Home Entertainment ನಿರ್ಮಾಪಕಿಯಾದ ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ: ಹೊಸ ಬ್ಯಾನರ್‌ ಆರಂಭ

ನಿರ್ಮಾಪಕಿಯಾದ ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ: ಹೊಸ ಬ್ಯಾನರ್‌ ಆರಂಭ

0
ನಿರ್ಮಾಪಕಿಯಾದ ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ: ಹೊಸ ಬ್ಯಾನರ್‌ ಆರಂಭ
Spread the love

ರಾಕಿಂಗ್ ಸ್ಟಾರ್ ಯಶ್ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಯಶ್‌ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಯಶ್‌ ತಾಯಿ ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ತಮ್ಮದೆ ಆದ ಪ್ರೊಡಕ್ಷನ್‌ ಹೌಸ್‌ ಆರಂಭಿಸಿದ್ದಾರೆ.

ಯಶ್ ಬಳಿಕ ಅವರ ತಾಯಿ ಪುಷ್ಪ ಅವರು ಹಲವು ಸಿನಿಮಾಗಳನ್ನು ತಯಾರು ಮಾಡಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಪಿಎ ಹೆಸರಿನ ಸಿನಿಮಾ ನಿರ್ಮಾಣದ ಬ್ಯಾನರ್‌ ಅನ್ನು ಯಶ್‌ ತಾಯಿ ಪುಷ್ಪ ಆರಂಭಿಸಿದ್ದಾರೆ. ಪಿಎ ಎಂದರೆ ಪುಷ್ಪ ಹಾಗೂ ಅರುಣ್ ಕುಮಾರ್ ಎನ್ನುವ ಮಾಹಿತಿ ಇದೆ. ಇದು ಯಶ್ ತಂದೆ-ತಾಯಿ ಹೆಸರು. ಈ ಕಾರಣದಿಂದಲೇ ಬ್ಯಾನರ್​ಗೆ ‘ಪಿಎ’ ಎಂದು ಇಡಲಾಗಿದೆ ಎನ್ನಲಾಗುತ್ತಿದೆ.

ಕಳೆದ ಅನೇಕ ದಿನಗಳ ಹಿಂದೆಯೇ ಈ ಬ್ಯಾನರ್‌ನ ಹೊಸ ಸಿನಿಮಾ ಆರಂಭವಾಗಿದ್ದು, ಆಗಲೇ ಕೆಲಸಗಳು ಕೂಡ ಪ್ರಾರಂಭವಾಗಿವೆ. ಪೃಥ್ವಿ ಅಂಬಾರ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ದಿಯಾ’ ಸಿನಿಮಾದ ಮೂಲಕ ಫೇಮಸ್ ಆದ ನಟ ಪೃಥ್ವಿ ಅಂಬಾರ್, ಬಹುಭಾಷಾ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಯಶ್ ತಾಯಿ ನಿರ್ಮಾಣ ಸಂಸ್ಥೆ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ನೀಡಲಿದ್ದಾರೆ.


Spread the love

LEAVE A REPLY

Please enter your comment!
Please enter your name here