ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ನಡೆಸಿದ 2026ರ ಜುಲೈ ತಿಂಗಳ ಬೆರಳಚ್ಚು ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯವು ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.
ಪರೀಕ್ಷೆಯಲ್ಲಿ ಇಂಗ್ಲಿಷ್ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಮುಸ್ಕಾನ ಮುಲ್ಲಾ ಶೇ.90.50, ಇಂಗ್ಲಿಷ್ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ವಾಹಿದಾ ಮುರಾದಖಾನ ಶೇ.89.50, ಕನ್ನಡ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಗೌರಿ ಆರ್. ಶಿಲ್ಪಿ ಶೇ.83 ಹಾಗೂ ಕನ್ನಡ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ಪ್ರಾರ್ಥನಾ ಶೀರೂಳ ಶೇ.85ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಇದಲ್ಲದೆ ಸೌಭಾಗ್ಯ ಕಗ್ಗಲಗೌಡರ ಶೇ.88.50, ಆದರ್ಶ ಪೂಜಾರ ಶೇ.85, ಅಪ್ಜಲ್ ಬಳ್ಳಾರಿ ಶೇ.84, ಗಂಗಮ್ಮ ಕಟ್ನಾಕಿ ಶೇ.87.50, ಸತ್ಯಮ್ಮ ಬೆಲೇರಿ ಶೇ.86.50, ಕವಿತಾ ಅಂಬಿಗೇರ ಶೇ.87, ಸಾನಿಯಾ ಪೆಂಡಾರಿ ಶೇ.86, ಸೋನು ವಾಲ್ಮೀಕಿ ಶೇ.85, ಭವಾನಿ ಬೀರಕಟ್ಟಿ ಶೇ.76.50, ಸಹನಾ ಗದಗ ಶೇ.79.50, ನೂರಹಬೀಬಾ ಶೇ.82.50 ಹಾಗೂ ಸೌಮ್ಯ ಏಗ್ನೂರ ಶೇ.79.50ರಷ್ಟು ಅಂಕ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 29 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ಆರು ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿದ್ದು, ವಿದ್ಯಾಲಯ ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶಿಕ್ಷಕರ ಮಾರ್ಗದರ್ಶನವೂ ಕಾರಣವಾಗಿದ್ದು, ಮುಂದಿನ ದಿನಗಳಲ್ಲೂ ಉತ್ತಮ ಫಲಿತಾಂಶ ದಾಖಲಿಸುವಂತೆ ಎಲ್ಲ ವಿದ್ಯಾರ್ಥಿಗಳು ಶ್ರಮಿಸಬೇಕು.
— ಡಾ. ತಯಬಅಲಿ ಅ. ಹೊಂಬಳ, ಪ್ರಾಚಾರ್ಯರು



