HomeGadag Newsಪರಿಶ್ರಮದಿಂದ ಓದಿದರೆ ಬದುಕು ಬದಲಾಗುತ್ತದೆ

ಪರಿಶ್ರಮದಿಂದ ಓದಿದರೆ ಬದುಕು ಬದಲಾಗುತ್ತದೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಗೆ ಮಕ್ಕಳ ಸಾಹಿತಿಗಳಾದ ನಿಂಗಣ್ಣ ಕುಂಟಿ ಅನಿರೀಕ್ಷಿತವಾಗಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿಂಗಣ್ಣ ಕುಂಟಿ, ಚಿಕ್ಕವರಿದ್ದಾಗ ಹೆಚ್ಚು ಓದುವ ಅಭಿಲಾಷೆಯನ್ನು ಬೆಳೆಸಿಕೊಂಡಿದ್ದೆ. ಸಮಾಜದಲ್ಲಿನ ಏನನ್ನಾದರೂ ಸಾಧಿಸಬೇಕು ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ನನ್ನ ನೆಚ್ಚಿನ ಸಾಹಿತಿಗಳಾದ ದ.ರಾ. ಬೇಂದ್ರೆಯವರು ನಿಂಗಣ್ಣ ಎಂದು ಕರೆದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದರಿಂದ ನಿಮ್ಮ ಮುಂದೆ ಸಾಹಿತಿಯಾಗಿ ನಿಂತಿದ್ದೇನೆ. ಅದಕ್ಕಾಗಿ ನೀವು ಕೂಡಾ ಪರಿಶ್ರಮ ಪಟ್ಟು ಅಭ್ಯಾಸ ಮಾಡಿದರೆ ನಿಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಮಕ್ಕಳಿಗೆ ತಮ್ಮ ಜೀವನದ ಸಾಧನೆಗಳನ್ನು ತಿಳಿಸಿದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿಯವರಿಗೆ ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ, ಶಿಕ್ಷಕರಾದ ನೇಮೇಶ ಯರಗುಪ್ಪಿ ಧನ್ಯವಾದ ಅರ್ಪಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img