HomeEntertainmentಮಹಿಳಾ ನಿರ್ದೇಶಕಿಯರ ಪೈಕಿ ಮುಂಚೂಣಿಯ ವಿಜಯಾ ಮೆಹ್ತಾ ಇನ್ನಿಲ್ಲ; ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಮಹಿಳಾ ನಿರ್ದೇಶಕಿಯರ ಪೈಕಿ ಮುಂಚೂಣಿಯ ವಿಜಯಾ ಮೆಹ್ತಾ ಇನ್ನಿಲ್ಲ; ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

For Dai;y Updates Join Our whatsapp Group

ಮುಂಬೈ: ಭಾರತೀಯ ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ನಟಿ-ನಿರ್ದೇಶಕಿ ವಿಜಯಾ ಮೆಹ್ತಾ ಅವರು ಸೋಮವಾರ ತಡರಾತ್ರಿ ವಿಧಿವಶರಾಗಿದ್ದಾರೆ. 92 ವರ್ಷದ ಅವರು ಹಲವು ದಶಕಗಳ ಕಾಲ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದು, ಅವರ ನಿಧನದಿಂದ ಭಾರತೀಯ ಕಲಾ ಲೋಕ ಮಹತ್ವದ ವ್ಯಕ್ತಿತ್ವವೊಂದನ್ನು ಕಳೆದುಕೊಂಡಂತಾಗಿದೆ.

ಮಹಿಳಾ ನಿರ್ದೇಶಕಿಯರು ವಿರಳವಾಗಿದ್ದ ಕಾಲದಲ್ಲೇ ವಿಜಯಾ ಮೆಹ್ತಾ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಮುಂಬೈನ ರಂಗಾಯಣ ರಂಗ ತಂಡದ ಸ್ಥಾಪಕ ಸದಸ್ಯೆಯಾಗಿದ್ದ ಅವರು ವಿಜಯ್ ತೆಂಡೂಲ್ಕರ್, ಅರವಿಂದ್ ದೇಶಪಾಂಡೆ ಮತ್ತು ಶ್ರೀರಾಮ್ ಲಾಗೂ ಅವರೊಂದಿಗೆ ಮರಾಠಿ ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇಬ್ರಾಹಿಂ ಅಲ್ಕಾಜಿ ಹಾಗೂ ಆದಿ ಮರ್ಜ್‌ಬಾನ್ ಅವರ ಮಾರ್ಗದರ್ಶನದಲ್ಲಿ ರಂಗಭೂಮಿ ತರಬೇತಿ ಪಡೆದಿದ್ದ ವಿಜಯಾ ಮೆಹ್ತಾ, 1975ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. 1986ರಲ್ಲಿ ಬಿಡುಗಡೆಯಾದ ‘ರಾವ್ ಸಾಹೇಬ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.

1980ರ ದಶಕದಲ್ಲಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟ ಅವರು ದೂರದರ್ಶನ ಚಿತ್ರಗಳ ಜೊತೆಗೆ ‘ರಾವ್ ಸಾಹೇಬ್’ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ‘ಪೆಸ್ತೂಂಜಿ’ ಚಿತ್ರಗಳನ್ನು ನಿರ್ದೇಶಿಸಿ ಪ್ರಶಂಸೆ ಗಳಿಸಿದರು. ನಸೀರುದ್ದೀನ್ ಶಾ, ಶಬಾನಾ ಆಜ್ಮಿ, ಕಿರಣ್ ಖೇರ್ ಹಾಗೂ ಅನುಪಮ್ ಖೇರ್ ಅಭಿನಯಿಸಿದ್ದ ‘ಪೆಸ್ತೂಂಜಿ’ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ.

‘ಭಾಯಿ’ ಎಂದೇ ಆತ್ಮೀಯವಾಗಿ ಕರೆಸಿಕೊಳ್ಳುತ್ತಿದ್ದ ವಿಜಯಾ ಮೆಹ್ತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ವಿಜಯಾ ಮೆಹ್ತಾ ಅವರ ಕೊಡುಗೆ ಸದಾ ಸ್ಮರಣೀಯ. ಅವರ ಸೃಜನಶೀಲತೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ” ಎಂದು ಪ್ರಧಾನಿ ಮೋದಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img