HomeArt and Literatureಬೆಳಕಿನ ಜೊತೆಗೆ ಬದುಕಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆ

ಬೆಳಕಿನ ಜೊತೆಗೆ ಬದುಕಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆ

For Dai;y Updates Join Our whatsapp Group

Spread the love

ರಾಜ್ಯದ ಜನಸಾಮಾನ್ಯರ ಜೀವನದಲ್ಲಿ ನೇರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಪ್ರಮುಖವಾಗಿದೆ. ಮನೆಮಂದಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಕುಟುಂಬದ ಖರ್ಚನ್ನು ತಗ್ಗಿಸುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ನಿಗದಿತ ಮಿತಿಯೊಳಗಿನ ವಿದ್ಯುತ್ ಬಳಕೆಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ವಿದ್ಯುತ್ ವೆಚ್ಚವು ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ ಆಗಿದ್ದ ಸಂದರ್ಭದಲ್ಲೇ ಈ ಯೋಜನೆ ಆಶಾಕಿರಣವಾಗಿ ಮೂಡಿಬಂದಿದೆ. ವಿದ್ಯುತ್ ಮೂಲಭೂತ ಅಗತ್ಯವಾಗಿರುವ ಈ ಕಾಲಘಟ್ಟದಲ್ಲಿ, ಸರ್ಕಾರದ ಈ ಕ್ರಮವು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಯೋಜನೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ನೇರ ಲಾಭ ಸಿಕ್ಕಿದ್ದು, ಮನೆಯ ಆರ್ಥಿಕ ಯೋಜನೆ ಸುಗಮವಾಗಿದೆ. ಉಳಿದ ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರ ಅಗತ್ಯಗಳಿಗೆ ಬಳಸುವ ಅವಕಾಶ ಜನರಿಗೆ ದೊರಕಿದೆ.

ಗೃಹಜ್ಯೋತಿ ಯೋಜನೆಯ ಸದುಪಯೋಗ ಪಡೆಯಲು ಜನರು ತಮ್ಮ ವಿದ್ಯುತ್ ಸಂಪರ್ಕವನ್ನು ನೋಂದಾಯಿಸಿಕೊಂಡು ಸರಿಯಾದ ಮಾಹಿತಿಯನ್ನು ನೀಡಬೇಕು. ಅನಗತ್ಯ ವಿದ್ಯುತ್ ವ್ಯರ್ಥವನ್ನು ತಪ್ಪಿಸಿ, ಜವಾಬ್ದಾರಿಯುತ ಬಳಕೆ ಮಾಡುವ ಮೂಲಕ ಯೋಜನೆಯ ದೀರ್ಘಕಾಲೀನ ಲಾಭವನ್ನು ಉಳಿಸಬಹುದು.

ಯೋಜನೆಯು ಕೇವಲ ಉಚಿತ ವಿದ್ಯುತ್ ನೀಡುವಷ್ಟಕ್ಕೇ ಸೀಮಿತವಲ್ಲ. ಇದು ವಿದ್ಯುತ್ ಉಳಿಸುವ ಅರಿವು ಮೂಡಿಸುವುದಕ್ಕೂ ಕಾರಣವಾಗಿದೆ. ಅನೇಕ ಮನೆಗಳಲ್ಲಿ ವಿದ್ಯುತ್ ಉಳಿತಾಯ ಸಾಧನಗಳ ಬಳಕೆ ಹೆಚ್ಚಾಗಿದೆ. ಇದು ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಸಹ ಒಳ್ಳೆಯ ಬೆಳವಣಿಗೆ.

ಗೃಹಜ್ಯೋತಿ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನದಲ್ಲಿ ಆರ್ಥಿಕ ನೆಮ್ಮದಿ ಮೂಡಿದೆ. ಮಹಿಳೆಯರ ಸ್ವಾವಲಂಬನೆ ಹೆಚ್ಚಲು, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಮತ್ತು ಕುಟುಂಬದ ಒಟ್ಟಾರೆ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದೆ.

ಸರ್ಕಾರದ ಜನಪರ ಯೋಜನೆಗಳು ಜನರ ಕೈಗೆ ನೇರ ಲಾಭ ತಲುಪಿದಾಗ ಮಾತ್ರ ಅದರ ನಿಜವಾದ ಯಶಸ್ಸು ಸಾಧ್ಯ. ಗೃಹಜ್ಯೋತಿ ಯೋಜನೆ ಆ ದಿಕ್ಕಿನಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಒಂದು ಉತ್ತಮ ಮಾದರಿಯಾಗಿದೆ.

ಒಟ್ಟಾರೆ, ಗೃಹಜ್ಯೋತಿ ಯೋಜನೆ ಮನೆಗಳಿಗೆ ಬೆಳಕು ನೀಡುವುದಷ್ಟೇ ಅಲ್ಲ, ಜನರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಜನರು ಜವಾಬ್ದಾರಿಯುತವಾಗಿ ವಿದ್ಯುತ್ ಬಳಕೆ ಮಾಡಿದರೆ, ಈ ಯೋಜನೆ ಮುಂದಿನ ಪೀಳಿಗೆಗಳಿಗೂ ಉಪಯುಕ್ತವಾಗಲಿದೆ.

“ಗೃಹಜ್ಯೋತಿ ಯೋಜನೆ ಜನಸಾಮಾನ್ಯರ ಬದುಕಿನ ವೆಚ್ಚವನ್ನು ನೇರವಾಗಿ ಕಡಿಮೆ ಮಾಡುವ ಜನಪರ ಕಾರ್ಯಕ್ರಮವಾಗಿದೆ. ಪ್ರತೀ ಕುಟುಂಬಕ್ಕೂ ಆರ್ಥಿಕ ನೆಮ್ಮದಿ ನೀಡುವುದು ಸರ್ಕಾರದ ಬದ್ಧತೆ. ವಿದ್ಯುತ್ ಉಳಿಸಿ ಜವಾಬ್ದಾರಿಯುತ ಬಳಕೆ ಮಾಡಿದರೆ ಈ ಯೋಜನೆಯ ಲಾಭವನ್ನು ಇನ್ನಷ್ಟು ವರ್ಷಗಳ ಕಾಲ ಜನರು ಅನುಭವಿಸಬಹುದು. ಜನರ ಸಹಕಾರವೇ ಯೋಜನೆಯ ಯಶಸ್ಸಿಗೆ ಮುಖ್ಯ ಕಾರಣವಾಗಿದೆ”

  • ಎಚ್.ಕೆ. ಪಾಟೀಲ.
    ಗದಗ ಜಿಲ್ಲಾ ಉಸ್ತುವಾರಿ ಸಚಿವರು.

ಗದಗ ಜಿಲ್ಲೆಯ ಗೃಹಜ್ಯೋತಿ ಯೋಜನೆಯ ಪ್ರಗತಿ ವಿವರ: ಯೋಜನೆ ಆರಂಭದಿಂದ ಜನವರಿ 2026ರವರೆಗೆ ಒಟ್ಟು 278428 ಸ್ಥಾವರಗಳ ಪೈಕಿ 274305 ಸ್ಥಾವರಗಳು ನೋಂದಣಿಯಾಗಿವೆ. ಆ ಪೈಕಿ ತಾಲೂಕಾವಾರು ವಿವರ: ಗದಗ-99240, ಗಜೇಂದ್ರಗಡ-22443, ಲಕ್ಷೆö್ಮÃಶ್ವರ-26543, ಮುಂಡರಗಿ- 32960, ನರಗುಂದ-25308, ರೋಣ-46143, ಶಿರಹಟ್ಟಿ-21668. 31-1-2026ರವರೆಗೆ ನೋಂದಣಿಯಾಗದೇ ಬಾಕಿ ಇರುವ ಸ್ಥಾವರಗಳನ್ನು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಗತಿಯಲ್ಲಿರುತ್ತದೆ.

  • ಹನುಮಂತ ಬೆಂತೂರ.
    ಪ್ರ-ಶಿಕ್ಷಣಾರ್ಥಿ,
    ವಾರ್ತಾ ಮತ್ತು ಸಾ.ಸಂ.ಇಲಾಖೆ, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!