HomeKarnataka Newsಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್, ರಾಜೀನಾಮೆ ಕೊಟ್ಟು ಹೋಗಲಿ: ಛಲವಾದಿ ನಾರಾಯಣಸ್ವಾಮಿ

ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್, ರಾಜೀನಾಮೆ ಕೊಟ್ಟು ಹೋಗಲಿ: ಛಲವಾದಿ ನಾರಾಯಣಸ್ವಾಮಿ

For Dai;y Updates Join Our whatsapp Group

ಮೈಸೂರು: ರಾಜ್ಯ ಸರ್ಕಾರದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ‘ಮೋಸ್ಟ್ ಕರೆಪ್ಟ್ ಪರ್ಸನ್’ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತರ ಮಾರಣಹೋಮ ನಡೆಯುತ್ತಿದ್ದರೂ ಗೃಹ ಸಚಿವರು ಒಂದೇ ಒಂದು ಹೇಳಿಕೆ ನೀಡದೆ ಮೌನ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಪ್ರಿಯಾಂಕ್ ಖರ್ಗೆ ತಕ್ಷಣವೇ ರಾಜೀನಾಮೆ ನೀಡಿ ಹೊರಡಲಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಸೋಲಿನ ಭಯದಿಂದ ಲೂಟಿಗೆ ಇಳಿದಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, “ಗೃಹ ಸಚಿವರಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ದಲಿತರ ಉದ್ಧಾರದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರ ಹೆಸರು ಬಳಸಿಕೊಂಡು ಆಸ್ತಿ ಮಾಡಿದ್ದಾರಷ್ಟೇ. ಸಚಿವರ ಸ್ವಕ್ಷೇತ್ರದ ಭಾಗದಲ್ಲೇ 13 ಅಟ್ರಾಸಿಟಿ ಕೇಸ್‌ಗಳು ದಾಖಲಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಚಿವರು ಗೃಹದಿಂದ ಆಚೆ ಬರದೇ ಬರೀ ಆರ್‌ಎಸ್‌ಎಸ್ (RSS) ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆಯವರ ಚಡ್ಡಿ ನೋಡುವ ಬದಲು ತಮ್ಮದನ್ನು ನೋಡಿಕೊಳ್ಳಲಿ. ಆರ್‌ಎಸ್‌ಎಸ್ ಯಾರನ್ನಾದರೂ ಥಳಿಸಲು ಲಾಠಿ ಬಳಸಿದೆಯೇ? ಆರ್‌ಎಸ್‌ಎಸ್ ಮುಗಿಸಲು ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಂದಲೂ ಸಾಧ್ಯವಿಲ್ಲ. ಆರ್‌ಎಸ್‌ಎಸ್ ಮೇಲೆ ಕ್ರಿಮಿನಲ್ ಕೇಸ್‌ಗಳಿಲ್ಲ ಎಂದು ಅವರೇ ಹೇಳಿದ್ದಾರೆ” ಎಂದು ನಾರಾಯಣಸ್ವಾಮಿ ಹಾರಾಯಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಅದು ಚುನಾವಣಾ ಆಯೋಗದ ಕೆಲಸ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಎಸ್‌ಐಆರ್ ನಡೆದಿದೆ, ಆಗ ವಿವಾದ ಆಗಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಸಮಸ್ಯೆ ಉಂಟು ಮಾಡಲು ಹೊರಟಿದೆ. ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗದ ಕಡೆ ‘ವೋಟ್ ಚೋರಿ’ ಎಂದು ಆರೋಪಿಸುತ್ತದೆ. ಎಲ್ಲೂ ಮತ ಕಳ್ಳತನ ನಡೆಯುತ್ತಿಲ್ಲ ಮತ್ತು ನಡೆಯುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img