HomeWorld Newsಒಪ್ಪಂದ ಉಲ್ಲಂಘಿಸಿದ್ರೆ ಭೀಕರ ದಾಳಿ: ಕದನ ವಿರಾಮದ ಬಳಿಕ ಟ್ರಂಪ್ ಎಚ್ಚರಿಕೆ

ಒಪ್ಪಂದ ಉಲ್ಲಂಘಿಸಿದ್ರೆ ಭೀಕರ ದಾಳಿ: ಕದನ ವಿರಾಮದ ಬಳಿಕ ಟ್ರಂಪ್ ಎಚ್ಚರಿಕೆ

For Dai;y Updates Join Our whatsapp Group

Spread the love

ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕದನ ವಿರಾಮ ಪಾಲನೆಯವರೆಗೆ ಮಾತ್ರ ಇರಾನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುರಕ್ಷಿತವಾಗಿರುತ್ತವೆ. ಒಪ್ಪಂದವನ್ನು ಉಲ್ಲಂಘಿಸಿದರೆ, ಹಿಂದೆಂದಿಗಿಂತಲೂ ಭೀಕರ ದಾಳಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ಇನ್ನು ಮುಂದೆ ಹಾರ್ಮುಜ್ ಜಲಸಂಧಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡುವುದಿಲ್ಲವೆಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಒಪ್ಪಂದ ಅಂತಿಮಗೊಳ್ಳುವವರೆಗೆ ಇರಾನ್ ಮತ್ತು ಅದರ ಸುತ್ತಮುತ್ತ ಅಮೆರಿಕದ ಪಡೆಗಳನ್ನು ನಿಯೋಜಿಸಲಾಗುವುದು ಎಂದೂ ಹೇಳಿದ್ದಾರೆ.

“ನಮ್ಮ ಸೇನೆ ಸಜ್ಜಾಗಿದ್ದು, ವಿಶ್ರಾಂತಿ ಪಡೆಯುತ್ತಿದೆ. ಅದು ಮುಂದಿನ ವಿಜಯಕ್ಕಾಗಿ ಸಿದ್ಧವಾಗುತ್ತಿದೆ,” ಎಂದು ಟ್ರಂಪ್ ಹೇಳಿದ್ದಾರೆ. ಏಪ್ರಿಲ್ 7ರಂದು ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದೆ. ಈ ಘೋಷಣೆಗೆ ಮುನ್ನ ಇರಾನ್ 10 ಷರತ್ತುಗಳನ್ನು ಮುಂದಿಟ್ಟಿತ್ತು. ಅವುಗಳನ್ನು ಅಮೆರಿಕ ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಕದನ ವಿರಾಮದ ಭವಿಷ್ಯ ಅವಲಂಬಿತವಾಗಿದೆ.

ಇರಾನ್ ನೀಡಿದ 10 ಅಂಶಗಳ ಪ್ರಸ್ತಾವನೆ ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ಎರಡು ವಾರಗಳ ಅವಧಿ, ಅಮೆರಿಕ ಮತ್ತು ಇರಾನ್ ನಡುವೆ ದೀರ್ಘಕಾಲಿಕ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಮಹತ್ವದ ಅವಕಾಶವೆಂದು ಪರಿಗಣಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!