ಇಂಡಿಯನ್ ಪ್ರೀಮಿಯರ್ ಲೀಗ್‌ನ 29ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿದೆ. ಈ ಸೋಲಿನ ಬಳಿಕ ಎಲ್ಲರ ಗಮನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರತ್ತ ಹರಿದಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 155 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೆಕೆಆರ್ 19.4 ಓವರ್‌ಗಳಲ್ಲಿ 161 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.
ಕೆಕೆಆರ್ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದರೆ, ಆರ್‌ಆರ್ ಪರ ಆಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಸೋಲಿನ ನೋವಿನಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಪಂದ್ಯದಲ್ಲಿ ವೈಭವ್ ಕೇವಲ 28 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು. ಆದರೆ ವರುಣ್ ಚಕ್ರವರ್ತಿ ಎಸೆದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಔಟ್ ಆದದ್ದು ಪಂದ್ಯದ ತಿರುವಾಗಿತು.
ವೈಭವ್ ಔಟಾದ ಬಳಿಕ ರಾಜಸ್ಥಾನ್ ತಂಡದ ರನ್‌ಗತಿ ಕುಸಿತ ಕಂಡು, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ತಂಡ 155 ರನ್‌ಗಳಿಗೆ ಸೀಮಿತವಾಯಿತು.
ಅಲ್ಪ ಮೊತ್ತವಿದ್ದರೂ ಆರ್‌ಆರ್ ಬೌಲರ್‌ಗಳು ಹೋರಾಟ ನಡೆಸಿದರು. ಕೊನೆಯ ಮೂರು ಓವರ್‌ಗಳಿಗೆ ಕೆಕೆಆರ್‌ಗೆ 28 ರನ್ ಬೇಕಿದ್ದ ಸಂದರ್ಭದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅಗತ್ಯ ರನ್‌ಗಳನ್ನು ಸುಲಭವಾಗಿ ಗಳಿಸಿದ ಕೆಕೆಆರ್ ಗೆಲುವು ಸಾಧಿಸಿತು.
ಪಂದ್ಯ ಅಂತ್ಯಗೊಂಡ ಬಳಿಕ ಭಾವುಕರಾದ ವೈಭವ್ ಮೈದಾನದ ಹೊರಗೆ ಕುಳಿತು ಕಣ್ಣೀರಿಟ್ಟರು. ಈ ವೇಳೆ ಎರಡೂ ತಂಡದ ಆಟಗಾರರು ಅವರನ್ನು ಸಮಾಧಾನಪಡಿಸಿದರು. ಯುವ ಆಟಗಾರನ ಈ ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.



