Home Blog Page 16

ಜಮೀನು ವ್ಯಾಜ್ಯ: ರಾಡ್, ದೊಣ್ಣೆಯಿಂದ ವಕೀಲನ ಮೇಲೆ ಹಲ್ಲೆ! 19 ಜನರ ವಿರುದ್ದ ಕೇಸ್ ದಾಖಲು

0

ದೊಡ್ಡಬಳ್ಳಾಪುರ:- ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಜರುಗಿದೆ.

ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಈ ಹಲ್ಲೆ ನಡೆದಿದೆ. ಮುಖಕ್ಕೆ ಖಾರದ ಪುಡಿ ಎರಚಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ ನಡೆದಿದೆ.

ಸ್ಥಳದಲ್ಲಿ ಪೊಲೀಸರು ಇದ್ದರೂ ಕ್ಯಾರೆ ಎನ್ನದೆ ಗುಂಪು ಹಲ್ಲೆ ನಡೆಸಿದೆ. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಗುಂಪು ಹಲ್ಲೆ ನಡೆಸಿ ದರ್ಪ ತೋರಿದೆ. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Gold Rate: ಇಳಿಕೆ ಕಂಡ ಚಿನ್ನದ ದರ, ಗ್ರಾಂ ಎಷ್ಟು ಗೊತ್ತಾ!? ಇಲ್ಲಿದೆ ದರಪಟ್ಟಿ!

0

ಕಳೆದ ವಾರ ನಾಲ್ಕು ದಿನ ಏರಿದ ಚಿನ್ನದ ಬೆಲೆ ಇಂದು ಕಡಿಮೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಗೆ ₹750 ರಷ್ಟು ಇಳಿಕೆಯಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯೂ ಯಥಾಸ್ಥಿತಿಯಲ್ಲಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 30ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ.
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ.
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,046 ರೂ.
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ.
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ.
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಗದಗ ಬಾರ್ ನಲ್ಲಿ ಕಿರಿಕ್: ಶಾಂತವಾಗಿರಿ ಎಂದಿದ್ದಕ್ಕೆ ಇಬ್ಬರ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ ಕೇಸ್ ದಾಖಲು

0

ಗದಗ: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರ ಮೇಲೆ ಗುಂಪೊಂದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಗದಗದ ಡ್ರಿಂಕ್ ಫ್ಯಾಕ್ಟರಿ ಬಾರ್ ನಲ್ಲಿ ಜರುಗಿದೆ.

ಮಲ್ಲಸಮುದ್ರ ಗ್ರಾಮದ ನಿಂಗಪ್ಪ ಹಾಗೂ ಕೊಟ್ರೇಶ್ ಹಲ್ಲೆಗೊಳಗಾದವರು. ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಇದೇ ಮಾರ್ಚ್ ತಿಂಗಳ ಕಳೆದ 26 ರಂದು ರಾತ್ರಿ ಸುಮಾರು 8.45ರಿಂದ 9.30ರ ನಡುವೆ ನಿಂಗಪ್ಪ (35) ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಕುಳಿತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಕೆಲವರು ಗದ್ದಲ ಮಾಡಿದ್ದಾರೆ. ಈ ವೇಳೆ ನಿಂಗಪ್ಪ “ಶಾಂತವಾಗಿರಿ” ಎಂದು ಹೇಳಿದ್ದಾರೆ. ಇಷ್ಟಕ್ಕೆ ಆರೋಪಿತರು ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ಗಲಾಟೆ ಶುರು ಮಾಡಿದ್ದಾರೆ. ನಂತರ ನಿಂಗಪ್ಪ ಹಾಗೂ ಅವನ ಸ್ನೇಹಿತ ಕೊಟ್ರೇಶ್‌ ಬಾರ್‌ನಿಂದ ಹೊರಬಂದಾಗ ಆರೋಪಿತರು ಹಿಂಬಾಲಿಸಿ ಹೊರಗಡೆ ಗುಂಪಾಗಿ ಸೇರಿ ಹಲ್ಲೆ ನಡೆಸಿದ್ದಾರೆ. ವಿಶೇಷವಾಗಿ ನಿಂಗಪ್ಪನ ಮೇಲೆ ಬಿಯರ್ ಬಾಟಲಿಗಳಿಂದ ತಲೆ, ಮುಖ ಹಾಗೂ ದೇಹದ ಭಾಗಗಳಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಘಟನೆ ಸಂಬಂಧ ಗಾಯಾಳುಗಳು ದೂರು ನೀಡಿದ್ದು, ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ವೇಳೆ ಜೀವ ಬೆದರಿಕೆ ಹಾಕಿರುವುದೂ ತಿಳಿದು ಬಂದಿದೆ.

ಪ್ರಕರಣದಲ್ಲಿ ಪ್ರಜ್ವಲ್ ಅಯ್ಯನಗೌಡ್ರ, ಆಸೀಪ್ ಬಾಗೋಡಿ, ತೋಹಿದ್ ಪಾಮಡಿ, ಶಾಹಿದ್ ಸುರಪುರ ಸೇರಿದಂತೆ ಹಲವರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆ ಸೇರಿದಂತೆ ಕ್ರೈಂ ನಂ. 72/2026 ಹಾಗೂ ವಿವಿಧ ಕಲಂಗಳಡಿ ಕೇಸ್ ದಾಖಲಾಗಿದೆ.

ಘಟನೆ ಸಂಬಂಧ ಪಿ.ಎಸ್‌.ಐ. ವಿ.ಜಿ. ಪವಾರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸಣ್ಣ ಮಾತಿನ ಗಲಾಟೆ ದೊಡ್ಡ ದುರಂತಕ್ಕೆ ತಿರುಗಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ: ತನಿಖೆ ವೇಳೆ ದೆವ್ವದ ಕಥೆ ಕಟ್ಟಿದ ಪ್ರಯಾಣಿಕ!

0

ಲಕ್ನೋ: ಪ್ರಯಾಣಿಕನೋರ್ವ ಬೆಂಗಳೂರಿನಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ ಪ್ರಯಾಣಿಕ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ʻನನಗೆ ದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ. ಮಾ.28ರ ಶನಿವಾರ ಇಂಡಿಗೋ ವಿಮಾನ 6E-185 ರಾತ್ರಿ 8:15ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿತ್ತು. ಪ್ರಯಾಣ ಆರಂಭಗೊಂಡ ಕೇವಲ 15 ನಿಮಿಷಗಳಲ್ಲಿ ಅದ್ನಾನ್ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದ. ಈ ವೇಳೆ, ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೀಡಿದ್ದರು.

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:20ರ ಸುಮಾರಿಗೆ ವಿಮಾನ ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದಾಗಲೂ ಅದ್ನಾನ್ ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ವಿಮಾನ 500 ಅಡಿಗಳ ಎತ್ತರದಲ್ಲಿತ್ತು. ತಕ್ಷಣ ಪೈಲಟ್ ಲ್ಯಾಂಡಿಂಗ್ ಪ್ರಯತ್ನವನ್ನು ರದ್ದುಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಬಳಿಕ ವಿಮಾನವು ರಾತ್ರಿ 10:35 ಕ್ಕೆ ಲ್ಯಾಂಡ್‌ ಮಾಡಲಾಯಿತು. ಲ್ಯಾಂಡಿಂಗ್‌ ಬಳಿಕ ಅದ್ನಾನ್‌ನನ್ನು ತಕ್ಷಣವೇ ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್‌ಗೆ ಹಸ್ತಾಂತರಿಸಲಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅದ್ನಾನ್ ಆರಂಭದಲ್ಲಿ ತಾನು ಈ ರೀತಿ ಏಕೆ ವರ್ತಿಸಿದೆ ಎಂದು ತಿಳಿದಿಲ್ಲ. ತನಗೆ ʻದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ. ಪೋಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಇರಾನ್ ಯುದ್ಧದ ಎಫೆಕ್ಟ್: ಪಾತಾಳಕ್ಕೆ ಕುಸಿದ ಕಲ್ಲಂಗಡಿ, ಪರಿಹಾರಕ್ಕೆ ರೈತರ ಆಗ್ರಹ

ಬೀದರ್: ಮಧ್ಯಪ್ರಾಚ್ಯ ಯುದ್ಧದ ಸಂಘರ್ಷದಿಂದ ಬೀದರ್‌ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಸ್ಥಿತಿ ಹೇಳತ್ತೀರದ್ದಾಗಿದೆ.

ರಫ್ತು ಸಾಧ್ಯವಾಗದ ಕಾರಣ, ಈ ಬಾರಿ 1 ಕೆಜಿ ಕಲ್ಲಂಗಡಿಯ ಬೆಲೆ ಕೇವಲ ರೂ. 2ಕ್ಕೆ ಕುಸಿತವಾಗಿದೆ. ಹಿಂದಿನ ವರ್ಷ ಈ ಸಮಯದಲ್ಲಿ ಕಲ್ಲಂಗಡಿ 12–15 ರೂ.ಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಕೆವಲ 2 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆಗೆ ಕೊಟ್ರು ಖರೀದಿಗೆ ವರ್ತಕರು ಬರುತ್ತಿಲ್ಲ ಎಂದು ರೈತರು ವಿಷಾದ ವ್ಯಕ್ತಪಡಿಸಿದ್ದಾರೆ.

ಬೀದರ್ ತಾಲ್ಲೂಕಿನ ರೈತ ವೈಜನಾಥ್ ಸಿದ್ದಾ 1 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ರಫ್ತು ಇಲ್ಲದ ಕಾರಣ, ಬೆಳೆ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. “ಸಾಕಷ್ಟು ಹಣ ಖರ್ಚು ಮಾಡಿದ್ದು, ಕಟಾವು ಮಾಡಿ ಮಾರಾಟ ಮಾಡಲು ಸಿದ್ಧವಾಗಿದ್ದಾಗ ಯುದ್ಧ ಆರಂಭಗೊಂಡು ಮುಂದುವರಿಯುತ್ತಿದೆ. ಈ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು, ಎಂದು ರೈತರು ಮನವಿ ಮಾಡಿದ್ದಾರೆ.

ರೀಲ್ಸ್‌ಗಳ ಮೂಲಕ ಫೇಮಸ್ ಆಗಿದ್ದ ಅಜ್ಜಿ ‘ಲಕ್ಷ್ಮಿ ನಾಯಕ್’ ನಿಧನ!

ಕಾರವಾರ: ರೀಲ್ಸ್ ನಲ್ಲಿ ಹವಾ ಸೃಷ್ಟಿಸಿದ್ದ 93 ವರ್ಷದ ಅಜ್ಜಿ ಲಕ್ಷ್ಮಿ ನಾಯಕ್ ನಿಧನರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ ಅವರು, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದು, ಇದೀಗ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಇವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಕಣ್ಣು ಮಂಜಾಗಿತ್ತು. ತಮ್ಮ ಮರಿಮೊಮ್ಮಗ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆಗಿದ್ದರು. ಆ ವಯಸ್ಸಿನಲ್ಲೂ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮುಗ್ಧ ನಟನೆ ಮೂಲಕ ಅವರು ಹೆಸರು ಗಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದರು.

ಇದೀಗ ಅಜ್ಜಿ ಮೃತಪಟ್ಟಿದ್ದು, ಸಾಕಷ್ಟು ಜನರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಡಕೆ ತೋಟದಲ್ಲಿ ಉಪನ್ಯಾಸಕನ ಶವ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆ! ಸಾವಿನ ಸುತ್ತ ಅನುಮಾನಗಳ ಹುತ್ತ

0

ಶಿವಮೊಗ್ಗ: ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ಅಡಕೆ ತೋಟವೊಂದರಲ್ಲಿ ಜರುಗಿದೆ.

58 ವರ್ಷದ ಸುರೇಶ್ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟ ಉಪನ್ಯಾಸಕ. ಸುರೇಶ್ ಅವರು, ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರ ತೋಟದಲ್ಲೇ ಶವ ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಕಪಕ್ಕದ ತೋಟದವರು ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮೃತದೇಹ ಭಾಗಶಃ ಸುಟ್ಟು ಕರಕಲಾಗಿತ್ತು.

ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಸುತ್ತ ಸಂಪೂರ್ಣ ನಿಗೂಢತೆ ಆವರಿಸಿದ್ದು, ಆತ್ಮಹತ್ಯೆಯೋ? ಕೊಲೆಯೋ? ಎಂಬುದು ಪೊಲೀಸರ ತನಿಖೆಯ ನಂತರ ಸ್ಪಷ್ಟವಾಗಬೇಕಾಗಿದೆ.

ಶ್ರೀರಾಮನವಮಿ ಪ್ರಯುಕ್ತ ವಿತರಿಸಿದ ಪ್ರಸಾದ ತಿಂದು ಭಕ್ತರು ಅಸ್ವಸ್ಥ: ಆಸ್ಪತ್ರೆಗೆ ದಾಖಲು!

ದೇವನಹಳ್ಳಿ: ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಮಾರ್ಚ್ 28ರ ಶನಿವಾರ, ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ.

ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಒಂದೆಡೆ 1.28 ಕೋಟಿ ಆನ್‌ಲೈನ್ ವಂಚನೆ, ಮತ್ತೊಂದೆಡೆ ಸರಣಿ ಕಳ್ಳತನ: ರಾಜ್ಯದಲ್ಲಿ ಅಪರಾಧಗಳ ಅಬ್ಬರ!

ಚಿಕ್ಕಮಗಳೂರು/ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸೈಬರ್ ವಂಚನೆ ಮತ್ತು ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಚಿತ್ರಣ ಬೆಳಕಿಗೆ ಬಂದಿದೆ. ಒಂದೆಡೆ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ನಡೆದಿದ್ದರೆ, ಮತ್ತೊಂದೆಡೆ ಸರಣಿ ಮನೆ ಕಳ್ಳತನ ಪ್ರಕರಣಗಳು ಜನರಲ್ಲಿ ಭಯ ಹುಟ್ಟಿಸಿವೆ.

ಚಿಕ್ಕಮಗಳೂರಿನಲ್ಲಿ ಕಡೂರು ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಅವರು ಫೇಸ್ಬುಕ್ ಜಾಹೀರಾತಿಗೆ ಮೋಸ ಹೋಗಿ ₹1.28 ಕೋಟಿ ಕಳೆದುಕೊಂಡಿದ್ದಾರೆ. ‘FYERS’ ಟ್ರೇಡಿಂಗ್ ಹೆಸರಿನಲ್ಲಿ ವಂಚಕರು ವಾಟ್ಸಾಪ್ ಗುಂಪಿನ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ ಹಣ ಪಡೆದು, ನಂತರ ಯಾವುದೇ ಲಾಭ ನೀಡದೇ ವಂಚನೆ ನಡೆಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದರ ನಡುವೆಯೇ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಡರಾತ್ರಿ ಎರಡು ಕಡೆ ಮನೆಗಳ್ಳತನ ನಡೆದಿದೆ. ಮೊದಲಿಗೆ ರಾಮನಗರದ ಭುವನೇಶ್ವರಿನಗರದಲ್ಲಿ ನಂಜುಂಡಯ್ಯ ಅವರ ಮನೆಯಲ್ಲಿ 68 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ನಂತರ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ವಕೀಲ ಪ್ರವೀಣ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂದ ಖದೀಮರು 240 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹಾಗೂ ₹20 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೋವ್ಸ್ ಧರಿಸಿ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಚನ್ನಪಟ್ಟಣ ಗ್ರಾಮಾಂತರ ಹಾಗೂ ಐಜೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸರಣಿ ಘಟನೆಗಳು ರಾಜ್ಯದಲ್ಲಿ ಸೈಬರ್ ಅಪರಾಧ ಮತ್ತು ಆಸ್ತಿಯ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಜನರು ಆನ್‌ಲೈನ್ ವ್ಯವಹಾರಗಳಲ್ಲಿ ಮತ್ತು ಮನೆ ಭದ್ರತೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಚಾಕೊಲೇಟ್‌ ಕದ್ದಳೆಂದು 12 ವರ್ಷದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ

ಬುಲಂದ್ಶಹರ್: ಅಪ್ರಾಪ್ತ ಮಕ್ಕಳ ಮೇಲಿನ ಹಿಂಸಾಚಾರ ಮತ್ತೊಮ್ಮೆ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಬುಲಂದ್ಶಹರ್‌ನಲ್ಲಿ ಚಾಕೊಲೇಟ್ ಕಳ್ಳತನದ ಅನುಮಾನದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಹೊಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ನರೋರಾದ ರತನ್‌ಪುರ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ, ಪುಷ್ಪೇಂದ್ರ ತನ್ನ ಮಗಳು ಪೂಜಾಳ ಮೇಲೆ ಮದ್ಯದ ಪ್ರಭಾವದಲ್ಲೇ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ಅಂಗಡಿಯವನ ಆರೋಪದಿಂದ ಉಂಟಾದ ಕೋಪವೇ ಈ ದುರಂತಕ್ಕೆ ಕಾರಣವಾಗಿದ್ದು, ತಾಯಿ ಮಧ್ಯಪ್ರವೇಶಿಸಿದರೂ ಹಲ್ಲೆ ನಿಲ್ಲಿಸಲಿಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿದ್ದಳು. ಆದರೆ, ಸಹಾಯ ಮಾಡುವ ಬದಲು ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿದ ಆರೋಪವೂ ಕೇಳಿಬಂದಿದೆ. ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಆಕೆಯನ್ನು ಮೃತಳಾಗಿ ಘೋಷಿಸಿದರು. ಮರಣೋತ್ತರ ವರದಿಯಲ್ಲಿ 10–12 ಗಾಯಗಳ ಗುರುತುಗಳು ಪತ್ತೆಯಾಗಿವೆ.

ಇದೇ ರೀತಿಯ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿತ್ತು. ದಾದು ಹೈಬತ್ ಯಮ್ಗರ್ ಎಂಬಾತ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕಳ್ಳತನದ ಅನುಮಾನದಲ್ಲಿ ಕಟ್ಟಿಹಾಕಿ ತಲೆಕೆಳಗಾಗಿ ನೇತುಹಾಕಿ ಹಿಂಸಿಸಿದ್ದ. ಈ ಘಟನೆಯಲ್ಲಿ 10 ವರ್ಷದ ಸಾನಿಕಾ ಸಾವನ್ನಪ್ಪಿದ್ದಳು, ಮತ್ತೊಬ್ಬಳು ಗಂಭೀರ ಸ್ಥಿತಿಗೆ ತಲುಪಿದ್ದಳು.

ಈ ಎರಡು ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವ ಪೋಷಕರ ಕ್ರೂರತೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರದ ಭಯಾನಕ ಚಿತ್ರಣವನ್ನು ಬಯಲಿಗೆಳೆಯುತ್ತಿವೆ. ಮಕ್ಕಳ ರಕ್ಷಣೆಗೆ ಕಠಿಣ ಕಾನೂನುಗಳ ಜಾರಿಗೆ ಒತ್ತಾಯಗಳು ಕೇಳಿಬರುತ್ತಿವೆ.

error: Content is protected !!