ನೆಲಮಂಗಲ:- ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಸಮೀಪದ ಗುಡ್ಡದಹಳ್ಳಿಯಲ್ಲಿ ಮನೆಯೊಳಗೆ ಪುಟ್ಟ ಮಕ್ಕಳು ಮಲಗಿದ್ದ ಚಾಪೆಯ ಕೆಳಗೆ ನಾಗರಹಾವು ಅಡಗಿದ್ದ ಆತಂಕಕಾರಿ ಘಟನೆ ನಡೆದಿದೆ.
ಮಕ್ಕಳು ಮಲಗಿದ್ದ ಚಾಪೆಯ ಕೆಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಕಂಡುಬಂದಿದ್ದು, ಇದನ್ನು ಗಮನಿಸಿದ ಪೋಷಕರು ತಕ್ಷಣ ಗಾಬರಿಗೊಂಡಿದ್ದಾರೆ.
ತಕ್ಷಣವೇ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಪ್ರಶಾಂತ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಸಮಯೋಚಿತ ಕ್ರಮದಿಂದಾಗಿ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಹಾವನ್ನು ಹಿಡಿಯುವ ದೃಶ್ಯಗಳು ಸ್ಥಳದಲ್ಲಿ ರೋಮಾಂಚನ ಸೃಷ್ಟಿ ಮಾಡಿತ್ತು.



