ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲಿಯೂ ತೊಡಗಿಸಿ

0
squai
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾರ್ಚ್ ತಿಂಗಳ ಆರಂಭದಲ್ಲಿ ಥೈಲ್ಯಾಂಡ್‌ನ ಪುಕೆಟ್ ನಗರದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಪಟ್ಟಣದ ವಿದ್ಯಾರ್ಥಿಗಳು ದೇಶವನ್ನು ಪ್ರತಿನಿಧಿಸುವ ಮೂಲಕ ಉತ್ತಮ ಸಾಧನೆ ಮಾಡಿ, ದೇಶಕ್ಕೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜೈ ಕರ್ನಾಟಕ ಸಂಘಟನೆಯ ವತಿಯಿಂದ ಸಾಧಕ ವಿದ್ಯಾರ್ಥಿಗಳು ಹಾಗೂ ತರಬೇತಿದಾರ ಸೈಯದ್ ರಫೀಕ್ ಪೀರಜಾದೆ ಅವರನ್ನು ಗೌರವಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜೈ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವಾಣ್ ಮತ್ತು ತಾಲೂಕಾಧ್ಯಕ್ಷ ಇಸ್ಮಾಯಿಲ್ ಆಡೂರ ಮಾತನಾಡಿ, ಲಕ್ಷ್ಮೇಶ್ವರದ ಮಕ್ಕಳು ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ನಲ್ಲಿ ಭಾಗವಹಿಸಿರುವದು ಹೆಮ್ಮೆಯ ಸಂಗತಿಯಾಗಿದೆ. ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಿದ ಇವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಭಾಗವಹಿಸಿದ್ದ 8 ಮಕ್ಕಳಲ್ಲಿ ಐವರು ಬಂಗಾರ, ಒಂದು ಬೆಳ್ಳಿ ಪದಕದೊಂದಿಗೆ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿರುವದು ಹೆಮ್ಮೆಯ ಸಂಗತಿ.

ಇಂತಹ ಸಾಧನೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಇಂತಹ ಕ್ರೀಡೆಗಳಲ್ಲಿ ಬಾಗವಹಿಸಲು ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆಗೆ ನೀರೆರೆಯಬೇಕು ಎಂದು ಮನವಿ ಮಾಡಿದರು.

ಅತಿಥಿಗಳಾಗಿ ಆಗಮಿಸಿ ಕರವೇ ಜಿಲ್ಹಾಧ್ಯಕ್ಷ ಶರಣು ಗೋಡಿ, ಇಸಾಕ್‌ಭಾಷಾ ಹರಪನಹಳ್ಳಿ, ಮಹಮದಗೌಸ್ ಹುಲಗೂರ, ನಾಗರಾಜ ಕ್ಷತ್ರಿಯ, ಶರಣಪ್ಪ ಕೆರೆಕೊಪ್ಪದ, ಬಸವಣೆಪ್ಪ ಮೂಕಿ, ಮಂಜುನಾಥ ಶಿರಹಟ್ಟಿ, ಅಬ್ದುಲಖಾದರ ಕೊಪ್ಪಳ, ಹಾಲಪ್ಪ ಬಂಡಾರಿ, ಯಲ್ಲಪ್ಪ ಹಂಜಗಿ, ಹಜರತಪಟೇಲ್ ಬಸಣ್ಣ ಮೇಲ್ಮುರಿ ಸೇರಿದಂತೆ ಅನೇಕರಿದ್ದರು.

ಸ್ಕ್ವಾಯ್ ಮಾರ್ಷಲ್ ಆರ್ಟ್ ತರಬೇತುದಾರ ಸಯ್ಯದ ರಫೀಕ್ ಪೀರಜಾದೆ ಚಿನ್ನದ ಪದಕ ಪಡೆದ ಮಾನ್ಯತಾ ಕೋಟಿಮಠ, ಮನೋಜ್ಞ ಕೋಟಿಮಠ, ಅಯಾನ್ ಮಿರ್ಜಾ, ಸುಹಾನ್ ಮಿರ್ಜಾ, ಬೆಳ್ಳಿಯ ಪದಕ ಪಡೆದ ಮೋಹನ್ ಪತ್ತಾರ ಹಾಗೂ ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿದ ಅನಮ್ ಸೂರಣಗಿ ಅವರನ್ನು ಸನ್ಮಾನಿಸಲಾಯಿತು.


Spread the love

LEAVE A REPLY

Please enter your comment!
Please enter your name here