ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದು, ಹೆಸರು ಬೆಳೆಗಳು ಕಾಯಿ ಕಟ್ಟುವ ಹಂತದಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ.
ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಅಂದಪ್ಪ ಕೂಳೂರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಬೆಟಗೇರಿ ಹೋಬಳಿಗೆ ಬರುವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಖುದ್ದಾಗಿ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೆಸರು ಬೆಳೆ ಹಳದಿ ರೋಗ ಹೆಚ್ಚಾಗಿದೆ. ಹಳದಿ ಬಣ್ಣದ ರೋಗಕ್ಕೆ ತುತ್ತಾಗಿದ್ದು, ಇದರ ಹತೋಟಿಗೆ ಪೈಯಾಮಿಥಾಕಾಸ್ಸಮ್ ನೈಟ್ರೇಟ್ ರಸಗೊಬ್ಬರ ಕೀಟನಾಶಕ ಬಳಕೆ ಮಾಡುಬೇಕು ಎಂದು ಸೂಚಿಸಿದರು. ಹೆಸರು ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಳದಿ ನಂಜು ರೋಗ ಇರುವ ಬೆಳೆಯನ್ನು ಕಿತ್ತು ನಾಶ ಮಾಡಬೇಕು.
ರೂಟರ್ ಹೊಡೆದು ಭೂಮಿಯಲ್ಲಿ ಹಾಕಿದರೆ ಗೋಬ್ಬರವಾಗುತ್ತದೆ. ನಂತರವಷ್ಟೇ ಬೇರೆ ಬೆಳೆಗಳನ್ನು ಬಿತ್ತನೆ ಮಾಡಿ ಎಂದರು.
ಈ ಸಂದರ್ಭದಲ್ಲಿ ರೈತರಾದ ಹೋನಕೇರೆಪ್ಪ ಬಿಚಗಲ್, ಶರಣಪ್ಪ ಜೋಗಿನ, ಭರಮಪ್ಪ ಸೋರಟೊರು, ದ್ಯಾಮಣ್ಣ ಹುಲಿ, ರಾಮಣ್ಣ ಗಾಣದ ಉದಯ ಗಂಗರಾತ್ರಿ, ರಾಮಣ್ಣ ಖಂಡ್ರೆ ಅಂದಪ್ಪ ಬಿಸನಳ್ಳಿ ಮುಂತಾದವರು ಪಾಲ್ಗೊಂಡಿದ್ದರು.