ವಿಜಯಸಾಕ್ಷಿ ಸುದ್ದಿ, ಹೂವಿನ ಹಡಗಲಿ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಖಾಸಗಿ ಶಾಲೆಯ ಕಾರ್ಯದರ್ಶಿಯೊಬ್ಬರು ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೂವಿನಹಡಗಲಿ ಪಟ್ಟಣದಲ್ಲಿ ನಡೆದಿದೆ.
ನ್ಯಾಶನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಯಾಗಿದ್ದ ಬಸಮ್ಮ ಬಸೆಟ್ಟಿ ಅಲಿಯಾಸ್ ರೂಪ ಗಂಡ ಅರ್ಜುನ್ ಪರಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಮಹಿಳೆ.
10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್
ಪರಶೆಟ್ಟಿ ಮದುವೆಯಾಗಿದ್ದರು. ಅರ್ಜುನ್ ಅವರು ಕೂಡ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೂ ಅರ್ಜುನ್ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ ದುಷ್ಕರ್ಮಿಗಳಿಂದ ಬ್ಲ್ಯಾಕ್ ಮೇಲ್?; ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಪೊಲೀಸ್
ಮದುವೆ ಸಮಯದಲ್ಲಿ ಎಂಟು ತೊಲೆ ಬಂಗಾರ, ಎರಡು ಲಕ್ಷ ರೂಪಾಯಿ ನಗದು ಸೇರಿದಂತೆ ಮದುವೆ ಖರ್ಚಿಗೆ ಎಂಟು ಲಕ್ಷ ರೂ. ಹಣ ಕೊಟ್ಟು ಮದುವೆ ಮಾಡಲಾಗಿತ್ತು.
ಆದರೂ ಪದೇ ಪದೇ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆಗೆ ಗಂಡ ಅರ್ಜುನ್ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣ; ಇಬ್ಬರು ಪತ್ರಕರ್ತರು, ಎಎಸ್ಐ, ನಾಲ್ವರು ಪೊಲೀಸರು ಸೇರಿ 9 ಜನರ ಮೇಲೆ ಎಫ್‌ಐಆರ್
ಆದ್ರೆ, ರವಿವಾರ ಪರೀಕ್ಷೆಯ ಕೆಲಸವಿದೆ ಎಂದು ಹೇಳಿ ಬಸಮ್ಮ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಕುರಿತು ಮೃತಳ ತಾಯಿ ಪುಷ್ಪಾವತಿ ಬಶೆಟ್ಟಿ ಗಂಡ ಲೇಟ್ ಚಂದ್ರ ಮೌಳಿ ಬಶೆಟ್ಟಿ ಎಂಬುವರು ದೂರು ಕೊಟ್ಟ ಹಿನ್ನೆಲೆಯಲ್ಲಿ ಅರ್ಜುನ್ ಪರಶೆಟ್ಟಿ, ಅತ್ತೆ, ನಾದಿನಿ ಸೇರಿದಂತೆ 6 ಜನರ ವಿರುದ್ಧ ಹೂವಿನಹಡಗಲಿ ಠಾಣೆಯಲ್ಲಿ ಕೇಸ್ ನಂ29/2023 ಕಲಂ 498(A) 504, 306 R/w 149 ಐಪಿಸಿ 3,4 ಡಿಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ಬಸಮ್ಮ ಆರು ಜನರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು, ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.