HomeGadag Newsವೀರವನಿತೆ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ

ವೀರವನಿತೆ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ನಾಡಿನ ವೀರವನಿತೆಯಾಗಿ ತನ್ನ ಅಪ್ರತಿಮ ಸಾಹಸ ಮತ್ತು ಶೌರ್ಯಗಳಿಂದ ದೇಶದ ಸ್ವಾತಂತ್ರ್ಯದಗಾಗಿ ಮೆರೆದ ಚೆನ್ನಮ್ಮಳ ಧೈರ್ಯ ಇಂದಿಗೂ ಪ್ರಸ್ತುತವಾಗಿದ್ದು, ರಾಣಿ ಚೆನ್ನಮ್ಮ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕವಾಗಿದ್ದಾಳೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಮಹಾಂತಶೆಟ್ಟರ ಅಭಿಪ್ರಾಯಪಟ್ಟರು.

ಅವರು ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ವೇದಿಕೆಯ ವತಿಯಿಂದ ರವಿವಾರ ಸಮಾಜದ ಲಕ್ಷ್ಮವ್ವ ಆಚಾರಿ ಅವರ ನಿವಾಸದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳ 201ನೇ ವಿಜಯೋತ್ಸವ ಹಾಗೂ 247ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಹಿರಿಯರಾದ ಶಕುಂತಲಾ ಹೊರಟ್ಟಿ, ಲಕ್ಷ್ಮವ್ವ ಆಚಾರಿ ಮಾತನಾಡಿ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮಳ ಕನ್ನಡ ನಾಡಿನ ಹೆಮ್ಮೆ. ಚೆನ್ನಮ್ಮಳ ದೇಶಪ್ರೇಮ, ಶೌರ್ಯ, ಸಾಹಸ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ವೀರರ ಚರಿತ್ರೆಯನ್ನು ಮನದಟ್ಟು ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚೆನ್ನಮ್ಮ ಗುರಿಕಾರ್, ಶೈಲಾ ಆದಿ, ಮಂಜುಳಾ ಪಿಳ್ಳಿ, ವಿಜಯಕ್ಕ ಬಾಳೆಕಾಯಿ, ಸುಶೀಲಾ ಪೂಜಾರ, ಚೆನ್ನಮ್ಮ ಚಿಂಚಲಿ, ಕುಸುಮಾ ಸೋಮಕ್ಕನವರ್, ಸರೋಜಕ್ಕ ಬನ್ನೂರು, ನೀಲಕ್ಕ ಬೂದಿಹಾಳ, ಗೀತಾ ಕೊಡ್ಲಿ, ಸುನಂದಾ ಆಚಾರಿ, ಚಂಪಾವತಿ ಬಾಳಿಕಾಯಿ, ಗುರುಬಾಯಿ ಹುಲಸೂರ ಸೇರಿದಂತೆ ವಿನಾಯಕ ನಗರದ ಮಹಿಳೆಯರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img