ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಕಿಂಗ್ ಪಿನ್ ಬಂಧಿಸಿದ್ದಾರೆ. ವಿದೇಶಿ ಪ್ರಜೆ ಎಜಿಕೆ ನೈಗೂ ಒಕಾಫಾರ್(42) ಬಂಧಿತ ಆರೋಪಿಯಾಗಿದ್ದು, 11.50 ಕೆಜಿ ತೂಕದ MDMA ಕ್ರಿಸ್ಟಲ್, 1040 ಎಕ್ಸೆಟಿಸ್ ಪಿಲ್ಸ್ ವಶಕ್ಕೆ ಪಡೆದಿದ್ದಾರೆ.
2017ರಲ್ಲಿ ಬ್ಯುಸಿನೆಸ್ ವಿಸಾದಡಿಯಲ್ಲಿ ಆರೋಪಿ ಭಾರತಕ್ಕೆ ಬಂದಿದ್ದನು. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡೇ ಕರ್ನಾಟಕ, ಚನ್ನೈ,ಹೈದರಾಬಾದ್ ಸೇರಿ ಹಲವೆಡೆ ಡ್ರಗ್ ಡಿಲೀಂಗ್ ಮಾಡುತ್ತಿದ್ದನು.
ದೆಹಲಿಯಿಂದ ಡ್ರಗ್ ತರಿಸಿಕೊಂಡು ಮನೆಯಲ್ಲಿ ಶೇಖರಿಸಿಟ್ಟಿದ್ದ ಆರೋಪಿಯು, ಪರಿಚಯಸ್ಥ ಪೆಡ್ಲರ್ ಗಳು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



