HomeSports NewsIPL 2026: ಲಕ್ನೋ ವಿರುದ್ಧ ಮುಂಬೈಗೆ ವಿಕೆಟ್‌ಗಳ ಜಯ! ಪ್ಲೇ ಆಫ್ ರೇಸ್ ನಿಂದ LSG...

IPL 2026: ಲಕ್ನೋ ವಿರುದ್ಧ ಮುಂಬೈಗೆ ವಿಕೆಟ್‌ಗಳ ಜಯ! ಪ್ಲೇ ಆಫ್ ರೇಸ್ ನಿಂದ LSG ಔಟ್

For Dai;y Updates Join Our whatsapp Group

Spread the love

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಪೂರನ್ ಕೇವಲ 21 ಎಸೆತಗಳಲ್ಲಿ 63 ರನ್ ಗಳಿಸಿ ಮಿಂಚಿದರು. ಮಾರ್ಷ್ 25 ಎಸೆತಗಳಲ್ಲಿ 44 ರನ್ ದಾಖಲಿಸಿದರು. ನಂತರದ ಹಂತದಲ್ಲಿ ಮಾಕ್ರಮ್ ಮತ್ತು ಹಿಮ್ಮತ್ ಸಿಂಗ್ ಅವರ ಉತ್ತಮ ಆಟದಿಂದ ತಂಡ ಬಲವಾದ ಮೊತ್ತ ದಾಖಲಿಸಿತು.

ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರಯಾನ್ ರಿಕಲ್ಟನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ರಿಕಲ್ಟನ್ 32 ಎಸೆತಗಳಲ್ಲಿ 83 ರನ್ ಗಳಿಸಿ 8 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ಅಬ್ಬರಿಸಿದರು. ರೋಹಿತ್ ಶರ್ಮಾ ಕೂಡ 44 ಎಸೆತಗಳಲ್ಲಿ 84 ರನ್ ಸಿಡಿಸಿ ತಂಡಕ್ಕೆ ಬಲ ನೀಡಿದರು.

ಕೊನೆಯಲ್ಲಿ ನಮನ್ ಧೀರ್ 12 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ಮುಂಬೈಗೆ ಗೆಲುವಿನ ಮುಟ್ಟಿಸಿದರು. ಮುಂಬೈ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ರೋಚಕ ಜಯ ಸಾಧಿಸಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!