HomeIndia Newsಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ: ಬಿಜೆಪಿ ನಾಯಕರ ವಿರುದ್ಧ FIRಗೆ ಮೋದಿ ಆದೇಶಿಸಲಿ -...

ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ: ಬಿಜೆಪಿ ನಾಯಕರ ವಿರುದ್ಧ FIRಗೆ ಮೋದಿ ಆದೇಶಿಸಲಿ – ರಾಹುಲ್ ಗಾಂಧಿ ಆಗ್ರಹ

For Dai;y Updates Join Our whatsapp Group

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಧಾನಿ ಮೋದಿ ಆದೇಶಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿ, ಖರ್ಗೆ ಅವರ ಹಲ್ದ್ವಾನಿ ಭೇಟಿ ಪ್ರಸ್ತಾಪಿಸಿದರು.

ಖರ್ಗೆ ಅವರು ಭಾಷಣ ಮಾಡಿದ್ದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ ನಡೆಸಲಾಗಿದ್ದು, ಈ ಕುರಿತು ಪ್ರಧಾನಿ ಮಧ್ಯಪ್ರವೇಶಿಸಬೇಕು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಶುದ್ಧೀಕರಣ ಎಂಬುದು ಮೂಲಭೂತವಾಗಿ ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದ್ದು, ಸಂವಿಧಾನವೇ ಇದನ್ನು ನಿಷೇಧಿಸಿದೆ ಎಂದು ಅವರು ಹೇಳಿದರು.

ಇಂತಹ ಆಚರಣೆಗಳು ದಲಿತರನ್ನು ಅಶುದ್ಧರೆಂದು ಬಿಂಬಿಸುತ್ತವೆ ಎಂದ ರಾಹುಲ್, ಈ ರೀತಿಯ ಸಂವಿಧಾನ ವಿರೋಧಿ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೇ ಇಂತಹ ಘಟನೆ ಸಂಭವಿಸುವುದಾದರೆ, ಸಾಮಾನ್ಯ ನಾಗರಿಕರ ವಿರುದ್ಧವೂ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂದಿಗೂ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಾವಿಗಳಿಂದ ನೀರು ಸೇದುವುದನ್ನು ನಿಷೇಧಿಸುವುದು ಮತ್ತು ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಪೇಪರ್ ಕಪ್‌ಗಳನ್ನು ನೀಡುವಂತಹ ತಾರತಮ್ಯದ ಉದಾಹರಣೆಗಳನ್ನು ಪ್ರಸ್ತಾಪಿಸಿದರು. ಮದುವೆ ಮೆರವಣಿಗೆಯಲ್ಲಿ ಕುದುರೆ ಏರುವ ದಲಿತರ ಮೇಲೆ ಕಲ್ಲು ತೂರಾಟ ನಡೆಸುವ ಕಾರಣ ಅವರು ಹೆಲ್ಮೆಟ್ ಧರಿಸಬೇಕಾದ ಪರಿಸ್ಥಿತಿ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಇದೆ ಎಂದು ಹೇಳಿದರು.

ಸಾಧನೆ ಮಾಡುವ ದಲಿತರ ವಿರುದ್ಧವೇ ಆಕ್ರಮಣಗಳು ನಡೆಯುತ್ತಿವೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಖರ್ಗೆ ಭಾಷಣ ಮಾಡಿದ ಸ್ಥಳದ ಶುದ್ಧೀಕರಣ ಕೃತ್ಯವನ್ನು ಬಿಜೆಪಿ-ಆರ್‌ಎಸ್‌ಎಸ್ ಜನರೇ ನಡೆಸಿದ್ದಾರೆ ಎಂದು ಆರೋಪಿಸಿದರು. ಇದೊಂದು ಕ್ರಿಮಿನಲ್ ಚಟುವಟಿಕೆ ಮಾತ್ರವಲ್ಲದೆ, ಅಸ್ಪೃಶ್ಯತೆಯನ್ನು ಮರುಜಾರಿಗೆ ತರುವ ಪ್ರಯತ್ನ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img