Police Firing: ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್; ಕೊಲೆ ಆರೋಪಿಗೆ ಗುಂಡೇಟು!

0
Spread the love

ಕಲಬುರ್ಗಿ:- ಮಾಜಿ‌ ಗ್ರಾಂ ಸದಸ್ಯ ವಿಶ್ವನಾಥ್ ಜಮಾದಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ಕಾಲಿಗೆ ಪೊಲೀಸ್ ಫೈರಿಂಗ್ ಮಾಡಿದ್ದಾರೆ.

Advertisement

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳ ಬಳಿ ಪಿಎಸ್ಐ ಇಂದುಮತಿ ಅವರು, ಲಕ್ಷ್ಮಣ ಪೂಜಾರಿ ಬಲಗಾಲಿಗೆ ಪೈರಿಂಗ್ ಮಾಡಿದ್ದಾರೆ. ಕೊಲೆ ಕೇಸ್ ನಲ್ಲಿ ಗನ್‌ ರಿಕವರಿ ಸಲುವಾಗಿ ತೇರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ.

ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆರೋಪಿ ಲಕ್ಷ್ಮಣ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಯ ವಿವಿಧಡೆ ಬಂದೂಕು ಸರಬರಾಜು ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ ಪೂರೈಕೆ ಸೇರಿದಂತೆ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ವಿರುದ್ಧ 11 ಕೇಸ್​ಗಳಿವೆ. ವಿಶ್ವನಾಥ್​ ಜಮಾದಾರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಕ್ಷ್ಮಣ ವಿರುದ್ಧ ಆಳಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ವಿಶ್ವನಾಥ್​​​ ಜಮಾದಾರ್ ಕಳೆದ ಶುಕ್ರವಾರ ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ಬರುತ್ತೇನೆ ಅಂತ ಬೈಕ್ ಮೇಲೆ ಹೋಗಿದ್ದರು. ಮಗನನ್ನು ಶಾಲೆಗೆ ಬಿಟ್ಟು ಜಿಡಗಾ ಕ್ರಾಸ್ ಬಳಿ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ವಿಶ್ವನಾಥ್​ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದರು.

ವಿಶ್ವನಾಥ್​ ಅವರ ತೆಲೆಗೆ ಮೂರು ಗುಂಡು ಹೊಡೆದಿದ್ದರು. ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್​ ಸ್ಥಳದಲ್ಲೇ ಮೃತಪಟ್ಟಿದ್ದರು.


Spread the love

LEAVE A REPLY

Please enter your comment!
Please enter your name here