HomeGadag Newsಜಗದಂಬಾ ದೇವಸ್ಥಾನನದಲ್ಲಿ ಉಡಿ ತುಂಬುವ ಕಾರ್ಯಕ್ರಮ

ಜಗದಂಬಾ ದೇವಸ್ಥಾನನದಲ್ಲಿ ಉಡಿ ತುಂಬುವ ಕಾರ್ಯಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿ ಎಸ್.ಎಸ್.ಕೆ. ಜಗದಂಬಾ ದೇವಸ್ಥಾನದಲ್ಲಿ ಎಸ್.ಎಸ್.ಕೆ. ಸಮಾಜ ಪಂಚ ಕಮಿಟಿ ಮತ್ತು ತರುಣ ಸಂಘ, ಮಹಿಳಾ ಮಂಡಳ ಇವರ ಸಹಯೋಗದಲ್ಲಿ ದಸರಾ ಹಬ್ಬದ ನಿಮಿತ್ತ ಶ್ರೀ ಜಗದಂಬಾ ದೇವಿಗೆ ಕಾಕಡರಾತಿ, ಭಜನೆಯೊಂದಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಲೋಬೋಸಾ ಕುಟುಂಬದ ಮಂಜುನಾಥ ಎನ್.ಕಬಾಡಿ ಮತ್ತು ಮಾಯಾ ಕಬಾಡಿ, ಲೋಬೋಸಾ ಎನ್.ಕಬಾಡಿ ಮತ್ತು ಧನಲಕ್ಷ್ಮಿ ಲೋಬೋಸಾ ಕಬಾಡಿ, ನಾಗರಾಜ ಎನ್.ಕಬಾಡಿ ಮತ್ತು ಸಂಗೀತಾ ನಾಗರಾಜ ಕಬಾಡಿ ದಂಪತಿಗಳಿಂದ ಎಸ್.ಎಸ್.ಕೆ. ಸಮಾಜ ಮತ್ತು ಇತರೇ ಸಮಾಜದ ಸುಮಂಗಲಿಯರಿಗೆ ಉಡಿ ತುಂಬಿದರು.

ದಿ. ನಾರಾಯಣಸಾ ಲೋಬೋಸಾ ಕಬಾಡಿ ಹಾಗೂ ದಿ. ಲಕ್ಷ್ಮಿಬಾಯಿ ನಾರಾಯಣಸಾ ಕಬಾಡಿ ಇವರು ಕಳೆದ 30 ವರ್ಷಗಳಿಂದ ಜಗದಂಬಾ ದೇವಸ್ಥಾನದಲ್ಲಿ ತಮ್ಮ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅವರು ನಡೆಸಿಕೊಂಡು ಬಂದಿದ್ದ ಧಾರ್ಮಿಕ ಪ್ರವೃತ್ತಿಯನ್ನು ಅವರ ಕುಟುಂಬ ವರ್ಗದವರು ಮುಂದುವರೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img