ವಿಜಯಸಾಕ್ಷಿ ಸುದ್ದಿ, ಗದಗ: ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವ ಬೀದಿ ದನಗಳು ವಾಹನಗಳಿಗೆ ಕಾಣದೆ ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಭಗತ್‌ಸಿಂಗ್ ಅಭಿಮಾನಿ ಬಳಗದ ಸಹಯೋಗದಲ್ಲಿ ವಿಶೇಷ ಪ್ರಾಣಿ ಕಲ್ಯಾಣ ಕಾರ್ಯ ಕೈಗೊಳ್ಳಲಾಯಿತು.
ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿದ್ದ ಹಸು, ದನ-ಕರುಗಳ ಕೊರಳಿಗೆ ಪ್ರತಿಫಲಿತ ರೇಡಿಯಂ ಪಟ್ಟಿಗಳನ್ನು ಅಳವಡಿಸಲಾಯಿತು. ವಾಹನಗಳ ಹೆಡ್‌ಲೈಟ್ ಬೆಳಕು ಬಿದ್ದಾಗ ಪಟ್ಟಿಗಳು ಹೊಳೆಯುವುದರಿಂದ ದೂರದಿಂದಲೇ ದನಗಳ ಇರುವಿಕೆ ತಿಳಿದು ಅಪಘಾತ ತಪ್ಪಿಸಲು ಸಹಕಾರಿಯಾಗಲಿದೆ.
ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಖುದ್ದು ರಸ್ತೆಗಿಳಿದು ಕಾರ್ಯದಲ್ಲಿ ಪಾಲ್ಗೊಂಡರು.



