HomeKarnataka NewsKPSC ಪಶುವೈದ್ಯಾಧಿಕಾರಿ ಹಗರಣ: ಹೈಕೋರ್ಟ್ ನ SIT ರಚನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ!

KPSC ಪಶುವೈದ್ಯಾಧಿಕಾರಿ ಹಗರಣ: ಹೈಕೋರ್ಟ್ ನ SIT ರಚನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ!

For Dai;y Updates Join Our whatsapp Group

ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ಆದೇಶಿಸಿದ್ದ ವಿಶೇಷ ತನಿಖಾ ತಂಡ (SIT) ರಚನೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಪ್ರಶ್ನೆ: ಹೈಕೋರ್ಟ್ ಆದೇಶದಂತೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಐವರು ಅಧಿಕಾರಿಗಳ ತಂಡವು 100 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಿದೆ. ಆದರೆ, ಈಗಾಗಲೇ ಪ್ರಕರಣದ ಶೇಕಡಾ 80ರಷ್ಟು ತನಿಖೆಯನ್ನು ಸಿಐಡಿ (CID) ಪೂರ್ಣಗೊಳಿಸಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಿ, ಸಾಕ್ಷ್ಯಗಳನ್ನು ಕಲೆಹಾಕಿ ಹಣವನ್ನು ಜಪ್ತಿ ಮಾಡಿದೆ. ಹೀಗಿರುವಾಗ ಮತ್ತೊಂದು ತನಿಖಾ ತಂಡ ರಚನೆಯ ಅಗತ್ಯವೇನಿದೆ ಎಂದು ಸರ್ಕಾರ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್‌ಗೆ ಸರ್ಕಾರ ನೀಡಿದ 4 ಪ್ರಮುಖ ಕಾರಣಗಳು:

  1. ಸಿಬಿಐ ಬದಲಿಗೆ ಎಸ್‌ಐಟಿ: ಮೂಲ ಅರ್ಜಿದಾರರು ಸಿಬಿಐ (CBI) ತನಿಖೆಗೆ ಮನವಿ ಮಾಡಿದ್ದರೂ, ಹೈಕೋರ್ಟ್ ಎಸ್‌ಐಟಿ ರಚನೆ ಮಾಡಿರುವುದು ಸರಿಯಲ್ಲ.
  2. ಅಧಿಕಾರಿಗಳ ನೇಮಕ: 5 ಅಧಿಕಾರಿಗಳ ಎಸ್‌ಐಟಿ ತಂಡ ರಚನೆ ಮಾಡಿರುವುದು ಸೂಕ್ತವಲ್ಲ.
  3. ಸಿಐಡಿ ತನಿಖೆಯ ಲೋಪ ಉಲ್ಲೇಖಿಸಿಲ್ಲ: ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ ಏನೆಲ್ಲಾ ಲೋಪಗಳಿವೆ ಎಂಬುದನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಸರಿಯಾಗಿ ಉಲ್ಲೇಖಿಸಿಲ್ಲ.
  4. ನಂತರದ ತನಿಖಾ ಮಾಹಿತಿ ನಿರ್ಲಕ್ಷ್ಯ: ಆಗಸ್ಟ್ 24ರಂದು ತನಿಖಾ ವರದಿ ಪಡೆದ ನಂತರ ಸಿಐಡಿ ನಡೆಸಿದ ತನಿಖಾ ಮಾಹಿತಿಯನ್ನು ಹೈಕೋರ್ಟ್ ಪರಿಗಣಿಸಿಲ್ಲ.

ಈ ಎಲ್ಲಾ ಅಂಶಗಳನ್ನು ಆಕ್ಷೇಪಿಸಿರುವ ರಾಜ್ಯ ಸರ್ಕಾರ, ಹೈಕೋರ್ಟ್ ಹೊರಡಿಸಿರುವ ಎಸ್‌ಐಟಿ ರಚನೆಯ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img