ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.
ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ತರಕಾರಿ ಮತ್ತು ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ಮಾರುಕಟ್ಟೆಗೆ ತರಕಾರಿ ಮತ್ತು ಹಣ್ಣುಗಳ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ದಿನನಿತ್ಯ ಅಡುಗೆಗೆ ಅಗತ್ಯವಿರುವ ಈರುಳ್ಳಿ, ಬೀನ್ಸ್, ನುಗ್ಗೆಕಾಯಿ ಸೇರಿದಂತೆ ಹಲವು ತರಕಾರಿಗಳ ದರ ಹೆಚ್ಚಾಗಿದೆ. ಸೊಪ್ಪುಗಳ ಬೆಲೆಯಂತೂ ಸಾಮಾನ್ಯಕ್ಕಿಂತ ಮೂರು ಪಟ್ಟು ಏರಿಕೆಯಾಗಿದೆ.
ಹಾಪ್ಕಾಮ್ಸ್ನಲ್ಲಿ ತರಕಾರಿ, ಹಣ್ಣುಗಳ ದರ
- ದಪ್ಪ ಈರುಳ್ಳಿ – ₹77
- ಸಾಂಬಾರ್ ಈರುಳ್ಳಿ – ₹140
- ಹುರುಳಿಕಾಯಿ – ₹90
- ಡಬ್ಬಲ್ ಬೀನ್ಸ್ – ₹110
- ನುಗ್ಗೆಕಾಯಿ – ₹140
- ಬೆಳ್ಳುಳ್ಳಿ – ₹310
- ಆಲೂಗಡ್ಡೆ – ₹65
- ಕ್ಯಾರೆಟ್ – ₹50
- ಮಂಗಳೂರು ಸೌತೆಕಾಯಿ – ₹65
- ಹಸಿಮೆಣಸಿನಕಾಯಿ – ₹90
- ಅಲಸಂದೆ – ₹80
- ತೊಗರಿಕಾಯಿ – ₹90
- ವಾಷಿಂಗ್ಟನ್ ಸೇಬು – ₹355
- ದಾಳಿಂಬೆ – ₹285
- ಏಲಕ್ಕಿ ಬಾಳೆ – ₹120
- ಪಪ್ಪಾಯ – ₹64
- ನಾಟಿ ಸೀಬೆ – ₹100
ಸೊಪ್ಪುಗಳ ಬೆಲೆ
- ಕೊತ್ತಂಬರಿ ಸೊಪ್ಪು – ₹180
- ಸಬ್ಬಕ್ಕಿ ಸೊಪ್ಪು – ₹160
- ಪುದೀನಾ – ₹102
- ಪಾಲಕ್ – ₹90
- ದಂಟಿನ ಸೊಪ್ಪು – ₹80
- ಮೆಂತೆ ಸೊಪ್ಪು – ₹160
- ಕರಿಬೇವು – ₹80
ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ಈ ಹಿಂದೆ ಒಂದು ಅಥವಾ ಎರಡು ಕೆ.ಜಿ. ತರಕಾರಿ ಖರೀದಿಸುತ್ತಿದ್ದವರು ಇದೀಗ ಅರ್ಧ ಕೆ.ಜಿಗೆ ಸೀಮಿತವಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆ ಗ್ರಾಹಕರನ್ನು ಕಂಗೆಡಿಸಿದ್ದು, ಮುಂದಿನ ದಿನಗಳಲ್ಲಿ ವಾಡಿಕೆಯಂತೆ ಮಳೆಯಾದರೆ ಬೆಳೆಗಳ ಪರಿಸ್ಥಿತಿ ಸುಧಾರಿಸಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.










