗನೂರು ರಸ್ತೆಯ ಪಕ್ಕದಲ್ಲಿ ಆಕಳು ಮೇಯಿಸುತ್ತಿದ್ದ ಮಲತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಾಡಿ, ನನ್ನ ತಂದೆಯ ಆಸ್ತಿ ಹಾಗೂ ಹಣ ಕೊಡುವಂತೆ ಏಕಾಏಕಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನಕಲಿ ಬಿಲ್ ಗಾಗಿ ಗ್ರಾ.ಪಂ. ಅಧ್ಯಕ್ಷೆ ಮೇಲೆ ಹಲ್ಲೆ

ವಿಜಯಸಾಕ್ಷಿ ಸುದ್ದಿ, ಗದಗ

ಒಂದು ದನದ ದೊಡ್ಡಿ ನಿರ್ಮಾಣ ಮಾಡಿ ಎರಡು ಬಿಲ್ ಮಾಡಿ ಕೊಡುವಂತೆ ಒತ್ತಾಯಿಸಿ ಪದೇ ಪದೇ ಗ್ರಾಮ ಪಂಚಾಯತಿ ನೌಕರರಿಗೆ, ಸಿಬ್ಬಂದಿಯ ನೌಕರಿಗೆ ಅಡ್ಡಿಪಡಿಸುತ್ತಾ, ಇಲ್ಲಸಲ್ಲದ ಮಾಹಿತಿ ಕೇಳಿದ್ದ ಮಹಿಳೆಯೊಬ್ಬರು ಆಕ್ರೋಶಗೊಂಡು ಗ್ರಾ.ಪಂ. ಅಧ್ಯಕ್ಷೆ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಮನವ್ವ ದುರಗಪ್ಪ ಬಂಡಿವಡ್ಡರ್ ಹಲ್ಲೆಗೊಳಗಾದ ಮಹಿಳೆ. ಕಲಕೇರಿ ಗ್ರಾಮದ ಶಾಂತವ್ವ ಎಂಬುವವರು ಒಂದು ದನದ ದೊಡ್ಡಿ ನಿರ್ಮಿಸಿಕೊಂಡಿದ್ದರು. ಆ ಬಿಲ್‌ಗಾಗಿ ಗ್ರಾ.ಪಂ. ಕಾರ್ಯಾಲಯಕ್ಕೆ ಅಲೆದಾಡಿ ಸುಸ್ತಾಗಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ನಿರ್ಮಾಣ ಮಾಡಿದ್ದು ಒಂದು ದನದ ದೊಡ್ಡಿ. ಆದರೆ ಎರಡು ಬಿಲ್ ಮಾಡಿ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಬಿಲ್ ಮಾಡಿ ಕೊಡದ ನೌಕರರಿಗೆ ಇಲ್ಲಸಲ್ಲದ ಮಾಹಿತಿ ಕೇಳಿದ್ದಾರೆ ಅನ್ನುವ ಮಾಹಿತಿ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಅವರು ಕೊಟ್ಟಿರುವ ದೂರಿನಲ್ಲಿದೆ.

ಇಷ್ಟಕ್ಕೆ ಸುಮ್ಮನಾಗದ ಶಾಂತವ್ವ, ತಮ್ಮ ಮನೆ ಮುಂದೆ ಹಾದು ಹೋಗುತ್ತಿದ್ದ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ; ಅವಕಾಶ ಕೈ ತಪ್ಪುವ ಭೀತಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜಿಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ ಸರಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ.

ಆದರೆ ವಯೋಮಿತಿ ಮೀರಿರುವ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಕರ್ನಾಟಕ ಸರಕಾರ ಹೋರಾಡಿಸಿರುವ ಅಧಿಸೂಚನೆ ಪ್ರಕಾರ SC=45, ST=45, OBC=43, GM=40 ವಯೋಮಿತಿ ಇದೆ. ಒಂದೂವರೆ ವರ್ಷದ ಹಿಂದೆಯೇ ಸರಕಾರ ನೇಮಕಾತಿ ಪ್ರಕ್ರಿಯೆ ನಡೆಸಿದ್ದರೆ ಈಗ ವಯಸು ಮೀರಿದವರು ಸಹ ಸಹಾಯಕ ಪ್ರಾಧ್ಯಪಕ ಹುದ್ದೆಗೆ ಅರ್ಹರಾಗುತ್ತಿದ್ದರು.

ಕೋವಿಡ್-19 ಕಾರಣದಿಂದ ಮತ್ತು ಸರಕಾರದ ವಿಳಂಬ ಧೋರಣೆಯಿಂದಾಗಿ ಸಹಾಯಕ ಪ್ರಾಧ್ಯಪಕ ಹುದ್ದೆಯ ಆಕಾಂಕ್ಷಿಗಳಾಗಿರುವವರು ಅರ್ಹತೆಯನ್ನು ಕಳೆದುಕೊಳ್ಳುವಂತಾಗಿದೆ. ವಯಸ್ಸು ಮೀರಿದವರು ಸಹಾಯಕ ಪ್ರಾಧ್ಯಪಕರ ಹುದ್ದೆಯ ಕನಸಿಗೆ ಸರಕಾರವೇ ತಣ್ಣೀರು ಎರಚಿದೆ ಎಂದು ಹುದ್ದೆ ಆಕಾಂಕ್ಷಿಯೊಬ್ಬರು ಆಳಲು ತೋಡಿಕೊಂಡಿದ್ದಾರೆ.

ವಯಸ್ಸು ಮೀರಿದ NET, SET ಪಾಸಾಗಿರುವ ಮತ್ತು PhD ಹೊಂದಿದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೂ ವಂಚಿತರಾಗುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಒಂದೂವರೆ ವರ್ಷದ ಹಿಂದೆಯೇ ನೇಮಕಾತಿ ಪ್ರಕ್ರಿಯೆ ಹೊರಡಿಸದೇ ಇದ್ದಿದ್ದರಿಂದ ವಯಸ್ಸು ಮೀರಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿಲ್ಲ.

ಆದ್ದರಿಂದ SC=45, ST=45, OBC=43, GM=40 ಯವರಿಗೆ ವಯಸ್ಸು ನಿಗದಿಪಡಿಸಿರುವ ಮಿತಿಯನ್ನು ಬದಲಾಯಿಸಿ ಅದನ್ನು 50 ವರ್ಷಕ್ಕೆ ಹೆಚ್ಚಿಸುವಂತೆ ಅಭ್ಯರ್ಥಿಗಳ ಒತ್ತಾಯವಾಗಿದೆ.

45 ವರ್ಷ ವಯಸ್ಸು ಮೀರಿದ NET, SET ಪಾಸಾಗಿರುವ ಮತ್ತು PhD ಹೊಂದಿರುವ ಎಲ್ಲ ಅಭ್ಯರ್ಥಿಗಳಿಗೆ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕಾಗಿದೆ. ಆ ಮೂಲಕ ಈ ಅಭ್ಯರ್ಥಿಗಳ ಹಿತ ಕಾಪಾಡಲು ವಯಸ್ಸು ಮಿತಿಯನ್ನು ಸಡಿಲುಗೊಳಿಸಲು ಆಕಾಂಕ್ಷಿಗಳು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅಧಿಕಾರಿಗಳೇ ಬೆಳೆ ಸಮೀಕ್ಷೆ ಮಾಡಲು ರೈತ ಸಂಘ ಆಗ್ರಹ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ಕೊಪ್ಪಳ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸುತ್ತಿರುವುದು ಸರಿಯಲ್ಲ. ರೈತರು ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ನಿರ್ಧಾರದ ಪ್ರಕಾರ ರೈತರು ಬೆಳೆ ಸಮೀಕ್ಷೆ ಮಾಡುವುದು ಸರಿ ಇರಬಹುದು. ಆದರೆ  ಜಿಪಿಎಸ್ ಮಾಡುವಾಗ ಸರ್ವೆ ನಂಬರಿನ ಉತಾರ ಅಲ್ಲಾ ಎಂದು ಜಿಪಿಎಸ್ ಹೇಳುತ್ತದೆ.

ನೂರಾರು ಮೀಟರ್ ದೂರದಲ್ಲಿ ಜಿಪಿಎಸ್ ತೊರಿಸಿದರೆ ರೈತರು ತಮ್ಮ ಜಮೀನು ಬಿಟ್ಟು ಮತ್ತೆ ಎಲ್ಲಿಗೆ ಹೋಗಿ ಜಿಪಿಎಸ್ ಮಾಡಬೇಕು? ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್. ನಾರಾಯಣರೆಡ್ಡಿಯವರ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರು ಪ್ರಶ್ನಿಸಿದ್ದಾರೆ.

ಜಿಲ್ಲೆಯ ಕೆಲವು ತಾಲೂಕಿನ ಹಳ್ಳಿಗಳ ರೈತರು ಈ ಬೆಳೆ ಸಮೀಕ್ಷೆ ಮಾಡುವಲ್ಲಿ ಸರ್ಕಾರದ ಸೌಲಭ್ಯ ದೊರಕದೆ ರೈತರು ನೊಂದು ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳೇ ಸಮೀಕ್ಷಾ ಕಾರ್ಯ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಮದುವೆಗೆ ಬಂದು ಆಶೀರ್ವದಿಸಿ ಎಂದ ಸಾಹಸ ಸಿಂಹ!!

-ಡಾ.ವಿಷ್ಣುಗೆ ಇಡೀ ಕುಟುಂಬವೇ ಫ್ಯಾನ್ಸ್

-ಅಭಿಮಾನಿ ಕುಟುಂಬದ ವಿಭಿನ್ನ ಮದುವೆ ಆಮಂತ್ರಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವ್ರು, ಮಠಾಧೀಶರ, ವಧು-ವರರ ಹಾಗೂ ಕೆಲವೊಮ್ಮೆ ಕುಟುಂಬದವರ ಭಾವಚಿತ್ರ ಮುದ್ರಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ, ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಮುದ್ರಿಸಿ, ಅವರು ಅಭಿನಯಿಸಿದ ಚಿತ್ರಗಳ ಹೆಸರುಗಳ ಮೂಲಕವೇ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದೆ.

ಜಿಲ್ಲೆಯ ಇರಕಲ್‌ಗಡಾದ ರಾಮಣ್ಣ ಕಾಟ್ರಳ್ಳಿ‌ ಕುಟುಂಬ ಡಾ.ವಿಷ್ಣುವರ್ಧನ್ ಅವರ ಮೇಲೆ ಅಪಾರ ಅಭಿಮಾನ ಹೊಂದಿದೆ. ರಾಮಣ್ಣ ಕಾಟ್ರಳ್ಳಿಯವರ ಶ್ರೀಮತಿ ಹುಲಿಗೆಮ್ಮ ಅವರು ವಿಷ್ಣುದಾದಾಗೆ ದೊಡ್ಡ ಫ್ಯಾನ್. ಮದುವೆ ಗಂಡು ಶರಣಪ್ಪ ಚಿಕ್ಕಂದಿನ ದಿನಗಳಲ್ಲಿ ವಿಷ್ಣು ಅಭಿನಯದ ಯಜಮಾನ ಸಿನಿಮಾ ನೋಡಿ ಆವತ್ತಿನಿಂದ ಇವತ್ತಿನವರೆಗೂ ವಿಷ್ಣು ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ.

ಜುಲೈ 4ರಂದು ಇರಕಲ್‌ಗಡಾದಲ್ಲಿ ಮನೆ ಮುಂದೆಯೇ ರಾಮಣ್ಣ ಕಾಟ್ರಳ್ಳಿಯವರು ತಮ್ಮ ಪುತ್ರರಾದ ಶರಣಪ್ಪ ಮತ್ತು ಮಂಜುನಾಥ ಅವರ ಮದುವೆ ಹಮ್ಮಿಕೊಂಡಿದ್ದು ಬಂಧುಮಿತ್ರರನ್ನು ಆಹ್ವಾನಿಸಲು ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಶ್ರೀಗಳ, ದೇವರ ಮೂರ್ತಿಗಳ ಚಿತ್ರದ ಜೊತೆ ಡಾ.ವಿಷ್ಣುವರ್ಧನ್ ಫೋಟೋ ಮುದ್ರಿಸಿ, ಅವರ ಸಿನಿಮಾ ಹೆಸರುಗಳ ಮೂಲಕವೇ ಮದುವೆಗೆ ಆಹ್ವಾನ ನೀಡಿದ್ದು ವಿಭಿನ್ನವಾಗಿದೆ.

ಈ ಮೂಲಕ ವಿಷ್ಣುದಾದಾ ದೈಹಿಕವಾಗಿ ಜೊತೆಗಿರದಿದ್ದರೂ ಅಭಿಮಾನದ ರೂಪದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಆಹ್ವಾನ ಪತ್ರಿಕೆ ಸಾಕ್ಷಿಯಾಗಿದೆ.

ನೂತನ ವಧು-ವರರಿಗೆ ಶುಭವಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.

ಕೃಷಿ‌ ಹೊಂಡಕ್ಕೆ ಬಿದ್ದು ಇಬ್ಬರು ‌ಮಕ್ಕಳ‌ ಸಾವು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೃಷಿ ಹೊಂಡದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ‌ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕಿಯರನ್ನು
ಕವಿತಾ(10), ಸಂಜನಾ‌(9) ಎಂದು ಗುರುತಿಸಲಾಗಿದೆ.
ಹುಲಿಹೈದರ ‌ಗ್ರಾಮ‌ ವ್ಯಾಪ್ತಿಯ‌ ವಿಶ್ವನಾಥ‌ ರೆಡ್ಡಿ ‌ಅವರ ಹೊಲದಲ್ಲಿ‌‌ ಘಟನೆ ನಡೆದಿದ್ದು,
ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಮೃತ ಬಾಲಕಿಯರ ಪಾಲಕರು ಬಂದಿದ್ದರು ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ
ಮುಗಿಲು ‌ಮುಟ್ಟಿತ್ತು.
ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕೃಷಿ‌ ಹೊಂಡಕ್ಕೆ ಬಿದ್ದು ಇಬ್ಬರು ‌ಮಕ್ಕಳ‌ ಸಾವು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೃಷಿ ಹೊಂಡದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ‌ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.

ಮೃತ ಬಾಲಕಿಯರನ್ನು
ಕವಿತಾ(10), ಸಂಜನಾ‌(9) ಎಂದು ಗುರುತಿಸಲಾಗಿದೆ.
ಹುಲಿಹೈದರ ‌ಗ್ರಾಮ‌ ವ್ಯಾಪ್ತಿಯ‌ ವಿಶ್ವನಾಥ‌ ರೆಡ್ಡಿ ‌ಅವರ ಹೊಲದಲ್ಲಿ‌‌ ಘಟನೆ ನಡೆದಿದ್ದು,
ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಮೃತ ಬಾಲಕಿಯರ ಪಾಲಕರು ಬಂದಿದ್ದರು ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ
ಮುಗಿಲು ‌ಮುಟ್ಟಿತ್ತು.

ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮಗುವಿನ ಗಂಟಲಲ್ಲಿ ಸಿಲುಕಿದ ಮೆಂತಾಲ್ ಬಾಕ್ಸ್!!

0

ಯಶಸ್ವಿಯಾಗಿ ಹೊರತೆಗೆದ ವೈದ್ಯರು

ಜಿಲ್ಲಾಸ್ಪತ್ರೆ ವೈದ್ಯರಿಗೆ ಕೃತಜ್ಞತೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ರೈತ ನಿಂಗಪ್ಪ ಗಾಣದಾಳ ಅವರ ಎಂಟು ತಿಂಗಳ ಕೂಸು ಮಹಾಂತೇಶ ಮನೆಯಲ್ಲಿ ಆಟವಾಡುವಾಗ ನೆಲದಲ್ಲಿ ಬಿದ್ದಿದ್ದ ಮೆಂತಾಲ್ ಬಾಕ್ಸ್ ಬಾಯಲ್ಲಿ ಇಟ್ಟುಕೊಂಡು ನುಂಗಲು ಯತ್ನಿಸಿದೆ‌. ಮೆಂತಾಲ್ ಡಬ್ಬಿ ಪುಣ್ಯಕ್ಕೆ ಹೊಟ್ಟೆ ಸೇರದೆ ಗಂಟಲಲ್ಲಿ ಸಿಲುಕಿದೆ.

ಮಗು ಡಬ್ಬಿ‌ ಬಾಯಲ್ಲಿಟ್ಟುಕೊಳ್ಳುವುದನ್ನು ನೋಡಿದ ಮಗುವಿನ ಅಣ್ಣ, ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ. ಮನೆಗೆಲಸ ಬಿಟ್ಟು ಬಂದ ತಾಯಿ ಗಂಟಲಿನಿಂದ ಡಬ್ಬಿ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಆಗಲಿಲ್ಲ. ಕೊನೆಗೆ ಮಗುವಿನ ರೋಧನ ಕಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯ ಗಂಟಲು ತಜ್ಞ ಡಾ.ಮಲ್ಲಿಕಾರ್ಜುನ ಸ್ಕ್ಯಾನ್ ಮಾಡಿ ಗಂಟಲಲ್ಲಿ ಪುಟ್ಟ ಡಬ್ಬಿ‌ ಇರುವುದನ್ನು ಖಚಿತ ಪಡಿಸಿಕೊಂಡು ಲಘು ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಮೆಂತಾಲ್ ಡಬ್ಬಿಯನ್ನು ಮಗುವಿನ ಗಂಟಲಿನಿಂದ ಹೊರ ತೆಗೆದಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿದ್ದು ಜುಲೈ 1ರಂದು.

“ಸ್ವಲ್ಪ ತಡವಾಗಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಇತ್ತು. ಮಗುವಿಗೆ ಜೊಲ್ಲು ನುಂಗಲು ಆಗದ ಸ್ಥಿತಿ ಎದುರಿಸುತ್ತಿತ್ತು. ಧ್ವನಿಯೂ ಬರುತ್ತಿರಲಿಲ್ಲ. ಒಟ್ಟಾರೆ ತನ್ನ ನೋವನ್ನ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ‌ ಮಗು ಇತ್ತು. ಆಸ್ಪತ್ರೆಗೆ ಬಂದು ವಿಷಯ ತಿಳಿಸಿದ ಹದಿನೈದು ನಿಮಿಷದಲ್ಲಿ ಮಗುವಿನ ಗಂಟಲಲ್ಲಿದ್ದ ಪ್ಲಾಸ್ಟಿಕ್ ಡಬ್ಬಿಯನ್ನು ಹೊರತೆಗೆದಿದ್ದೇವೆ. ಪೋಷಕರು ಗಾಬರಿಯಲ್ಲಿ ಗದಗ, ಹುಬ್ಬಳ್ಳಿಗೆ ಹೋಗಲು ಯತ್ನಿಸಿದ್ದರೆ ಸಮಯ ಮೀರಿ ಹೋಗುತ್ತಿತ್ತು. ಜೊತೆಗೂ ಕೊಪ್ಪಳ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಯಿತು.”
-ಡಾ.ಮಲ್ಲಿಕಾರ್ಜುನ, ಕಿವಿ, ಮೂಗು ಹಾಗೂ ಗಂಟಲು ತಜ್ಞ, ಜಿಲ್ಲಾಸ್ಪತ್ರೆ, ಕೊಪ್ಪಳ.

ಹೊಲದಾಗ ಕೆಲಸ ಮಾಡಾಕತ್ತಿದ್ದೆ. ನಮ್ಮ ಹುಡುಗ ಬಂದು ವಿಷಯ ತಿಳಿದ ಕೂಡಲೇ ಗಾಬರಿಯಾಗಿ ಓಡಿ ಬಂದೆ. ತಡ ಮಾಡದನ ಜಿಲ್ಲಾಸ್ಪತ್ರೆಗೆ ಕರಕೊಂಡು ಬಂದೆ. ಇಲ್ಲಿನ ಡಾಕ್ಟರು ನಮ್ಮ ಮಗುವಿನ ಜೀವ ಉಳಿಸಿದ್ರು. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರು‌ ಕಡಮಿನ.
-ನಿಂಗಪ್ಪ ಗಾಣದಾಳ, ರೈತ, ಹುಣಸಿಹಾಳ.

error: Content is protected !!