HomeBengaluru NewsIPL 2025: ಬೆಂಗಳೂರಿನಲ್ಲಿ RCBಗೆ ಮೊದಲ ಗೆಲುವು: ತಂಡದ ಗೆಲುವಿನ ಬಗ್ಗೆ ಕ್ಯಾಪ್ಟನ್ ರಜತ್ ಹೇಳಿದ್ದೇನು..?

IPL 2025: ಬೆಂಗಳೂರಿನಲ್ಲಿ RCBಗೆ ಮೊದಲ ಗೆಲುವು: ತಂಡದ ಗೆಲುವಿನ ಬಗ್ಗೆ ಕ್ಯಾಪ್ಟನ್ ರಜತ್ ಹೇಳಿದ್ದೇನು..?

For Dai;y Updates Join Our whatsapp Group

Spread the love

ಬೆಂಗಳೂರು: ತವರಿನಲ್ಲಿ ಒಂದು ಗೆಲುವಿಗಾಗಿ ಕಾದು ಕುಳಿತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ 2025 ರ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಿದ್ದ ಆರ್​ಸಿಬಿ ಕೊನೆಗೂ ತನ್ನ ತವರು ಮೈದಾನದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಈ ಮೊದಲು ಈ ಸೀಸನ್​ನಲ್ಲಿ 3 ತವರು ಪಂದ್ಯಗಳನ್ನು ಆಡಿದ್ದ ಆರ್​ಸಿಬಿ ಮೂರೂ ಪಂದ್ಯಗಳನ್ನು ಸೋತಿತ್ತು. ಆದರೆ ರಾಜಸ್ಥಾನ್ ವಿರುದ್ಧ ಸಾಂಘಿಕ ಹೋರಾಟ ನೀಡಿದ ಆರ್​ಸಿಬಿ ತವರಿನಲ್ಲಿ ಆಡಿದ 4ನೇ ಪಂದ್ಯದಲ್ಲಿ 11 ರನ್​​ಗಳ ರೋಚಕ ಜಯ ಸಾಧಿಸಿತು.

ಇನ್ನೂ ಪಂದ್ಯ ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್, ಈ ಗೆಲುವು ನಮಗೆ ತುಂಬಾ ಅಗತ್ಯವಾಗಿತ್ತು. ಇಂದು ವಿಕೆಟ್ ವಿಭಿನ್ನವಾಗಿತ್ತು. 10ನೇ ಓವರ್ ನಂತರ ನಮ್ಮ ಬೌಲರ್​ಗಳು ಕಂಟ್ರೋಲ್​ಗೆ ತಂದರು. ಗೆಲುವಿನ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ಅದ್ಭುತವಾಗಿತ್ತು.

ರಾಜಸ್ಥಾನ್ ರಾಯಲ್ಸ್​, ಆರಂಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ವಿಕೆಟ್‌ಗಳನ್ನು ಹುಡುಕುತ್ತಿದ್ದೆವು. ವಿಕೆಟ್ ಬಿದ್ದಾಗ ಮಾತ್ರ ರನ್​​ ಓಟಕ್ಕೆ ಬ್ರೇಕ್ ಹಾಕಬಹುದು. ನಮ್ಮಲ್ಲಿ ಉತ್ತಮ ನಾಯಕರ ತಂಡವಿದೆ. ಅವರ ಇನ್‌ಪುಟ್‌ಗಳು ಬಹಳಷ್ಟು ಸಹಾಯ ಮಾಡುತ್ತವೆ ಎಂದರು.

 

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!