HomeIndia Newsಕೋವಿಡ್ ಗಿಂತ ಡೆಡ್ಲಿ ಎಬೋಲಾ ಭೀತಿ: ಭಾರತದಲ್ಲಿ ಹೈ ಅಲರ್ಟ್, ಏರ್ ಪೋರ್ಟ್ ಗಳಲ್ಲಿ ಕಟ್ಟುನಿಟ್ಟಿನ...

ಕೋವಿಡ್ ಗಿಂತ ಡೆಡ್ಲಿ ಎಬೋಲಾ ಭೀತಿ: ಭಾರತದಲ್ಲಿ ಹೈ ಅಲರ್ಟ್, ಏರ್ ಪೋರ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ

For Dai;y Updates Join Our whatsapp Group

Spread the love

ನವದೆಹಲಿ/ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಎಬೋಲಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಕೋವಿಡ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಡುವ ಎಬೋಲಾ ವೈರಸ್‌ ಹಾವಳಿ ಹಿನ್ನೆಲೆ ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಲಾಗಿದೆ.

ಹೈ-ರಿಸ್ಕ್‌ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಪ್ರಯಾಣದ ಹಿನ್ನೆಲೆ ಹಾಗೂ ಆರೋಗ್ಯ ಮಾಹಿತಿ ಕಡ್ಡಾಯವಾಗಿ ದಾಖಲಿಸಿಕೊಳ್ಳಲಾಗುತ್ತಿದೆ.

ಇದೇ ವೇಳೆ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಮತ್ತು ಆರೋಗ್ಯ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ರಾಜ್ಯ ಆರೋಗ್ಯ ಇಲಾಖೆಗೆ ನೀಡಿರುವ ಪ್ರಮುಖ ಸೂಚನೆಗಳು:

  • ಕ್ವಾರಂಟೈನ್‌ ಕೇಂದ್ರಗಳನ್ನು ಗುರುತಿಸುವುದು
  • ಐಸೋಲೇಷನ್‌ ಸೌಲಭ್ಯ ಹೊಂದಿದ ಪ್ರತ್ಯೇಕ ಕೇಂದ್ರಗಳನ್ನು ಸಿದ್ಧಪಡಿಸುವುದು
  • ಹೆಲ್ತ್‌ ಸ್ಕ್ರೀನಿಂಗ್‌ಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
  • ಶಂಕಿತ ಪ್ರಕರಣಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ ವ್ಯವಸ್ಥೆ
  • ಎಬೋಲಾ ಚಿಕಿತ್ಸೆ ಮತ್ತು ನಿರ್ವಹಣೆ ಕುರಿತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು

ವಿಮಾನ ನಿಲ್ದಾಣಗಳಿಗೆ ಹೊರಡಿಸಿರುವ ಮಾರ್ಗಸೂಚಿಗಳು:

  • ಟ್ರಿಪಲ್‌ ಲೇಯರ್‌ ಮಾಸ್ಕ್‌ ಧರಿಸುವುದು ಕಡ್ಡಾಯ
  • ಹ್ಯಾಂಡ್‌ ಗ್ಲೌಸ್‌ ಬಳಕೆ
  • ಸ್ಯಾನಿಟೈಸರ್‌ ಕಡ್ಡಾಯವಾಗಿ ಇಟ್ಟುಕೊಳ್ಳುವುದು
  • ಶಂಕಿತ ಪ್ರಕರಣ ಪತ್ತೆಯಾದ ಕೂಡಲೇ ವರದಿ ಸಲ್ಲಿಸುವುದು
  • ಪ್ರಯಾಣಿಕರ ಟ್ರಾವೆಲ್‌ ಹಿಸ್ಟರಿ ದಾಖಲಿಸುವುದು
  • ಸೆಲ್ಫ್‌ ಡಿಕ್ಲರೇಷನ್‌ ಫಾರ್ಮ್‌ ಭರ್ತಿ ಮಾಡಿಸುವುದು
  • ಎಬೋಲಾ ಪೀಡಿತ ದೇಶಗಳಿಂದ ಬಂದವರ ವಿವರ ಸಂಗ್ರಹಣೆ

ಎಬೋಲಾ ಸೋಂಕಿತರಿಗೆ ಐಸೋಲೇಷನ್‌ ಕ್ರಮಗಳು:

  • ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ
  • ಬಾತ್‌ರೂಮ್‌ ಹೊಂದಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು
  • ಕೊಠಡಿಗೆ ಪ್ರವೇಶಿಸುವ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‌ ಕಡ್ಡಾಯ
  • ಪ್ರತಿ ಎರಡು ಗಂಟೆಗೆ ಆಮ್ಲಜನಕ ಮಟ್ಟ ಪರೀಕ್ಷೆ
  • ನಿಯಮಿತ ಕಾರ್ಡಿಯಾಕ್‌ ಮಾನಿಟರಿಂಗ್‌

ಹೈ-ರಿಸ್ಕ್‌ ದೇಶಗಳಿಂದ ಬಂದ ಪ್ರಯಾಣಿಕರಿಗೆ ಸೂಚನೆಗಳು:

  • 21 ದಿನಗಳ ಒಳಗೆ ಯಾವುದೇ ರೋಗ ಲಕ್ಷಣ ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು
  • ಜ್ವರ, ವಾಂತಿ, ದೌರ್ಬಲ್ಯ ಸೇರಿ ಯಾವುದೇ ಲಕ್ಷಣ ಕಂಡರೂ ವೈದ್ಯರನ್ನು ಸಂಪರ್ಕಿಸುವುದು
  • ಪ್ರಯಾಣದ ಸಂಪೂರ್ಣ ಮಾಹಿತಿ ಆರೋಗ್ಯ ಅಧಿಕಾರಿಗಳಿಗೆ ನೀಡುವುದು
  • ವಿಮಾನ ನಿಲ್ದಾಣ ತಪಾಸಣೆಯ ನಂತರ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು

ಆರೋಗ್ಯ ತಜ್ಞರ ಪ್ರಕಾರ, ಎಬೋಲಾ ವೈರಸ್‌ ಸೋಂಕಿನ ಮರಣ ಪ್ರಮಾಣ ಸರಾಸರಿ ಶೇ.50ರಷ್ಟಿದ್ದು, ಕೆಲ ಸಂದರ್ಭಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!