ಬೆಂಗಳೂರು:- ರಾಜಧಾನಿ ಬೆಂಗಳೂರಿನ ಊರ್ವಶಿ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಯುವತಿಗೆ ಕಿರಾತಕ ತೊಂದರೆ ಕೊಟ್ಟ ಘಟನೆ ಜರುಗಿದೆ.
Advertisement
ಅಷ್ಟೇ ಅಲ್ಲದೆ ರಾತ್ರಿ 9:30 ರ ಶೋ ಇಂಟರ್ವೆಲ್ನಲ್ಲಿ ಯುವತಿ ವಾಶ್ ರೂಂಗೆ ಹೋಗಿದ್ದಾಳೆ. ಅಲ್ಲಿಯೂ ಈ ದುಷ್ಕರ್ಮಿ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ.
ಭೀಮಾ ಸಿನಿಮಾ ವೀಕ್ಷಣೆಗೆ ಬಂದಿದ್ದ ಮಹಿಳಾ ಅಭಿಮಾನಿಗೆ ಕಾಮುಕನೊಬ್ಬ ಈ ಕೃತ್ಯ ಎಸಗಿದ್ದಾನೆ. 23 ವರ್ಷದ ಯುವತಿಯೊಬ್ಬಳಿಗೆ ಕಳೆದ ಆಗಸ್ಟ್ 10 ರಂದು ಊರ್ವಶಿ ಥಿಯೇಟರ್ನಲ್ಲಿ ಈ ರೀತಿ ಆಗಿದೆ.
ಇದು ಗಮನಕ್ಕೆ ಬರುತ್ತಿದ್ದಂತೆ ಯುವತಿ ಹೊರಗೆ ಓಡಿ ಬಂದಿದ್ದಾಳೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.