HomeEducationಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ

ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾ ಸರಸ್ವತಿ ಪೂಜೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣ ಬಾಯಿ ಬಹಾದ್ದೂರ ದೇಸಾಯಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳ ಸಾಹಿತಿ ರಾಜೇಂದ್ರ ಗಡಾದ, ಮಕ್ಕಳು ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ, ಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆದು ಶಾಲೆಗೆ, ಊರಿಗೆ ಒಳ್ಳೆಯ ಕೀರ್ತಿ ತರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ, ಅಧ್ಯಕ್ಷತೆ ವಹಿಸಿದ್ದ ಶಾರಕ್ಕನವರು ಮಹಾಂತಶೆಟ್ಟರ ಮಾತನಾಡಿದರು. ಶಾಲೆಗೆ ದೇಣಿಗೆ ನೀಡಿದ ಶಿವಲೀಲಾ ಮರಗಾಲ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರರನ್ನು ಸಂಸ್ಥೆ ಮತ್ತು ಪ್ರೌಢಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಬಳಗದ ಸದಸ್ಯರಾದ ಸಾವಿತ್ರಮ್ಮ, ಶಿಕ್ಷಣಾಧಿಕಾರಿ ಉಮೇಶ ಹುಚ್ಚಯ್ಯನಮಠ, ಸಿಆರ್‌ಪಿ ಉಮೇಶ ನೇಕಾರ, ಸತೀಶ ಭೋಮಲೆ, ಶಿವಾನಂದ ಹೂವಿನ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯರಾದ ಜೆ.ಡಿ. ಲಮಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ಸಿ. ಹಿರೇಮಠ ಪ್ರಶಸ್ತಿ ವಿತರಣಾ ಕಾರ್ಯಕ್ರಮ, ಶೀಲಾ ತಳವಾರ ನಗದು ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಎನ್.ಡಿ. ಗೌರಿ, ಪಿ.ಎಲ್. ಪಾಟೀಲ ಅನಿಸಿಕೆ ಹಂಚಿಕೊಂಡರು. ಎಸ್.ಎಸ್. ಮಠದ ಸ್ವಾಗತಿಸಿದರು. ಕಾವ್ಯಾ ದೇಸಾಯಿ, ಶ್ವೇತಾ ಅಂಬಲಿ ನಿರ್ವಹಿಸಿದರು. ಎಸ್.ಎಂ. ಹಾದಿಮನಿ ನಿರೂಪಿಸಿದರು. ಆರ್.ಸಿ. ಉಮಚಗಿ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img