Home Gadag News ಮಣ್ಣನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಮಣ್ಣು ವಿಜ್ಞಾನಿ ನಾರಾಯಣ ಬಂಡಿ

ಮಣ್ಣನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಮಣ್ಣು ವಿಜ್ಞಾನಿ ನಾರಾಯಣ ಬಂಡಿ

0
ಮಣ್ಣನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಮಣ್ಣು ವಿಜ್ಞಾನಿ ನಾರಾಯಣ ಬಂಡಿ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣು ಬಹಳ ಮುಖ್ಯವಾದ ಸಂಪತ್ತು. ನಮ್ಮ ಹೊಲದಲ್ಲಿರುವ ಮಣ್ಣು ಎಷ್ಟೋ ವರ್ಷಗಳ ನೈಸರ್ಗಿಕ ಪ್ರಕ್ರಿಯೆಯಿಂದ ರೂಪುಗೊಂಡಿದೆ. ಅಂತಹ ಮಣ್ಣನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ನಾರಾಯಣ ಬಂಡಿ ಅಭಿಪ್ರಾಯಪಟ್ಟರು.

ಅವರು ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿಯಲ್ಲಿ ರೋಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಮಿತ್ರರಿಗಾಗಿ ನಡೆದ ತಾಂತ್ರಿಕ ತರಬೇತಿಯಲ್ಲಿ ಉಪನ್ಯಾಸ ನೀಡಿದರು.

ಎಲ್.ಆರ್.ಐ ಕಾರ್ಡಿನಲ್ಲಿ ಮಣ್ಣಿನ ಗುಣಧರ್ಮ, ಬೆಳೆ ಸೂಕ್ತತೆ ಹಾಗೂ ಅವಶ್ಯಕ ಪೋಷಕಾಂಶದ ಬಗ್ಗೆ ವಿವರವಾದ ಮಾಹಿತಿ ಇರುತ್ತದೆ. ಅದನ್ನು ರೈತರಿಗೆ ತಲುಪಿಸುವ ಕೆಲಸವನ್ನು ಕೃಷಿ ಮಿತ್ರರು ಮಾಡಬೇಕು ಎಂದರು.

ಉಪ ಕೃಷಿ ನಿರ್ದೇಶಕರಾದ ಬಿ.ಆರ್. ಫಾಲಾಕ್ಷಗೌಡ ಮಾತನಾಡಿ, ಎಲ್.ಆರ್.ಐ ಕಾರ್ಡ್ ಬಹಳ ಮುಖ್ಯವಾದ ಮಾಹಿತಿಯನ್ನು ಹೊಂದಿರುತ್ತದೆ. ಅದರ ಮಾಹಿತಿಯನ್ನು ರೈತರಿಗೆ ಸರಿಯಾಗಿ ತಿಳಿಸಬೇಕು. ಅಲ್ಲದೆ, ಕೃಷಿ ಮಿತ್ರರು ಉತ್ತಮವಾದ ಬೆಂಬಲ ನೀಡಿ ಯೋಜನೆಯನ್ನು ಯಶಸ್ವಿ ಮಾಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎಫ್. ತಹಸೀಲ್ದಾರ ಮಾತನಾಡಿ, ರಿವಾರ್ಡ್ ಯೋಜನೆ ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿದೆ. ಅದರ ಮುಖ್ಯವಾದ ಭಾಗವಾದ ಎಲ್.ಆರ್.ಐ ಕಾರ್ಡ್ ವಿತರಣೆಯಾಗಿದ್ದು, ಅದು ಯಶಸ್ವಿಗೊಳಿಸಲು ಸಿಬ್ಬಂದಿಗಳು ಶ್ರಮಿಸಬೇಕು ಎಂದರು.

ಯೋಜನೆಯ ಸಿಬ್ಬಂದಿ ಮಂಜುನಾಥ ಬ್ಯಾಳಿ ಮಾತನಾಡಿದರು. ತಾಂತ್ರಿಕ ಅಧಿಕಾರಿ ಗೋಣಿಬಸಪ್ಪ ಇದ್ದರು. ದೀಪಾ ಕರೀಗೌಡ್ರು ಪ್ರಾರ್ಥಿಸಿದರು. ಶಬೀನಾ ಪಲ್ಲೇದ ಸ್ವಾಗತಿಸಿದರು, ದ್ರಾಕ್ಷಾಯಿಣಿ ಕುರ್ತಕೋಟಿ ನಿರೂಪಿಸಿದರು. ಪಲ್ಲವಿ ಪೂಜಾರ ವಂದಿಸಿದರು.


Spread the love

LEAVE A REPLY

Please enter your comment!
Please enter your name here