ಸಿಐಟಿಯು ವತಿಯಿಂದ ಜ.8ರಂದು ಗಜೇಂದ್ರಗಡ ಬಂದ್ ಕರೆ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡದ ಪುರಸಭೆ ಬೀದಿ ಬದಿ ವ್ಯಾಪಾರಸ್ಥರನ್ನು ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಗೆ ಮಣಿದು ಏಕಾಏಕಿ ನಗರದ ಜೋಡು ರಸ್ತೆಯಿಂದ ಒಕ್ಕಲೆಬ್ಬಿಸಿ ನ್ಯಾಯಾಲಯದದಲ್ಲಿ ಚಾಲ್ತಿಯಿರುವ ಪ್ರಕರಣದ ಅನಧಿಕೃತವಾದ ಬಯಲು ಜಾಗೆಗೆ ಸ್ಥಳಾಚಿತರಿಸಿರುವುದನ್ನು ವಿರೋಧಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್( ಸಿಐಟಿಯು) ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಬೀದಿ ಬದಿ ವ್ಯಾಪಾರಸ್ಥರು ಜ. 8ರಂದು ಗಜೇಂದ್ರಗಡ ಬಂದ್‌ಗೆ ಕರೆ ನೀಡಿವೆ.

Advertisement

ಪುರಸಭೆ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದು, ಅವರಿಗೆ ಕಾಯ್ದೆ-ಕಾನೂನುಗಳನ್ನು, ನಿಯಮಗಳನ್ನು ಪಾಲಿಸುವ ಯಾವುದೇ ಇಚ್ಛಾಶಕ್ತಿ ಇಲ್ಲವಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ಪಾಲನೆಯ ಅರಿವು ಇದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದುವರೆಗೂ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈಗಾಲಾದರೂ ಬಡಪಾಯಿ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಯಲು ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸಿದೆ.


Spread the love

LEAVE A REPLY

Please enter your comment!
Please enter your name here