HomeEducationಗುಣಮಟ್ಟದ ಶಿಕ್ಷಣದಿಂದಲೇ ಉನ್ನತಿ : ಕೂಡ್ಲೇಪ್ಪ ಹಡಪದ

ಗುಣಮಟ್ಟದ ಶಿಕ್ಷಣದಿಂದಲೇ ಉನ್ನತಿ : ಕೂಡ್ಲೇಪ್ಪ ಹಡಪದ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ : ವಿದ್ಯಾರ್ಥಿಗಳು ಅಕ್ಷರ ಜ್ಞಾನವನ್ನು ಪಡೆಯುವ ಮೂಲಕ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲೇಪ್ಪ ಹಡಪದ ಹೇಳಿದರು.

ಅವರು ಸೋಮವಾರ ಮಾರನಬಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರ ಜ್ಞಾನಕ್ಕೆ ಮಹತ್ವವಿದೆ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅಲ್ಲದೆ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳಲು ಸಾಧ್ಯ ಎಂದರು.

ಬಸವರಾಜ ಮಾರನಬಸರಿ ಮಾತನಾಡಿ, ಸದೃಢ ನಾಡು ಕಟ್ಟಲು ಹಾಗೂ ಸಮಾಜದ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಅಕ್ಷರ ಜ್ಞಾನ ಹೊಂದುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಅಕ್ಷರ ಜ್ಞಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.

ವಿದ್ಯಾರ್ಥಿಗಳು ಮತ್ತು ಪಾಲಕರು ಸರಕಾರ ನೀಡುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜ ಜೊತೆಗೆ ಸಮುದಾಯದ ಉನ್ನತಿಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುತ್ತಪ್ಪ ಬಾರಕೇರ, ಅನಿತಾ ಪತ್ತಾರ, ಕವಿತಾ ಹಿರೇಮಠ, ಶರಣಮ್ಮ ಡಂಬಳ, ಅನ್ನಪೂರ್ಣ ಗಡಾದ, ಎಸ್.ಇ. ಹೊರಪೇಟಿ, ಎಫ್.ಬಿ. ಮಾದರ, ಜೆ.ಜಾನಪಾಲ್, ಎಂ.ಕೆ. ಸರ್ವಿ, ಎಸ್.ಎಸ್. ಅವಟಿ, ಬಿ.ಎಸ್. ಗುಗ್ಗರಿ, ಎಂ.ಜಿ. ಮಕಾನದಾರ, ಬಿ.ಎಫ್. ಚೌಡಕಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img