HomeEntertainmentಮದುವೆ ಬಳಿಕ ಮೊದಲ ಬಾರಿಗೆ ಒಂದೇ ಶೋನಲ್ಲಿ ವಿಜಯ್-ರಶ್ಮಿಕಾ: ಕರಣ್ ಮುಂದೆ ಬಿಚ್ಚಿಡ್ತಾರಾ ದಾಂಪತ್ಯದ ಸೀಕ್ರೆಟ್?

ಮದುವೆ ಬಳಿಕ ಮೊದಲ ಬಾರಿಗೆ ಒಂದೇ ಶೋನಲ್ಲಿ ವಿಜಯ್-ರಶ್ಮಿಕಾ: ಕರಣ್ ಮುಂದೆ ಬಿಚ್ಚಿಡ್ತಾರಾ ದಾಂಪತ್ಯದ ಸೀಕ್ರೆಟ್?

For Dai;y Updates Join Our whatsapp Group

ಟಾಲಿವುಡ್‌ನ ಕ್ಯೂಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ವರ್ಷಗಳ ಪ್ರೀತಿ, ನಂತರ ಮದುವೆ… ಈಗ ಈ ಸ್ಟಾರ್ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಬಾಲಿವುಡ್‌ನ ಅತ್ಯಂತ ಚರ್ಚಿತ ಚಾಟ್ ಶೋಗಳಲ್ಲಿ ಒಂದಾದ ‘ಕಾಫಿ ವಿತ್ ಕರಣ್’ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು… ಕರಣ್ ಜೊಹರ್ ಎದುರು ಒಂದೇ ಕೌಚ್‌ನಲ್ಲಿ ವಿಜಯ್ ಮತ್ತು ರಶ್ಮಿಕಾ ಕುಳಿತಿದ್ದಾರೆ. ಲವ್ ಲೈಫ್‌ನಿಂದ ದಾಂಪತ್ಯದವರೆಗೆ, ಸಿನಿಮಾದಿಂದ ವಿವಾದಗಳವರೆಗೆ ಹಲವು ವಿಚಾರಗಳು ಈ ಎಪಿಸೋಡ್‌ನಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.

ಕರಣ್ ಮುಂದೆ ವಿಜಯ್-ರಶ್ಮಿಕಾ ಲವ್ ಕಹಾನಿ?

‘ಕಾಫಿ ವಿತ್ ಕರಣ್’ ಎಂದರೆ ಸಿನಿಮಾ ಮಾತುಗಳಿಗಿಂತ ಸ್ಟಾರ್‌ಗಳ ಖಾಸಗಿ ಜೀವನದ ಪ್ರಶ್ನೆಗಳೇ ಹೆಚ್ಚು ಸದ್ದು ಮಾಡುತ್ತವೆ. ಕರಣ್ ಜೊಹರ್ ಕೇಳುವ ನೇರ ಮತ್ತು ಅನಿರೀಕ್ಷಿತ ಪ್ರಶ್ನೆಗಳು ಹಲವು ಬಾರಿ ಸೆಲೆಬ್ರಿಟಿಗಳಿಂದ ಕುತೂಹಲಕಾರಿ ಉತ್ತರಗಳನ್ನು ಹೊರತೆಗೆದಿವೆ. ಇದೀಗ ಅದೇ ಹಾಟ್ ಸೀಟ್‌ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಅಕ್ಟೋಬರ್ 14ರಿಂದ ಹೊಸ ಸೀಸನ್ ಪ್ರಸಾರವಾಗಲಿದ್ದು, ಮೊದಲ ಎಪಿಸೋಡ್‌ನಲ್ಲೇ ವಿಜಯ್-ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಎಪಿಸೋಡ್ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಇಬ್ಬರ ಲವ್ ಸ್ಟೋರಿ ಹೇಗೆ ಶುರುವಾಯಿತು? ಮದುವೆ ಬಳಿಕ ಜೀವನ ಹೇಗಿದೆ? ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಇಷ್ಟವಾಗುವ ಮತ್ತು ಇಷ್ಟವಾಗದ ವಿಷಯಗಳೇನು? ಎಂಬ ಪ್ರಶ್ನೆಗಳು ಕರಣ್ ಕಡೆಯಿಂದ ಬರಬಹುದಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ವಿಜಯ್‌ಗೆ ಇದು ಹೊಸದಲ್ಲ… ರಶ್ಮಿಕಾಗೆ ಫಸ್ಟ್ ಟೈಮ್!

ವಿಜಯ್ ದೇವರಕೊಂಡಗೆ ‘ಕಾಫಿ ವಿತ್ ಕರಣ್’ ಹೊಸ ಅನುಭವವೇನಲ್ಲ. ಈ ಹಿಂದೆ ಏಳನೇ ಸೀಸನ್‌ನ ನಾಲ್ಕನೇ ಎಪಿಸೋಡ್‌ನಲ್ಲಿ ನಟಿ ಅನನ್ಯಾ ಪಾಂಡೆ ಜೊತೆ ವಿಜಯ್ ಭಾಗವಹಿಸಿದ್ದರು. ಆ ಸಮಯದಲ್ಲಿ ವಿಜಯ್ ನಟನೆಯ ‘ಲೈಗರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಸಿನಿಮಾ ಪ್ರಚಾರದ ಭಾಗವಾಗಿ ಅನನ್ಯಾ ಜೊತೆ ಕರಣ್ ಶೋನಲ್ಲಿ ವಿಜಯ್ ಕಾಣಿಸಿಕೊಂಡಿದ್ದರು. ಆದರೆ ರಶ್ಮಿಕಾ ಮಂದಣ್ಣಗೆ ಇದು ಮೊದಲ ‘ಕಾಫಿ ವಿತ್ ಕರಣ್’ ಅನುಭವ. ಅದರಲ್ಲೂ ವಿಜಯ್ ಜೊತೆಗೇ ಮೊದಲ ಬಾರಿ ಶೋಗೆ ಬರುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವ ‘ರಣಬಾಲಿ’ ಸಿನಿಮಾ ಇದೇ ತಿಂಗಳ 16ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಜೋಡಿಯ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮತ್ತೊಮ್ಮೆ ಹೇಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಒಂದೆಡೆ ‘ರಣಬಾಲಿ’ ಸಿನಿಮಾ… ಮತ್ತೊಂದೆಡೆ ‘ಕಾಫಿ ವಿತ್ ಕರಣ್’ನಲ್ಲಿ ಜೋಡಿಯ ಎಂಟ್ರಿ. ಹೀಗಾಗಿ ವಿಜಯ್-ರಶ್ಮಿಕಾ ಅಭಿಮಾನಿಗಳಿಗೆ ಅಕ್ಟೋಬರ್ ತಿಂಗಳು ಡಬಲ್ ಟ್ರೀಟ್ ಆಗುವ ಸೂಚನೆ ಸಿಕ್ಕಿದೆ. ಆದರೆ ಎಲ್ಲರ ಕಣ್ಣು ಈಗ ಕರಣ್ ಜೊಹರ್ ಕೇಳಲಿರುವ ಪ್ರಶ್ನೆಗಳ ಮೇಲೆಯೇ ಇದೆ. ವಿಜಯ್-ರಶ್ಮಿಕಾ ತಮ್ಮ ಲವ್ ಮತ್ತು ದಾಂಪತ್ಯದ ಬಗ್ಗೆ ಎಷ್ಟು ಓಪನ್ ಆಗಿ ಮಾತನಾಡುತ್ತಾರೆ? ಕರಣ್ ಕೇಳುವ ಪ್ರಶ್ನೆಗಳಿಗೆ ಯಾವ ಸೀಕ್ರೆಟ್‌ಗಳು ಹೊರಬೀಳುತ್ತವೆ? ಎನ್ನುವುದೇ ಈಗ ಅಭಿಮಾನಿಗಳ ಕುತೂಹಲ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img