Home Blog Page 3095

ರೈತರ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯುನಿಸ್ಟ್ ರ ಕೈವಾಡವಿದೆ; ಕೃಷಿ ಕಾಯ್ದೆ ಸಮರ್ಥಿಸಿದ ಎಸ್.ಎಲ್.ಬೈರಪ್ಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಬೆಂಬಲಿಸಿದರು.

ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವವರು ಕೇವಲ ಪಂಜಾಬಿ ರೈತರು ಮಾತ್ರ.
ಹಾಗಾಗಿ, ಅವರು ಇಡೀ ದೇಶದ ರೈತರನ್ನು ಪ್ರತಿನಿಧಿಸಿದಂತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೃಷಿ ಮಸೂದೆಯಲ್ಲಿ ರೈತರಿಗೆ ಅನುಕೂಲಕರ‌ವಾಗುವ ಅಂಶಗಳಿವೆ. ಈ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯುನಿಸ್ಟ್‌ ರ ಕೈವಾಡವಿದೆ. ಅವರಿಗೆ ಪ್ರಧಾನಿ‌ ಮೋದಿಯವರ ಜನಪ್ರಿಯತೆ ಸಹಿಸಲಾಗುತ್ತಿಲ್ಲ ಎಂದು ಬೈರಪ್ಪ ಕುಟುಕಿದರು.

ಗೋವಿಗೂ ನಮಗೂ ತಾಯಿ ಮಕ್ಕಳ ಸಂಬಂಧವಿದೆ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಎಲ್ಲರೂ ಗೋವಿನ ಹಾಲು ಕುಡಿದೇ ಬೆಳೆದಿದ್ದೇವೆ.
ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತವೆಂದು ಹೇಳಲಾಗುವುದೇ ಎಂದು ಪ್ರಶ್ನಿಸಿದ ಅವರು, ಗೋವು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದನ್ನು ಸಮರ್ಥಿಸಿಕೊಂಡರು.

ಹನುಮಂತ ಗುಲಾಮಗಿರಿಯ ಸಂಕೇತ. ಮಾಜಿ ಸಿದ್ದರಾಮಯ್ಯ ಹನುಮ‌ ಜಯಂತಿಯನ್ನೇ‌ ಪ್ರಶ್ನೆ ಮಾಡಿದ್ದಾರೆ. ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ‌ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ
ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜ.14 ರಂದು ಬೃಹತ್ ಪಾದಯಾತ್ರೆ: ಜಯ ಮೃತ್ಯುಂಜಯ ಸ್ವಾಮೀಜಿ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2’A’ ಮೀಸಲಾತಿ ನೀಡುವಂತೆ
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಟಿ‌ ನಡೆಸಿ ಈ ಬಗ್ಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2’A’ ಮೀಸಲಾತಿ ನೀಡುವಂತೆ ಮತ್ತು ಕೇಂದ್ರ ಸರ್ಕಾರದ ಒಬಿಸಿ ಸೇರ್ಪಡೆಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲ ಎಂದರು.

ಈ ನಿಟ್ಟಿನಲ್ಲಿ ‘ಪಂಚಮಸಾಲಿ ನಡೆ, ವಿಧಾನ ಸೌಧದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜ.14 ರಂದು ಕೂಡಲ ಸಂಗಮದಿಂದ
ಇಳಕಲ್, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹರಿಹರ, ತುಮಕೂರು ಮಾರ್ಗವಾಗಿ ಬೆಂಗಳೂರುವರೆಗೆ ಸುಮಾರು 1 ಲಕ್ಷ ಜನರು ಪಾದಯಾತ್ರೆ ಮಾಡಿ ಬಜೆಟ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮಾಜದಿಂದ ಪಂಚ ಲಕ್ಷ ಹೆಜ್ಜೆಯ ಮೂಲಕ ಹೋರಾಟ ಮಾಡುತ್ತೇವೆ. ಭೂಮಿ ತಾಯಿಯ ಮಕ್ಕಳ ನೋವು, ಸಂಕಟವನ್ನು ರಾಜ್ಯದ ದೊರೆಯಾಗಿರುವ ಮುಖ್ಯಮಂತ್ರಿ ಅವರಿಗೆ ತೋರಿಸುತ್ತೇವೆ ಎಂದು‌ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮನೆ ಮೇಲೆ ಮದುವೆ ದಿಬ್ಬಣದ ಬಸ್ ಪಲ್ಟಿ; 8 ಜನರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಮನೆ ಮೇಲೆ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಪಲ್ಟಿಯಾಗಿ
ಬಸ್ ನಲ್ಲಿದ್ದ ಎಂಟು ಜನ ದುರ್ಮರಣ ಹೊಂದಿರುವ ಘಟನೆ
ಕರ್ನಾಟಕ ಕೇರಳ ಗಡಿಭಾಗದ ಕಾಸರಗೋಡಿನ ಕಲ್ಲಪಳ್ಳಿ ಬಳಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಪುತ್ತೂರಿನಿಂದ ಕೊಡಗಿನ ಕರಿಕೆಯಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಕೇರಳದ ಪಾಣತ್ತೂರು ಮೂಲಕ ಹೊರಟಿದ್ದ ಖಾಸಗಿ ಬಸ್ ನಲ್ಲಿ
ಒಟ್ಟು 63 ಜನ ಪ್ರಯಾಣಿಕರಿದ್ದರು.

ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

ಬಸ್ ಪಲ್ಟಿಯಾಗಿರುವ ಪರಿಣಾಮದಿಂದಾಗಿ ಬಸ್ ನಲ್ಲಿದ್ದ ಹತ್ತುಕ್ಕೂ ಹೆಚ್ಚಿನ ಜನರ ಪರಿಸ್ಥಿತಿ ಗಂಭೀರವಾಗಿದ್ದು, ಮೂವತ್ತುಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

ಗಾಯಗೊಂಡವರನ್ನು ಮಂಗಳೂರು ಹಾಗೂ ಕಾಸರಗೋಡಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯನ್ ತನಿಖೆಗೆ ಆದೇಶಸಿದ್ದಾರೆ.

ಮನೆ ಮೇಲೆ ಮದುವೆ ದಿಬ್ಬಣದ ಬಸ್ ಪಲ್ಟಿ; ಐವರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಮನೆ ಮೇಲೆ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಪಲ್ಟಿಯಾಗಿ
ಬಸ್ ನಲ್ಲಿದ್ದ ಐವರು ಜನ ದುರ್ಮರಣ ಹೊಂದಿರುವ ಘಟನೆ
ಕರ್ನಾಟಕ ಕೇರಳ ಗಡಿಭಾಗದ ಕಾಸರಗೋಡಿನ ಕಲ್ಲಪಳ್ಳಿ ಬಳಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಪುತ್ತೂರಿನಿಂದ ಕೊಡಗಿನ ಕರಿಕೆಯಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಕೇರಳದ ಪಾಣತ್ತೂರು ಮೂಲಕ ಹೊರಟಿದ್ದ ಖಾಸಗಿ ಬಸ್ ನಲ್ಲಿ
ಒಟ್ಟು 63 ಜನ ಪ್ರಯಾಣಿಕರಿದ್ದರು.

ಬಸ್ ಪಲ್ಟಿಯಾಗಿರುವ ಪರಿಣಾಮದಿಂದಾಗಿ ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಂಚಾಯಿತಿಯ ನೂತನ ಸದಸ್ಯ ತಾಳಿಕೋಟಿ ಪೊಲೀಸರ ಋಣ ತೀರಿಸಿದನೇ ?

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯನೊಬ್ಬ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಕಾನ್ಸ್ಟೇಬಲ್ಗೆ ಸನ್ಮಾನ ಮಾಡಿರುವ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಸದಸ್ಯನ ಸನ್ಮಾನಕ್ಕೆ ಪ್ರತಿಯಾಗಿ ಪಿಎಸ್​ಐ ಸಹ ಸಿಹಿ ತಿನ್ನಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಋಣ ತೀರಿಸಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಘಟನೆಯ ವಿವರಣೆಗೆ ಬರುವುದಾರೆ, ತಾಳಿಕೋಟ ತಾಲೂಕಿನ ಬಳವಾಟ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಸನಗೌಡ ಸಾಸನೂರ ಎಂಬುವರು ಗೆಲುವು ಸಾಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಿಎಸ್‌ಐ ಗಂಗೂಬಾಯಿ ಬಿರಾದಾರಗೆ ಠಾಣೆಯಲ್ಲಿ ನೂತನ ಸದಸ್ಯ ತಮ್ಮ ಬೆಂಬಲಿಗರೊಂದಿಗೆ ಸನ್ಮಾನ ಮಾಡಿದರು. ಅಲ್ಲದೆ, ಠಾಣೆಯ ಎದುರು ಪೊಲೀಸ್ ಕಾನ್ಸಟೇಬಲ್ ಶಿವನಗೌಡ ಬಿರಾದಾರಗೂ ಸನ್ಮಾನ ಮಾಡಿದ್ದಾರೆ.

ಇದಾದ ಬಳಿಕ ಸನ್ಮಾನದ ಫೋಟೋಗಳನ್ನು ಬಸವರಾಜ ಭಜಂತ್ರಿ‌ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪಿಎಸ್‌ಐ ಜಿ. ಜಿ. ಬಿರಾದಾರ ಮೇಡಂ ಹಾಗೂ ನಮ್ಮೂರ ಹಿತೈಷಿ ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರರನ್ನು ಭೇಟಿಯಾಗಿ ಚುನಾವಣೆ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ‌ ಮಾಡಲಾಯಿತು ಎಂದು ಫೇಸ್​ಬುಕ್​ನಲ್ಲಿ ಬರೆದು, ಸಂತಸ ವ್ಯಕ್ತಪಡಿಸಲಾಗಿದೆ.

ಗ್ರಾ.ಪಂ ನೂತನ ಸದಸ್ಯ ಬಸವರಾಜಗೆ ಪಿಂಜಾರ ಯುವಕರಿಂದ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿ ಬಸವರಾಜ ಕಟ್ಟಿಮನಿ ಅವರಿಗೆ ಹುಣಸಗಿ ಪಟ್ಟಣದಲ್ಲಿ ಪಿಂಜಾರ ಯುವಕರಿಂದ ಸನ್ಮಾನಿಸಲಾಯಿತು.

ನೂತನ ಸದಸ್ಯ ಬಸವರಾಜ್ ಮಾತನಾಡಿ, ನೀವು ನನಗೆ ಸನ್ಮಾನ ಮಾಡಿದ್ದು ಯಾವ ಕಾಲಕ್ಕೂ ಮರೆಯುವಂತಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.

ಗ್ರಾಮದ ಅಭಿವೃದ್ಧಿಯೇ ನನ್ನ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ಸ್ಪಂದಿಸುತ್ತೆನೆ ಕುಡಿಯುವ ನೀರು, ಚರಂಡಿಯ ವ್ಯವಸ್ಥೆ, ಹೊಸದಾಗಿ ಶೌಚಾಲಯಗಳ ನಿರ್ಮಾಣ, ಗ್ರಾಮದಲ್ಲಿನ ಸಿಸಿ ರಸ್ತೆಗಳ ನಿರ್ಮಾಣ, ಗ್ರಾಮೀಣ ಅಡಿಯಲ್ಲಿ ಬರುವ ನರೇಗ ದಿಂದ ( ಉದ್ಯೋಗ ಖಾತ್ರಿ ) ಅನುದಾನ ಪಡೆದು, ಬೀದಿದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಯುವ ನಾಯಕ ಸೋಪಿಸಾಬ ಡಿ ಸುರಪುರ, ಯುವ ಮುಖಂಡ ಹುಸೇನಸಾಬ ಗಾದಿ, ಸೈಯದ್ ದಾವಲಸಾಬ ಡಿ ಬೆಣ್ಣೂರ, ನಾಗಪ್ಪ ಬೋವಿ, ಸಾಬಣ್ಣ ಮಲಗಲದಿನ್ನಿ ಇತರರು ಉಪಸ್ಥಿತರಿದ್ದರು.

ಜೆಡಿಎಸ್ ಕಾಲಕ್ಕೆ ತಕ್ಕಂತೆ ಬದಲಾಗುತ್ತೆ; ಶಾಸಕ ದೇವೇಗೌಡ ಟೀಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕಾಲ ಚಕ್ರ ಉರುಳುತ್ತಾ ಇರುತ್ತೆ, ಆ‌ ಸಮಯಕ್ಕೆ ಏನಾಗಬೇಕೋ‌ ಅದು‌ ಆಗುತ್ತೆ ಎಂದು ಜೆಡಿಎಸ್ ಕಾಲಕಾಲಕ್ಕೆ ಬದಲಾವಣೆ ಆಗುತ್ತದೆ ಎಂದು ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.

ಎನ್‌ಡಿಎ ಜೊತೆ ಜೆಡಿಎಸ್‌ ಕೈ ಜೋಡಿಸುವ ವಿಚಾರವಾಗಿ
ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಲ ಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತೆ.
ಹಿಂದೆ ಧರಂಸಿಂಗ್ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ರು. ಕುಮಾರಸ್ವಾಮಿ ಸಿಎಂ ಆದಾಗ ಯಡಿಯೂರಪ್ಪ ಡಿಸಿಎಂ ಆಗಿದ್ರು. 2018 ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿರುವುದನ್ನು ನೆನಪಿಸಿದರು.

ಹೊಸ ವರ್ಷದಲ್ಲಿ ನನ್ನ ರಾಜಕೀಯ ಜೀವನದಲ್ಲಿ ಏನು ಬದಲಾವಣೆ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. 2023ಕ್ಕೆ ಬದಲಾವಣೆ ಆಗಬಹುದು ಎಂದರು.

ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು‌ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನನ್ನು ಕೇಳಿಲ್ಲ. ಈಗ ನಾನು ಉಸ್ತುವಾರಿ ಸಚಿವನಲ್ಲ. ನನ್ನ ಕೇಳ್ತಾರಾ? ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.

ಕೇಂದ್ರ ಸಚಿವ ಡಿ ವಿ ಸದಾನಂದಗೌಡರಿಗೆ ಫಿಟ್ಸ್: ಮೂರ್ಚೆ ಹೋದ ಸಚಿವ ಆಸ್ಪತ್ರೆಗೆ ಶಿಪ್ಟ್

0

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ: ಕೇಂದ್ರ ಸಚಿವ ಸದಾನಂದಗೌಡರಿಗೆ ಫಿಟ್ಸ್ ಬಂದು ಮೂರ್ಚೆ ಹೋದ ಘಟನೆ ಇಂದಿಲ್ಲಿ ನಡೆದಿದೆ.

ನಗರದ ನವೀನ್ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದ್ದು, ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಚಿತ್ರದುರ್ಗಕ್ಕೆ ಬಂದಿದ್ದರು.

ಕಾರಿನಿಂದ ಇಳಿಯುತ್ತಿದ್ದ ವೇಳೆ ಪಿಟ್ಸ್ ಬಂದು ಮೂರ್ಚೆಹೋದ ಸದಾನಂದಗೌಡರನ್ನು ಅವರ ಅಂಗರಕ್ಷಕರು ಕೂಡಲೇ ಎಸ್ಕಾರ್ಟ್ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ದರು.

ಬಸವೇಶ್ವರ ಆಸ್ಪತ್ರೆಯ ವೈದ್ಯರು, ಸದಾನಂದಗೌಡರಿಗೆ ಚಿಕಿತ್ಸೆ ನೀಡುತ್ತಿದ್ದು, ಸದ್ಯ ಸಚಿವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ದೊರೆತಿದೆ.

ಕೊರೊನಾ ಲಸಿಕೆ ಬಳಕೆಗೆ DCGI ಅನುಮತಿ; ಜ.15 ರೊಳಗೆ ಜನರಿಗೆ ಲಸಿಕೆ ವಿತರಣೆ ಸಾಧ್ಯತೆ!

ವಿಜಯಸಾಕ್ಷಿ ಸುದ್ದಿ, ದೆಹಲಿ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಸಿಕ್ಕಿದ್ದು, ಸ್ವದೇಶಿ ಮೂಲದ ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಎಂಬ ಎರಡು ಕೊರೊನಾ ಲಸಿಕೆಗಳ ಷರತ್ತು ಬದ್ಧ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಹತ್ವದ ಘೋಷಣೆ ನೀಡಿದ DCGI ಅಧ್ಯಕ್ಷ ವಿ.ಜಿ.ಸೋಮಾನಿ ಅವರು, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದು.ರೂಪಾಂತರಿ ಕೊರೊನಾ ವೈರಸ್ ಗೂ ಈ ಲಸಿಕೆಗಳು ಪರಿಣಾಮಕಾರಿ ಆಗಿದ್ದು,18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ತಿಳಿಸಿದರು.

ಇವೆರಡೂ ಲಸಿಕೆಗಳನ್ನು ಸುಮಾರು 28,000 ಜನರ ಮೇಲೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಎರಡು ಡೋಸ್ ವಿತರಿಸಲು ಸಲಹೆ ನೀಡಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿ ಜ.15 ರೊಳಗಾಗಿ ಲಸಿಕೆ ವಿತರಿಸುವ ಸಾಧ್ಯತೆಗಳಿವೆ.

ಬ್ರಿಟನ್ನಿನ ಆಕ್ಸಪರ್ಡ್ ವಿಶ್ವವಿದ್ಯಾಲಯ ಹಾಗೂ ಫಾರ್ಮಾ ದೈತ್ಯ ಸಂಸ್ಥೆಯಾದ ಆಸ್ಟ್ರಾಜೆನಿಕಾ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿವೆ. ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿದ್ದು, ಸಂಪೂರ್ಣ ಸ್ವದೇಶಿ ಲಸಿಕೆಯಾಗಿದೆ ಕೋವಿಶಿಲ್ಡ್ ಲಸಿಕೆಯನ್ನು ಆಕ್ಷಪರ್ಡ್ ವಿವಿಯ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.

ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ. ಲಸಿಕೆ ಸಂಶೋಧನೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ(ಜ.೨) ರಂದು ದೇಶದ ಎಲ್ಲಾ ರಾಜ್ಯಗಳ ಎರಡೆರಡು ನಗರಗಳಲ್ಲಿ ಲಸಿಕೆಗಳ ಡ್ರೈರನ್ ನಡೆಸಲಾಗಿತ್ತು.

ಆಕ್ಸ್‌ಫರ್ಡ್ ಇನ್ಸ್ಟಿಟ್ಯೂಟ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಶಿಲ್ಡ್ ಲಸಿಕೆಯ ಅಧ್ಯಯನ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೋವಿಡ್ ಸಂಕಷ್ಟವಿರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಪಾಕ್ ಪರ ಬಿಜೆಪಿ ಘೋಷಣೆ ಆರೋಪ; ವಿಡಿಯೋ ಬಿಡುಗಡೆ ಮಾಡಿದ SDPI

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಮೊನ್ನೆ ನಡೆದ ಗ್ರಾಮ ಪಂಚಾಯತಿ ವಿಜಯೋತ್ಸವದಲ್ಲಿ SDPI ಕಾರ್ಯಕರ್ತರು ಪಾಕಿಸ್ತಾನ
ಪರ ಘೋಷಣೆ ಕೂಗಿದ್ದಾರೆಂದು ಬಿಜೆಪಿ ಆರೋಪಿಸಿ ರಾದ್ಧಾಂತ ಮಾಡಿತ್ತು. ಆದರೆ ಘೋಷಣೆ ಕೂಗಿದ್ದು ನಾವಲ್ಲ ಬಿಜೆಪಿ ಕಾರ್ಯಕರ್ತ ಎಂದು ಎಸ್ ಡಿಪಿ ಐ ಆರೋಪ ಮಾಡಿದೆ.

ಎಸ್ ಡಿಪಿಐ ಪ್ರಕಾರ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ಕೂಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿರುವ ಯುವಕನನ್ನು ಎಸ್ ಡಿಪಿಐ ನಾಯಕರು ಗುರುತಿಸಿದ್ದಾರೆ.

ಅಲ್ಲದೇ, ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗುತ್ತಿರುವ ಬಿಜೆಪಿ ಕಾರ್ಯಕರ್ತನನ್ನು ಬಂಧಿಸುವಂತೆ ಎಸ್ ಡಿ ಪಿ ಐ ಜಿಲ್ಲಾ, ರಾಷ್ಟ್ರೀಯ ಸಮಿತಿ ನಾಯಕರು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದರಿಂದ ಎಸ್ ಡಿ ಪಿ‌ಐ ಮತ್ತು ಬಿಜೆಪಿ ನಡುವೆ ಸ್ಲೋಗನ್ ಸಮರ ಏರ್ಪಟ್ಟಿದೆ.

ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿದ್ದರು ಈ ನಡುವೆ ಜಿಂದಾಬಾದ್ ಘೋಷಣೆ ತೇಲಿ ಬಂತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.

ಎಸ್ ಡಿ ಪಿ ಐ ಕಾರ್ಯಕರ್ತರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.

error: Content is protected !!