ವಿಜಯಸಾಕ್ಷಿ ಸುದ್ದಿ, ಗದಗ: ಮಳೆ ಕೊರತೆಯಿಂದ ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆಯ ವಾರ್ಡ್ ಸಂಖ್ಯೆ 13ರ ಮಹಿಳೆಯರು ನಾಡಿನ ಸುಭಿಕ್ಷ ಹಾಗೂ ರೈತರ ಒಳಿತಿಗಾಗಿ ಸಂಪ್ರದಾಯಬದ್ಧ ಗುರ್ಜಿ ಪೂoje ನೆರವೇರಿಸಿ ಮಳೆರಾಯನ ಮೊರೆ ಹೋದರು.
ಮಳೆ ಕೊರತೆಯಿಂದ ಆತಂಕಗೊಂಡಿರುವ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆಯ ವಾರ್ಡ್ ಸಂಖ್ಯೆ 13ರ ಮಹಿಳೆಯರು ನಾಡಿನ ಸುಭಿಕ್ಷ ಹಾಗೂ ರೈತರ ಒಳಿತಿಗಾಗಿ ಸಂಪ್ರದಾಯಬದ್ಧ ಗುರ್ಜಿ ಪೂಜೆ ನೆರವೇರಿಸಿ ಮಳೆರಾಯನ ಮೊರೆ ಹೋದರು.
ರೈಲ್ವೆ ಪೊಲೀಸ್ ಕ್ವಾರ್ಟರ್ಸ್ ಸಮೀಪದ ಶ್ರೀ ಗಣಪತಿ ಹಾಗೂ ಶ್ರೀ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರು ಗುರ್ಜಿ ಹೊತ್ತು ವಾರ್ಡ್ನ ಮನೆ ಮನೆಗೆ ತೆರಳಿ, “ಗುರ್ಜಿ ಗುರ್ಜಿ ಯಲ್ಲಾಡಿ ಬಂದೆ, ಹಳ್ಳ-ಕೊಳ್ಳ ಸುಳಿದಾಡಿ ಬಂದೆ, ಕಾರಮಳೆಯೇ ಕಪಟ್ ಮಳೆಯೇ, ಸುರಿ ಮಳೆಯೋ… ಸುರಿ ಮಳೆಯೋ…” ಎಂದು ಜಾನಪದ ಗೀತೆಗಳನ್ನು ಹಾಡುತ್ತ ಮಳೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ಮುತ್ತು ಮುಶಿಗೇರಿ ಮಾತನಾಡಿ, ನಾಡಿನ ಒಳಿತಿಗಾಗಿ ಮಹಿಳೆಯರು ಒಗ್ಗೂಡಿ ಇಂತಹ ಸಂಪ್ರದಾಯಬದ್ಧ ಪೂಜೆ ನಡೆಸಿರುವುದು ಶ್ಲಾಘನೀಯ. ಈ ಪೂಜೆಯ ಫಲವಾಗಿ ಸಕಾಲಕ್ಕೆ ಉತ್ತಮ ಮಳೆಯಾಗಿ ರೈತರು ಹಾಗೂ ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದರು.
“ಗುರ್ಜಿ ಪೂಜೆ ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕ. ಸಕಾಲಕ್ಕೆ ಮಳೆಯಾಗಿ ರೈತರ ಬದುಕು ಹಸನಾಗಲಿ, ನಾಡು ಸುಭಿಕ್ಷವಾಗಲಿ ಎಂಬುದು ಎಲ್ಲರ ಪ್ರಾರ್ಥನೆ.”
ಮುತ್ತು ಮುಶಿಗೇರಿ, ವಾರ್ಡ್ ಸದಸ್ಯರು



