ಬೆಂಗಳೂರು: ಪಾದಯಾತ್ರೆ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇದು ರಾಜಕೀಯ ಪ್ರೇರಿತ ಪಾದಯಾತ್ರೆ. ಇದು ರಾಜಕೀಯ ಅಜೆಂಡಾ ಎಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಎಐಸಿಸಿ ವರಿಷ್ಠರ ಜೊತೆ ಸಭೆ ರೀ ಶಫಲ್ ಬಗ್ಗೆ ಏನಾದರು ಚರ್ಚೆ ಆಗೆದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೋ ರೀ ಶಫಲ್.
Advertisement
ಯಾವುದೇ ಶಫಲ್ ಇಲ್ಲ. ನಾನೇ ಚೀಫ್ ಮಿನಿಸ್ಟರ್ ಹೇಳುತ್ತಿದ್ದೇನೆ. ನಿಮಗೆ ಚೀಫ್ ಮಿನಿಸ್ಟರ್ ಮೇಲೆ ನಂಬಿಕೆ ಇಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಮಾಮೂಲಿ ಸಭೆ ನಮ್ಮ ರಾಷ್ಟ್ರೀಯ ನಾಯಕರು ಬಂದಿದ್ದಾರೆ. ಅವರ ಜೊತೆ ಮಾತುಕತೆ ಅಷ್ಟೇ. ಯಾವುದೇ ರೀ ಶಫಲ್ ಏನು ಇಲ್ಲ ಎಂದರು.