Home Blog Page 3123

ವಿದ್ಯಾರ್ಥಿಗಳಿಗೆ, ನೌಕರರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿ; ಡಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಸಂಸ್ಥೆಯ ವಾಹನ ಚಾಲಕರು ಹಾಗೂ ಸಿಬ್ಬಂದಿಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಕಚೇರಿ ಕೆಲಸಗಳಿಗೆ ಬರುವಂತಹ ನೌಕರರಿಗೆ ಸೂಕ್ತ ಸಮಯದಲ್ಲಿ ಖಾಸಗಿ ವಾಹನ ಬಳಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಾರಿಗೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಸಾರಿಗೆ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಗಿಯುವವರೆಗೆ ತಾತ್ಕಾಲಿಕವಾಗಿ ಖಾಸಗಿ ಟ್ಯಾಕ್ಸಿ, ಕ್ಯಾಬ್ ವಾಹನಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಪ್ರಯಾಣಿಸಲು ಅನುವು ಮಾಡಿಕೊಡಬೇಕು.

ಸಂದರ್ಭೋಚಿತವಾಗಿ ಸಾರ್ವಜನಿಕರಿಗೆ ಹಾಗೂ ವಯೋವೃದ್ಧರಿಗೆ ಪ್ರಯಾಣಿಸಲು ಅಡಚಣೆಯಾಗದಂತೆ ನಿರ್ದಿಷ್ಟಪಡಿಸಿದ ಮಾರ್ಗಗಳಲ್ಲಿ ಖಾಸಗಿ ವಾಹನಗಳು ಸಂಚರಿಸುವಂತೆ ನೋಡಿಕೊಳ್ಳಲು ತಿಳಿಸಿದರು.

ಗರ್ಭಿಣಿಯರು ಹಾಗೂ ವೃದ್ಧರು ಮತ್ತು ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಲ್ಲಿ ಅವರನ್ನು ಗುರುತಿಸಿ ಸೂಕ್ತ ಸಾರಿಗೆ ಸೌಲಭ್ಯವನ್ನು ಒದಗಿಸಬೇಕು. ಹಾಗೂ ಮೂಲಭೂತ ಸೌಕರ್ಯಗಳು ದೊರೆಯುವಂತೆ ಅಧಿಕಾರಿಗಳು ಹಾಗೂ ಪೊಲೀಸ ಇಲಾಖೆ ನಿಗಾ ವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅದೇ ರೀತಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಖಾಸಗಿ ವಾಹನಗಳ ಕಾರ್ಯಾಚರಣೆ ನಡೆಸುವುದನ್ನೇ ಬಂಡವಾಳ ಮಾಡಿಕೊಂಡು ವಿನಾಕಾರಣ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲು ಮಾಡುವುದರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಹಾಗೂ ಜನಸಾಮಾನ್ಯರಿಗೆ ಕನಿಷ್ಟ ದರದಲ್ಲಿ ಸಾರಿಗೆ ಸೌಲಭ್ಯವನ್ನು ಖಾಸಗಿ ವಾಹನಗಳು ಒದಗಿಸಬೇಕೆಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಳಿ ಮಾತನಾಡಿ, ಜಿಲ್ಲೆಯಲ್ಲಿ 100 ರಿಂದ 50 ಆಟೋ ರಿಕ್ಷಾ, 200-250 ಮಾಕ್ಸಿ ಕ್ಯಾಬ್ ಹಾಗೂ 100 ಮೋಟಾರ್ ಕ್ಯಾಬ್‌ಗಳು ವಾಹನಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದ್ಯತೆಯನುಸಾರ ಸಾರ್ವಜನಿಕರಿಗೆ ಸೇವೆ ಒದಗಿಸಲು ಖಾಸಗಿ ವಾಹನಗಳ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಾ.ಕ.ರ.ಸಾ.ಸಂಸ್ಥೆ ಗದಗ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಎಸ್. ಹಿರೇಮಠ ಮಾತನಾಡಿ, ನೌಕರರು ನಡೆಸುತ್ತಿರುವ ಮುಷ್ಕರವನ್ನು ಕೈಬಿಟ್ಟು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಮನವಿ ಮಾಡಲಾಗಿದೆ. ಮುಷ್ಕರದಲ್ಲಿ ಭಾಗವಹಿಸದೇ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಸೂಕ್ತ ಪೋಲೀಸ್ ಬಂದೋಬಸ್ತಿಯನ್ನು ಒದಗಿಸಲಾಗುವುದೆಂದು ತಿಳಿಸಿದೆ.

ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳು ಬಂದು ಸಾರ್ವಜನಿಕರಿಗೆ ಸೇವೆ ಒದಗಿಸಲು ಅವಕಾಶ ನೀಡಲಾಗಿದೆ. ನಿಗದಿತ ಸಮಯಕ್ಕನುಸಾರ ಖಾಸಗಿ ವಾಹನಗಳು ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಲು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್, ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ವಾ. ಕ. ರಾ. ಸ. ಸಾ. ಸಂಸ್ಥೆ ಅಧಿಕಾರಿಗಳು ಇದ್ದರು.

ಕಮಲಾ ಹೆಮ್ಮಿಗೆಯವರ ಹೊಸತಾದ ಸ್ತ್ರೀ‌ ಪ್ರಪಂಚ ವೇ ಆಗಿದೆ ಈ‌ ‘ಮಾಯಾಕನ್ನಡಿ’ ಎಂಬ ಕಥೆಗಳ ಸಂಕಲನ..!

ವಿಜಯಸಾಕ್ಷಿ ವಿಶೇಷ

ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಮನ್ನು ಒಡ್ಡಿಕೊಂಡಿರುವ ಲೇಖಕಿ ಕಮಲಾ ಹಮ್ಮಿಗೆಯವರು ಇದುವರೆಗೆ ಒಂಬತ್ತು ಅನುವಾದಿತ ಕೃತಿಗಳನ್ನು ಕೊಟ್ಟಿದ್ದಾರೆ. ನಾನಾ ಕಾರಣದಿಂದ ಕೇರಳದಲ್ಲಿ ನೆಲೆಸಿದ್ದರಿಂದ ಇವರು ಮಲೆಯಾಳೀ ಸ್ತ್ರೀ ಸಂಕಥನಗಳಿಗೆ ಕೈಹಚ್ಚಿದರು. ‘ಚಿರು ಕಥ’ ಎಂದು ಕರೆಸಿಕೊಳುವ ಸಣ್ಣ ಕಥೆಗಳ ಪ್ರಖರತೆ ಮನಗೊಂಡು ಅತ್ತಿ ಹಣ್ಣಿನಂಥ ಹೆಣ್ಣಿನ ಬದುಕನ್ನು — ಅಂದರೆ ಮೇಲೆ ಆಕರ್ಷಕವಾಗಿದ್ದು ಒಳಗೆ ಅರೆಕೊರೆಯಿದ್ದರೂ — ಬಿಚ್ಚಿಡುವ ಕಥೆಗಳನ್ನಾಧರಸಿಕೊಂಡು ಒಟ್ಟಾರೆ ಕೇರಳ ಕಾಂತೆಯರ ನಿಟ್ಟುಸಿರು, ಕೋಪಗಳನ್ನು ಕನ್ನಡಕ್ಕೆ ತರುವಲ್ಲಿ ಸಾಫಲ್ಯ ಕಂಡಿದ್ದಾರೆ ಕಮಲಾ ಹೆಮ್ಮಿಗೆ…

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ 16 ಕಥೆಗಳಲ್ಲಿ ಕಾಣಬಹುದು. 19 ನೆಯ ಶತಮಾನದಲ್ಲೇ ಭ್ರಮನಿರಸನ (ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು.

ಪೊಲೀಸ್ ವ್ಯವಸ್ಥೆ ವಿರುದ್ಧ ಕಮಲಾದಾಸ್ (ಸುರೈಯ್ಯಾ) ಎತ್ತಿದ ಧ್ವನಿ ‘ಕಲ್ಲ್ಯಾಣಿ’ಯಲ್ಲಿದ್ದರೆ ‘ವತ್ಸಲಾ’ರ ಕಥೆಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆ ಹಾಗೂ ಮಾತೃ ಹೃದಯಗಳ ಚಿತ್ರಣವಿದೆ. ‘ಚರಿತ್ರೆ ಮರುಕಳಿಸಲಿಲ್ಲ’ ದಲ್ಲಿ ‘ರಾಜಲಕ್ಷ್ಮಿ’ಯವರು ಅಳಿಯ ಸಂತಾನ ಕಟ್ಟು (ಮಾತೃ ಮೂಲ ಕುಟುಂಬ) ಕುರಿತು ವಿಡಂಬಿಸಿದ್ದಾರೆ. ‘ಕನ್ಯ’ ‘ಸಲಿಂಗ ಪಶು’ ಕಥೆಗಳಲ್ಲಿ ಇಂದೂ ಮೇನೊನ್ ಹೆಣ್ಣಿನದೇ ವಿಶಿಷ್ಟಾನುಭಗಳನ್ನು ದಟ್ಟವಾಗಿ ಮುಂದಿಟ್ಟಿದ್ದಾರೆ.

ಇ.ಪಿ.ಸುಷ್ಮಾರ ‘ಮಗಳು’ ಧೋರಣೆ ಕಲಾತ್ಮಕತೆ ಎರಡೂ ದ್ರವ್ಯತೆಯಿಂದ ಪರಿಪಕ್ವವಾದ ಕಥೆ. ನಿಜವಾಗಿ ಇದು ಕವಿತೆ!
ಮೂರು ತಲೆಮಾರಿನ ಲೇಖಕರ ಪ್ರಾತಿನಿಧಿಕ ಕಥಾ ಸಂಕಲನ. ಹೀಗೆ ನಮ್ಮೆದುರು ಸುರುಳಿ ಬಿಚ್ಚುತ್ತದೆ.

ಕಮಲಾ ಹೆಮ್ಮಿಗೆಯವರು ಉದ್ದೇಶ ಪೂರ್ವಕವಾಗಿ ‘ಜನಪದ ಕಥೆ’ಯೊಂದನ್ನು ಸೇರಿಸಿ ಕೃತಿಗೆ ಮೆರಗು ನೀಡಿದ್ದಾರೆ. ಒಂದು ಹರೆಯದ ಹುಡಿಗಿಗೆ ರಸಹಗಳಲ್ಲಿರುವು ಹಾಗೂ ಯಾತನೆಗಳಲ್ಲಿ‌ ಯಾವುದು‌ ತೀವ್ರ ಎಂಬ ‘ಯಕ್ಷ ಪ್ರಶ್ನೆ’ ಹಾಕುವ ಸಮಾಜದ ಕ್ರೌರ್ಯವನ್ನು ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ. (ಒಟ್ಟು ಸಂಕಲನದ ‘ಆಶಯ’ವನ್ನಿದು ಪ್ರಕಟಿಸುತ್ತದೆ).

ಇನ್ನು ಮುಖಪುಟ ಹಾಗೂ ಶೀರ್ಷಿಕೆ ಸಂಬಂಧಿಸಿದ ‘ಮಾಯಾಕನ್ನಡಿ’ ಸೊಗಸೇ ಬೇರೆ. ಇಲ್ಲಿ ಕಳ್ಳನೊಬ್ಬನಿಗೆ ಗುಜರಿಯಲ್ಳಿ ಕನ್ನಡಿಯೊಂದು ಸಿಗುತ್ತದೆ. ಅ ಯುವಕ ಮನೆಗೆ ತಂದು ಮುಖ ನೋಡಿಕೊಳ್ಳಲು ಸಹಜವಾಗಿ ಬಯಸಿದರೆ, ಅಲ್ಲಿ ಸೈತಾನನ‌ ಬದಲು ಕ್ರಿಸ್ತನ ಮುಖ ಕಾಣುವುದು!
ನಂತರದ ಕ್ಷಣಗಳಲ್ಲಾತ ಒಳ್ಳೊಳ್ಳೆ ಕಾರ್ಯಗಳನ್ನು ಎಸಗುವನು.

ಕಥೆಯ ಅಂತ್ಯದಲ್ಲಿ ಕನ್ನಡಿಯಲ್ಲಿ ಸೈತಾನನ ಮೊಗವೇ ಕಾಣುವುದು ಬದುಕಿನ ವ್ಯಂಗ್ಯ! ಹಿರಿಯ ಲೇಖಕಿ ‘ಗ್ರೇಸಿ’ಯವರ ಕಥೆ ಇದು. ಫ್ಯಾಂಟಸಿ ಚಿತ್ರಣವಿದೆ. ಹೀಗೆ ಬದುಕಿನ ನಿಸ್ಸಾರತೆ, ಸ್ವಾರಸ್ಯ ಎರಡನ್ನೂ ಕುರಿತ ಕಥೆಗಳು ವಾಚಕರಿಗೆ ಸಂಕಲನ ನೀಡುತ್ತದೆ. ಸ್ತ್ರೀ-ದೃಷ್ಟಿಕೋನ ಇಲ್ಲಿ ಮುಖ್ಯ.
ಕಮಲಾ ಹೆಮ್ಮಿಗೆಯವರು ತುಂಬಾ ಸರಳ ಭಾಷೆಯಲ್ಲಿ ಅಲ್ಲಿಯ ಪರಿಸರ, ನಾಣ್ನುಡಿ, ಮುಂತಾದವುನ್ನು ಸಾರ ಕೆಡದಂತೆ ಒಪ್ಪಳಿಯದಂತೆ ಕನ್ನಡಕ್ಕೆ ತಂದಿದ್ದಾರೆ.

ಉತ್ತರ ಕರ್ನಾಟಕದ (ಉದಾ: ಶಿಕಾವತು) ಹವಣಾದ ಶಬ್ದಗಳೂ ಬಳಕೆಗೊಂಡಿವೆ. ಸಂಕೀರ್ಣವಾದ ವಾಕ್ಯಗಳು ಎಲ್ಲೂ ಇಲ್ಲ.
‘ಪ್ಯಾಸಿ’ವೂ ಒಂದು ಶೃತಿಯಾಗಿ ಸಂಕಲನದುದ್ದಕ್ಕೂ ಇರುವ ಅನುಭವ!
ಇಂಥ ಸ್ತ್ರೀ ‘ಅಸ್ಮಿತೆ’, ಸಂವೇದನೆ, ಕನ್ನಡಕ್ಕೆ ಅತ್ಯವಶ್ಯವಾಗಿತ್ತು. ಅದನ್ನು ಕಮಲಾ ಹೆಮ್ಮಿಗೆಯವರು ಸಮರ್ಥವಾಗಿ ಒದಗಿಸಿದ್ದಾರೆ.

‘ಕೇರಳ ಕಾಂತಾ ಸಮ್ಮಿತ’ದ ಕಥೆಗಳು ಅಘಾತ ತರುವಂತಿದ್ದವು. ಇಲ್ಲಿ ಮಾತ್ರ ‘ಪ್ರಶಾಂತ ಸಮುದ್ರ. ಎರಡೂ ಕಮಲಾ ಹೆಮ್ಮಿಗೆಯವರ ಕೌಶಲ್ಯಕ್ಕೆ ಸಾಕ್ಷಿಯೇ..!
ಮುಖಪುಟ, ಹಿಂಬದಿ ‘ಸಮುದ್ರ ದೇವತೆ’ ಬೆನ್ನುಡಿ ಅರ್ಥಪೂರ್ಣ. ‘ಬ್ಲರ್ಬ್’ ಬರೆದ ಪ್ರಭು.ಅಜಾನೂರು, ಅನುವಾದಕರ ಸರಳ, ಸಂಪನ್ನ ವ್ಯಕಿತ್ವವನ್ನು‌ ಸರಿಯಾಗಿ ಗುರುತಿಸಿದ್ದಾರೆ.

ಇಷ್ಟು ಹೇಳಿ ಈ ಕಮಲಾ ಹೆಮ್ಮಿಗೆಯವರ ಅನುವಾದಿತ ನೂತನ ಕಥೆಗಳ ಬಗೆಗೆ ಸಾಕುಮಾಡುತ್ತೇನೆ.
ಕೆ.ಶಿವು.ಲಕ್ಕಣ್ಣವರ

ಪುಸ್ತಕ ಪ್ರತಿ ಬೇಕಾದವರಿಗೆ ಒಂದು ಸಲಹೆ–

ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ಕೆಳಗಿನಂತೆ ಇದೆ.–
‘ಕಣ್ವ ಪ್ರಕಾಶನ’ ಬೆಂಗಳೂರು
ಮೊಬೈಲ್ ನಂಬರ್– 9845052481

ಪ್ರಯಾಣಿಕರಿಗೆ ತಟ್ಟಿದ ಮುಷ್ಕರ ಬಿಸಿ; 150 ಖಾಸಗಿ ಬಸ್ ಗಳ ವ್ಯವಸ್ಥೆ

0

ವಿಜಯಸಾಕ್ಷಿ ಸುದ್ದಿ,ಗದಗ

ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಬೇಡಿಕೆ ಈಡೇರಿಸುವಂತೆ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ
ಗದಗ ಜಿಲ್ಲಾಕೇಂದ್ರದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಪ್ರಯಾಣಿಕರು ತೆರಳಲು ಮಿನಿ ಬಸ್’ಗಳ ವ್ಯವಸ್ಥೆ‌ ಕಲ್ಪಿಸಲು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಸರ್ಕಾರಿ ಬಸ್ ದರದಲ್ಲೇ ಖಾಸಗಿ ಬಸ್’ಗಳ ಸೇವೆ ಒದಗಿಸಲು ಸಂಸ್ಥೆ ‌ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಇನ್ಸ್‌ಪೆಕ್ಟರ್ ಬಾಲಚಂದ್ರ ತೊದಲಬಾಗಿ ಅವರು ಮಿನಿ ಬಸ್’ಗಳ ಪರಿಶೀಲನೆ ನಡೆಸಿದರು. ಅಲ್ಲದೇ, ಈಗಾಗಲೇ ಜಿಲ್ಲೆಯಾದ್ಯಂತ ಖಾಸಗಿ ಬಸ್’ಗಳು ಸಂಚಾರ ಆರಂಭಿಸಿವೆ.

ಬಸ್’ಗಳಿಲ್ಲದೇ ಪ್ರಯಾಣಿಕರು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಆರ್ ಟಿಒ ಅಧಿಕಾರಿಗಳ ನೇತೃತ್ವದಲ್ಲಿ ಖಾಸಗಿ ಶಾಲೆ ಬಸ್ ಸೇರಿದಂತೆ ಒಟ್ಟು 150 ಖಾಸಗಿ ಬಸ್’ಗಳ ಓಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ; ಬಸ್ ಗಳಿಲ್ಲದೇ ಪರದಾಡಿದ ಗರ್ಭಿಣಿ ಮಹಿಳೆ!

0

ವಿಜಯಸಾಕ್ಷಿ ಸುದ್ದಿ, ಗದಗ

ಆರನೇ ವೇತನ ಜಾರಿ ಅಥವಾ ಸಮನಾಂತರ ವೇತನ ನೀಡುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್’ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ಗದಗ ಕೇಂದ್ರೀಯ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಸ್’ಗಳು, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಇನ್ನು ಬಸ್ ಇಲ್ಲದ್ದಕ್ಕೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನಿಂದ ಗದಗ ನಗರಕ್ಕೆ ಬಂದಿದ್ದ ಗರ್ಭಿಣಿ ಮಹಿಳೆ, ಚಿಕ್ಕಮಗು ಹಾಗೂ ಓರ್ವ ಯುವತಿ ಅಣ್ಣಿಗೇರಿಗೆ ಹೋಗಲು ಬಸ್ ಸಂಚಾರವಿಲ್ಲದೇ ಪರದಾಡಿದರು.
ಬಳಿಕ ಬಸ್ ಇಲ್ಲದ್ದಕ್ಕೆ ಮತ್ತು ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ಕೊಡಲಾಗದೇ ಒಂದೇ ಬೈಕ್’ನಲ್ಲಿ ಮಗು ಸಹಿತ ನಾಲ್ಕು ಜನ ಪ್ರಯಾಣಿಸಿದ ಪ್ರಸಂಗ ನಡೆಯಿತು.

ಬಸ್ ಬಂದಿದ್ದರೂ ಕಾಲೇಜುಗಳು ಪ್ರಾರಂಭ ಇವೆ. ಹೀಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲಾಗದೇ ಗೋಳಾಡಿದರು.
ಜಿಮ್ಸ್ ನರ್ಸಿಂಗ್ ಕಾಲೇಜ್ ಗೆ ಹೋಗಲು ಬಸ್ ಇಲ್ಲದೇ ವಿದ್ಯಾರ್ಥಿಗಳು ಪರದಾಟ ನಡೆಸಿದರು. ವಿದ್ಯಾರ್ಥಿಗಳಿಗಾದರೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು. ಕೆಲ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಕಾರಣ‌ದಿಂದಾಗಿ ಕಾಲೇಜ್’ಗೆ ಹೋಗಲಾಗದೇ ವಾಪಸ್ ಹಾಸ್ಟೆಲ್’ಗೆ ತೆರಳಿದರು.

ನಿನ್ನೆ ರಾತ್ರಿ ತಮ್ಮೂರಿಗೆ ಹೋಗಲು ವಸತಿ ಬಸ್ ಬರದಿದ್ದಕ್ಕೆ ಕೆಲವು ಪ್ರಯಾಣಿಕರು ನಿಲ್ದಾಣದಲ್ಲೇ ಮಲಗಿಕೊಂಡು ದಿನ ಕಳೆದು ಬೆಳಿಗ್ಗೆ ಖಾಸಗಿ ವಾಹನ ಹಿಡಿದು ತಮ್ಮೂರಿಗೆ ತೆರಳುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರ; ಅಧಿಕಾರಿಗಳ ಎಡವಟ್ಟು!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಾರಿಗೆ ನೌಕರರ ಮುಷ್ಕರ ವಿಫಲಗೊಳಿಸುವ ಆತುರದಲ್ಲಿ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ!

ಸಾರಿಗೆ ನೌಕರರು ಗೈರಾಗಿದ್ದರಿಂದ ಲಭ್ಯ ಇರುವ ಬಸ್‌ಗಳ ಜೊತೆಗೆ ಖಾಸಗಿ ವಾಹನಗಳನ್ನು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಲು ಪರವಾನಗಿ ನೀಡಿದ್ದರು.

ಪರವಾನಗಿ ನೀಡುವ ಭರದಲ್ಲಿ ಯಲ್ಲೋ ಬೋರ್ಡ್ ವಾಹನಗಳ ಜೊತೆಗೆ ವೈಟ್ ಬೋರ್ಡ್ ವಾಹನಗಳನ್ನು ಅಧಿಕಾರಿಗಳ ಮುಂದೆಯೇ ನಿಲ್ಲಿಸಲಾಯಿತು.

ಅಧಿಕಾರಿಗಳು ಸಹ ಮುಷ್ಕರ ಹತ್ತಿಕ್ಕುವ ಭರದಲ್ಲಿ ವೈಟ್ ಬೋರ್ಡ್ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಸರ್ಕಾರಿ ಕಟ್ಟಡದಲ್ಲಿ ಫಂಡ್ ರೀತಿಯಲ್ಲಿ ಜೂಜಾಟ: ಬ್ಯಾಂಕ್ ನೌಕರ, ಉದ್ಯಮಿಗಳು ಸೇರಿದಂತೆ ಒಂಬತ್ತು ಜನರ ಬಂಧನ

ಆರೋಪಿತರಿಂದ ಆರು ಬೈಕ್, 89,980 ರೂ. ನಗದು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೈರಾಪೂರ ಗ್ರಾಮದ ಪ್ರವಾಸಿ ಮಂದಿರದ ಕೆಳಗಿನ ಕೊಠಡಿಯಲ್ಲಿ ಬ್ಯಾಂಕ್ ನೌಕರ, ಇಬ್ಬರು ಉದ್ಯಮಿಗಳು ಸೇರಿದಂತೆ ಫಂಡ್ ರೀತಿಯಲ್ಲಿ ಇಸ್ಟೀಟು ಜೂಜಾಟ ಆಡುತ್ತಿದ್ದ ಒಂಬತ್ತು ಜನರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿ ಅವರಿಂದ ಲಕ್ಷಾಂತರ ರೂ, ನಗದು, ಮೊಬೈಲ್, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರಿಂದ 89,980 ರೂ. ನಗದು, 63 ಸಾವಿರ ರೂ. ಮೌಲ್ಯದ ಆರು ಬೈಕ್‌ಗಳು ಸೇರಿ ಒಟ್ಟು 1,61,030 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅದರಲ್ಲಿ ವಿವಿಧ ಕಂಪನಿಯ ಒಟ್ಟು 8050 ರೂ. ಮೌಲ್ಯದ ಒಂಬತ್ತು ಮೊಬೈಲ್ ಫೋನ್‌ಗಳು, ತಲಾ 10 ಸಾವಿರ ರೂ. ಮೌಲ್ಯದ ಬಜಾಜ್, ಹೀರೋ ಎಚ್‌ಎಫ್ ಡಿಲಕ್ಸ್ ಹಾಗೂ ಹೀರೋ ಹೊಂಡಾ ಫ್ಯಾಶನ್ ಪ್ರೋ ಕಂಪನಿಯ ಎರಡು ಬೈಕ್, ಎಂಟು ಸಾವಿರ ರೂ. ಮೌಲ್ಯದ ಜುಪಿಟರ್ ಕಂಪನಿಯ ಸ್ಕೂಟರ್, 15 ಸಾವಿರ ರೂ. ವೆಚ್ಚದ ಹೊಂಡಾ ಶೈನ್ ಕಂಪನಿಯ ಬೈಕ್ ಸೇರಿ ಆರು ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಸ್ಟೀಟು ಜೂಜಾಟ ಆಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದ ಶಿವಪ್ಪ ಸಂಗಪ್ಪ ರಗಟಿ, ಗಜೇಂದ್ರಗಡ ತಾಲೂಕಿನ ಜಿಗೇರಿ ನಿವಾಸಿ ಮುತ್ತಪ್ಪ ಮಲ್ಲಪ್ಪ ಕೊಪ್ಪಳ, ಗಜೇಂದ್ರಗಡ ಪಟ್ಟಣದ ಶಿವಾಜಿ ಭೀಮಪ್ಪ ಹಾಳಕೇರಿ(ಹೋಟೆಲ್ ಕೆಲಸಗಾರ), ದಾವಲಸಾಬ ಹುಸೇನಸಾಬ ಡಾಲಯತ್(ಚಾಲಕ), ಮುರಳಿಧರ್ ದತ್ತಾಜಿರಾವ್ ಸಿಂಧೆ(ಉದ್ಯಮಿ), ರಮೇಶ ಬಸಪ್ಪ ಕೋಟೆ(ಬ್ಯಾಂಕ್ ನೌಕರ), ಕುಮಾರ ಮಹಾಂತಪ್ಪ ಮರದ(ವೆಲ್ಡರ್), ವೆಂಕಟೇಶ್ ಕರಿಯಪ್ಪ ಮುದಗಲ್ ಹಾಗೂ ವೆಂಕಟೇಶ್ ತಿಮ್ಮಪ್ಪ ಮುದಗಲ್(ಉದ್ಯಮಿ) ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗಜೇಂದ್ರಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಗಜೇಂದ್ರಗಡ ಸುತ್ತಮುತ್ತಲಿನ ಹಳ್ಳಕೊಳ್ಳದಲ್ಲಿ ಫಂಡ್ ರೀತಿಯಲ್ಲಿ ಇಸ್ಪೀಟು ಜೂಜಾಟಗಳ ಅಡ್ಡೆಗಳು ತಲೆಯತ್ತಿದ್ದರೂ, ಪೊಲೀಸರು ದಾಳಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಸದ್ಯ ಈಗಲಾದರೂ ಇಸ್ಟೀಟು ಅಡ್ಡೆಯ ಮೇಲೆ ದಾಳಿ ಮಾಡಿದ್ದು, ಸಂತಸ ತಂದಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಮುಷ್ಕರದ ಮುನ್ನಾ ದಿನವೇ ಪ್ರಯಾಣಿಕರ ಪರದಾಟ, ಬಸ್ ಬಂದಾದ್ರೆ ಒಂದು ದಿನಕ್ಕೆ 50 ಲಕ್ಷ ರೂ. ನಷ್ಟ; ಡಿಸಿ ಹಿರೇಮಠ

ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ: ನಾಳೆ ಬಸ್ ಬಂದ್

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸಾರಿಗೆ ಸಿಬ್ಬಂದಿಗಳು ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಬುಧವಾರ ದಿಂದ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ, ಮುಷ್ಕರದ ಮುನ್ನಾ ದಿನವೇ ಶೇ.50ರಷ್ಟು ಬಸ್‌ಗಳು ಸಂಚರಿಸದೇ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ನಡೆಸಿದರು.

ಮಂಗಳವಾರದಂದು ಎರಡನೇಯ ಪಾಳೆಯ ಸಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಗೈರಾಗಿದ್ದರಿಂದ ಬಸ್‌ಗಳು ಡಿಪೋ ಬಿಟ್ಟು ಹೊರಗಡೆ ಬರಲಿಲ್ಲ. ಇದರಿಂದ ಗದಗನ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್‌ಗಳಿಲ್ಲದೇ ಸಾರ್ವಜನಿಕರು ಪರದಾಡಿದರು.

ಈ ವೇಳೆ ನಿಯಂತ್ರಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು, ಗ್ರಾಮೀಣ ಭಾಗಕ್ಕೆ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿದರು. ಇನ್ನು ‘ಮಧ್ಯಾಹ್ನದಿಂದ ಬರಬೇಕಾಗಿದ್ದ ಬಸ್ ಬಂದಿಲ್ಲವೆಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ಸಿಬ್ಬಂದಿಗಳು ಮಂಗಳವಾರ ಮಧ್ಯಾಹ್ನದಿಂದಲೇ ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರದ ವಿರುದ್ಧ ಸಮರ ಸಾರಿದ ಪರಿಣಾಮ, ಜಿಲ್ಲೆಯಲ್ಲಿ ಮಧ್ಯಾಹ್ನದಿಂದ ಬೆರಳೆಣಕೆಯಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿದ್ದವು. ಇದರಿಂದ ಸಾರ್ವಜನಿಕರು ತುಂಬಾ ಸಮಸ್ಯೆಗಳನ್ನು ಅನುಭವಿಸಿದರು. ಹೀಗಾಗಿ ಕರ್ತವ್ಯಕ್ಕೆ ಗೈರಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಅಧಿಕಾರಿಗಳು ಫೋನ್ ಕರೆ ಮಾಡುವ ಮೂಲಕ ಕರ್ತವ್ಯಕ್ಕೆ ಕರೆಯಿಸಿಕೊಳ್ಳಲು ಪ್ರಯತ್ನಿಸಿದರೂ ಫಲಪ್ರದವಾಗಲಿಲ್ಲ.

ಬಸ್ ಬಂದಾದ್ರೆ 50 ಲಕ್ಷ ರೂ. ನಷ್ಟ
ಜಿಲ್ಲೆಯಲ್ಲಿ ಒಟ್ಟು 2,700 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಸುತ್ತಿದ್ದು, ಒಟ್ಟು 542 ಬಸ್‌ಗಳಿವೆ. ಒಂದು ವೇಳೆ ಬಸ್ ಬಂದ್ ಆದಲ್ಲಿ, ಒಂದು ದಿನಕ್ಕೆ ಸುಮಾರು 50 ಲಕ್ಷ ರೂ. ನಷ್ಟವಾಗುತ್ತದೆ ಎಂದು ಗದಗ ಕೆಎಸ್‌ಆರ್‌ಟಿಸಿ ಡಿಸಿ ಎಫ್.ಸಿ.ಹಿರೇಮಠ ಅವರು ‘ವಿಜಯಸಾಕ್ಷಿ,ಗೆ ತಿಳಿಸಿದರು.

ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಹೇಳಿದ್ದೇವೆ. ಬಸ್ ಓಡಿಸಲು ಶತಪ್ರಯತ್ನ ನಡೆಸುತ್ತಿದ್ದು, ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ, ಸೂಕ್ತ ಕ್ರಮಕೈಗೊಳ್ಳಲಾಗುವುದು.

ಎಫ್ ಸಿ ಹಿರೇಮಠ, ಕೆಎಸ್ಆರ್ಟಿಸಿ ಡಿಸಿ ಗದಗ

ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಚಾಲಕರು, ನಿರ್ವಾಹಕರು ಗೈರು ಹಾಜರಾಗಿದ್ದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಶೀಘ್ರವೇ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಯನ್ನು ಈಡೇರಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.

ಬಸವರಾಜ್ ಸಾಬಳೆ, ಪ್ರಯಾಣಿಕರು

ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರದ ಮುಂದಾಳತ್ವವನ್ನು ಯಾವುದೇ ಸಂಘಟನೆಗಳು ವಹಿಸಿಲ್ಲ. ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಅಲ್ಲದೇ, ಸರ್ಕಾರ ಕೇವಲ ಶೇ.೮ರಷ್ಟು ವೇತನ ಹೆಚ್ಚಳ ಮಾಡುತ್ತೇನೆಂದು ಹೇಳುವುದು ಸರಿಯಲ್ಲ. ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ಎಸ್.ಕೆ.ಅಯ್ಯನಗೌಡ್ರ, ಕೆಎಸ್‌ಆರ್‌ಟಿಸಿ ನೌಕರರ ಮುಖಂಡ

ನಾಲೆಗೆ 30ರವರೆಗೆ ನೀರು ಹರಿಸಲು ಆಗ್ರಹಿಸಿ ಏಪ್ರಿಲ್ 9ರಂದು ಕಾಡಾ ಕಚೇರಿಗೆ ಮುತ್ತಿಗೆ

ಪಕ್ಷಬೇಧ ಮರೆತು ಬೆಂಬಲಿಸಿ: ಶರಣಪ್ಪ ಕೊತ್ವಾಲ್

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ತುಂಗಭದ್ರಾ ಜಲಾಶಯದಿಂದ ಏಪ್ರಿಲ್ 30ರವರೆಗೆ ನೀರು ಹರಿಸದಿದ್ದರೆ ಕೆಳಭಾಗದ ರೈತರಿಗೆ ತೊಂದರೆಯಾಗಲಿದೆ. ಹಾಗಾಗಿ ಏಪ್ರಿಲ್ 10ರ ಬದಲಾಗಿ 30ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಏಪ್ರಿಲ್ 9ರಂದು ಬೆಳಗ್ಗೆ ಮುನಿರಾಬಾದ್ ತುಂಗಭದ್ರಾ ಡ್ಯಾಂನ ಕಾಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ತಿಳಿಸಿದ್ದಾರೆ.

ಇದು ರೈತರ ಒಳಿತಿಗಾಗಿ ನಡೆಯುತ್ತಿರುವ ಹೋರಾಟ. ಬೇರೆ ಸಂದರ್ಭಗಳಲ್ಲಿ ರೈತರ ಪರ ಬೀದಿಗಳಿಯುವ ವಿವಿಧ ಪಕ್ಷಗಳ ಮುಖಂಡರು, ಏಪ್ರಿಲ್ 9ರ ಮುತ್ತಿಗೆಯಲ್ಲಿ ಪಕ್ಷಬೇಧ ಮರೆತು ಬೆಂಬಲಿಸಿ ಪಾಲ್ಗೊಳ್ಳಬೇಕು. ಆ ಮೂಲಕ ರೈತರ ಕುರಿತ ನಿಜ ಕಾಳಜಿ ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಸಾರಿಗೆ ಬಸ್ ರಸ್ತೆಗಿಳಿಯಲ್ಲ; ಕಾರ್ಮಿಕರು, ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದೇವೆ; ಡಿಸಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ವೇತನ ಪರಿಷ್ಕರಣೆ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು, ಕಾರ್ಮಿಕರು ಏಪ್ರಿಲ್ 1ರಿಂದ ನಾನಾರೀತಿಯ ಪ್ರತಿಭಟನೆ ನಡೆಸಿದ್ದು, ಏಪ್ರಿಲ್ 7ರಂದು ಬಸ್ ರಸ್ತೆಗೆ ಇಳಿಸದಿರಲು‌ ನಿರ್ಧರಿಸಿದ್ದಾರೆ. ನೌಕರರ ಮುಷ್ಕರದ ಪರಿಣಾಮ ಖಾಸಗಿ ವಾಹನಗಳ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿದೆ.

ನಾಳೆ ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದು. ಸಾರಿಗೆ ಬಸ್‌ಗಳ ಬದಲು 400 ಖಾಸಗಿ ವಾಹನಗಳನ್ನು ಜಿಲ್ಲಾದ್ಯಂತ ಸಂಚರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಆರ್‌ಟಿಓ ಕಚೇರಿ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಜಿಲ್ಲೆಯ ಯಾವ ಭಾಗದಲ್ಲೂ ಅಹಿತಕರ ಘಟನೆಗಳು ಜರುಗದಂತೆ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆಯೂ, ಅಹಿತಕರ ಘಟನೆಗಳಿಗೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸುರಳ್ಕರ್ ತಿಳಿಸಿದರು.

ಸಭೆಯಲ್ಲಿ ಆರ್ ಟಿ ಓ, ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳು,
ಎಸ್ಪಿ ಟಿ ಶ್ರೀಧರ್ ಸೇರಿದಂತೆ ಎಡಿಸಿ, ಎಸಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ, ಸಾರಿಗೆ ನೌಕರರ ಹಾಗೂ ಕಾರ್ಮಿಕರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲು ಸರಕಾರ ಸೂಚಿಸಿದ್ದು, ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆಯೂ, ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಎಂ ಮುಲ್ಲಾ ನಿಯಂತ್ರಕರು ಕೊಪ್ಪಳ ಡಿಪೋ

ಎಂ.ಮುಲ್ಲಾ, ವಿಭಾಗೀಯ ನಿಯಂತ್ರಕರು, ಕೆಎಸ್ಆರ್‌ಟಿಸಿ ಕೊಪ್ಪಳ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ತಿಂಗಳಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಮಾರ್ಚ್ ವೇಳೆಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರಕಾರ, ಮಾತು ಮರೆತಿದೆ. ಹಾಗಾಗಿ ಏಪ್ರಿಲ್ 1ರಿಂದ ಸಾರಿಗೆ ನೌಕರರು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಏಪ್ರಿಲ್ 7ರಂದು ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು.

ಚಂದ್ರಪ್ಪ, ಕಾರ್ಮಿಕ ಮುಖಂಡ

ಏಪ್ರಿಲ್ 7 ರಿಂದ ಬಿಂಕದಕಟ್ಟಿ ಜ್ಯೂನಲ್ಲಿ ಸಿಂಹ ಘರ್ಜನೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಹದಿನೈದು ದಿನಗಳಿಂದ ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯನ್ವಯ ನಿಗಾದಲ್ಲಿಟ್ಟಿದ್ದ ಧರ್ಮ ಮತ್ತು ಅರ್ಜುನ ಎಂಬ ಅವಳಿ ಜವಳಿ ಜೋಡಿ ಸಿಂಹಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅರಣ್ಯ ಇಲಾಖೆ ಬುಧವಾರ ಏಪ್ರಿಲ್ 7 ರಿಂದ ಅವಕಾಶ ಕಲ್ಪಿಸಿದ್ದು, ಪ್ರಾಣಿ ಪ್ರೀಯರಲ್ಲಿ ಸಂತಸ ಹೆಚ್ಚಿಸಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರವು ಬಿಂಕದಕಟ್ಟಿ ಮೃಗಾಲಯಕ್ಕೆ ಜೋಡಿ ಸಿಂಹಗಳ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 11 ವರ್ಷಗಳ ಧರ್ಮ ಮತ್ತು ಅರ್ಜುನ ಎಂಬ ಹೆಸರಿನ ಎರಡು ಗಂಡು ಸಿಂಹಗಳನ್ನು ಮಾ.20ರಂದು ಮೃಗಾಲಯಕ್ಕೆ ತರಲಾಗಿತ್ತು. ಬಯಲು ಸೀಮೆಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ಇವೆರಡನ್ನೂ ನಿಗಾದಲ್ಲಿರಸಲಾಗಿತ್ತು.

ಸದ್ಯ ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ಸದ್ಯ ಮೃಗಾಲಯದಲ್ಲಿ ನೈಸರ್ಗಿಕ ವಾಸಸ್ಥಾನದ ಮಾದರಿಯಲ್ಲೇ ನಿರ್ಮಿಸಲಾಗಿರುವ ಪಂಜರದಲ್ಲಿ ವಾಸಿಸಲಿವೆ. ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು 1,000 ಚ.ಮೀ. ಮೀಸಲಿಟ್ಟಿರುವ ಪಂಜರದಲ್ಲಿ ವಾತಾವರಣ ನಿರ್ಮಿಸಿದ್ದಾರೆ. ಅದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನೀರಿನ ಹೊಂಡ, ಕಲ್ಲಿನ ಬಂಡೆಗಳು, ಗಿಡ-ಮರಗಳಿರುವಂತೆ ವಿನ್ಯಾಸಗೊಳಿಸಿದ್ದಾರೆ. ಸಿಂಹಗಳ ವೀಕ್ಷಣೆಗೆ ಗಾಜಿನ ಪರದೆಯ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ಯಾವುದೇ ತಂತಿ ಬೇಲಿಯ ಅಡೆತಡೆಗಳಿಲ್ಲದೇ ಸಿಂಹಗಳನ್ನು ವೀಕ್ಷಿಸಬಹುದು ಎಂದು ಡಿಸಿಎಫ್ ಸೂರ್ಯಸೇನ್ ಎ ವಿ ತಿಳಿಸಿದ್ದಾರೆ.

error: Content is protected !!