Home Blog Page 4

ಮಸೂದ್ ಅಜರ್ ಸಹೋದರ ಪಾಕಿಸ್ತಾನದಲ್ಲಿ ನಿಗೂಢ ಸಾವು!

0

ಇಸ್ಲಾಮಾಬಾದ್: ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಅನ್ವರ್ ಅಂತ್ಯಕ್ರಿಯೆಯನ್ನು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ ಉಸ್ಮಾನ್ ವಾಲಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಆದರೆ, ಅವರ ಸಾವಿನ ನಿಖರ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ವರದಿಗಳ ಪ್ರಕಾರ, ಅನ್ವರ್ ಮಸೂದ್ ಅಜರ್ ಅವರ ಐದು ಸಹೋದರರಲ್ಲಿ ಒಬ್ಬನಾಗಿದ್ದು, ಜೈಶ್-ಎ-ಮೊಹಮ್ಮದ್ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ. ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಆತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನು ಎಂದು ತಿಳಿದುಬಂದಿದೆ.

ಇನ್ನು, ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ವೇಳೆ ತನ್ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಮಸೂದ್ ಅಜರ್ ಹೇಳಿಕೊಂಡಿದ್ದ.

1994ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾದ ಮಸೂದ್ ಅಜರ್, ಬಳಿಕ ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣ ಪ್ರಕರಣದ ನಂತರ ಬಿಡುಗಡೆಗೊಂಡಿದ್ದ. ಅವರ ಹೇಳಿಕೆಯ ಪ್ರಕಾರ, ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನ ಜೆಇಎಂ ಪ್ರಧಾನ ಕಚೇರಿ ಮೇಲಿನ ದಾಳಿಯಲ್ಲಿ ಕುಟುಂಬದ ಅನೇಕ ಸದಸ್ಯರು ಮೃತಪಟ್ಟಿದ್ದರು.

ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ?: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ? ಎಂದು ಬಿಜೆಪಿ ನಾಯಕರನ್ನು ಕೇಳಬಯಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಪಂಚರಾಜ್ಯ ಚುನಾವಣೆ ನಡೆಯುತ್ತಿದೆ. ಜನರು ಪರದಾಡುತ್ತಿದ್ದು, ಹೊಟೇಲ್ ಗಳು ಬಂದ್ ಆಗುತ್ತಿವೆ. ಜನ ವಿದ್ಯುತ್ ಒಲೆ ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ 10% ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು?” ಎಂದು ಲೇವಡಿ ಮಾಡಿದರು.

“ಯುದ್ಧಗಳ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ” ಎಂದರು.

“ಜನರನ್ನ ಕೇಂದ್ರ ಸರ್ಕಾರ ಫೂಲ್ ಮಾಡುತ್ತಿದೆ. ನಾವು ಪಾದಯಾತ್ರೆ ಮಾಡಿದಾಗ ಈ ಬೆಲೆ ಏರಿಕೆ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದು, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿ ಅವರಿಗೆ ಶಕ್ತಿ ತುಂಬಿದ್ದೇವೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕವಾಗಿ ರಕ್ಷಣೆ ನೀಡಿವೆ” ಎಂದು ಹೇಳಿದರು.

“900 ಔಷಧಗಳ ದರ ಏರಿಕೆ ಮಾಡಲಾಗಿದೆ. 12% ಜಿಎಸ್ ವಿಧಿಸಲಾಗಿದೆ. ಎನ್ ಪಿಪಿಎ ಬೆಲೆ ಏರಿಕೆ ಮಾಡಿ ಇವುಗಳಿಗೆ ಶೇ 10.7 ರಷ್ಟು ಇದ್ದ ತೆರಿಗೆಯನ್ನು ಶೇ 12 ಕ್ಕೆ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳಾದ ಪ್ಲಾಸ್ಟಿಕ್ ಪೈಪ್ ಸೇರಿದಂತೆ ಇತರೇ ವಸ್ತುಗಳ ಬೆಲೆಯನ್ನು ಟನ್ ಗೆ 7 ಸಾವಿರ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಬಿಟುಮಿನ್ ಹಾಕಲು ಟೆಂಡರ್ ಕರೆಯಲಾಗಿದೆ. ಈಗಾಗಲೇ ಕೆಲಸ ಪ್ರಾರಂಭ ಮಾಡಲಾಗಿದೆ. ಬೆಲೆ ಹೆಚ್ಚಳದಿಂದ ಕೆಲಸ ನಿಲ್ಲಿಸುವುದು ಬೇಡ ಸರ್ಕಾರವೇ ನೇರವಾಗಿ ಬಿಟುಮಿನ್ ಅನ್ನು ಸರಬರಾಜು ಮಾಡಲಿದೆ ಎಂದು ಬೆಂಗಳೂರಿನ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ” ಎಂದರು.

ಸಿಮೆಂಟ್, ಕಬ್ಬಿಣ ಬೆಲೆ ಹೆಚ್ಚಳ

“ಸಿಮೆಂಟ್ ಬೆಲೆಯೂ ಸಹ 50 ರಿಂದ 100 ರೂಪಾಯಿಗೆ ಹೆಚ್ಚಳವಾಗಿದೆ. ಇದರ ಹಿಂದೆ ದೊಡ್ಡ ಸಿಮೆಂಟ್ ಮಾಫಿಯಾವೇ ಇದೆ. ಇದನ್ನು ಯಾರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ‌. ಕಬ್ಬಿಣದ ಬೆಲೆ 47 ಸಾವಿರದಿಂದ 59 ಸಾವಿರಕ್ಕೆ ಹೆಚ್ಚಳವಾಗಿದೆ. ಹೀಗಾದರೆ ಜನಸಾಮಾನ್ಯ ಮನೆ ಕಟ್ಟುವುದು ಹೇಗೆ. ಇದಿರಿಂದ ಸರ್ಕಾರದ ಕಾಮಗಾರಿಗಳಿಗೂ ಹಿನ್ನಡೆಯಾಗುತ್ತಿದೆ. ಅಲ್ಲದೇ ಇದ್ದಕ್ಕಿದ್ದಂತೆ ವಿಮಾನ ಪ್ರಯಾಣದರವನ್ನ ಶೇ 18 ರಷ್ಟು ಏರಿಕೆ ಮಾಡಲಾಗಿದೆ” ಎಂದು ಹೇಳಿದರು.

“ಅರಣ್ಯಗಳಿಗೆ ಜನರು ಹೋಗಬಾರದು ಎಂದು ಹೇಳಿರುವ ಕಾರಣಕ್ಕೆ ಸೌದೆ ಅಭಾವ ನಿಜಕ್ಕೂ ಹೆಚ್ಚಾಗಲಿದೆ. ಹಳ್ಳಿಗಳಲ್ಲೂ ಸಹ ಗ್ಯಾಸ್ ಬಳಕೆ ಹೆಚ್ಚಾಗಿ ಜನ ಸೌದೆ ಬಳಸುತ್ತಿಲ್ಲ. ಒಮ್ಮೆಲೆ ಬಳಕೆ ಹೆಚ್ಚಾದರೆ ಅಭಾವ ಉಂಟಾಗಲಿದೆ. ಬ್ಲಾಕ್ ಮಾರ್ಕೆಟ್ ಕೆಲಸ ಮಾಡುತ್ತಿದ್ದು 2 ಸಾವಿರದವರೆಗೆ ಗೃಹಬಳಕೆ ಗ್ಯಾಸ್, 4 ಸಾವಿರದವರೆಗೆ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಾಗಿದೆ” ಎಂದರು.

ಗ್ಯಾರಂಟಿ ಯೋಜನೆಗಳಂತೆ ಕೇಂದ್ರ ಪರ್ಯಾಯ ವ್ಯವಸ್ಥೆ ಮಾಡಲಿ

“ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು‌. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ್ವಲ್ಪ ಉಸಿರಾಡುತ್ತಿದ್ದಾರೆ. ಇದೇ ರೀತಿ ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು.‌ ಜನಸಾಮಾನ್ಯರ ಬವಣೆಯ ಜೊತೆ ಕೇಂದ್ರ ನಿಲ್ಲುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಆಗ್ರಹಿಸುತ್ತೇವೆ” ಎಂದರು.

“ಮೋದಿ ಸರ್ಕಾರ ಪ್ರತಿನಿತ್ಯ ಜನರ ಜೋಬಿನಿಂದ ಪಿಕ್ ಪಾಕೆಟ್ ಮಾಡುತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ 900 ಕೋಟಿ ವಸೂಲಿ ಮಾಡಿದೆ. ಕೇಂದ್ರ ಸರ್ಕಾರ ಅದೇ ಹಣ ನಮಗೆ ಕೊಟ್ಟರೆ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಬಹುದು” ಎಂದರು.

ಯುವಕನ ಸುಟ್ಟು ಕೊಲೆಗೈದಿದ್ದ ಪ್ರಕರಣ: 48 ಗಂಟೆಯಲ್ಲಿಯೇ ಮೂವರು ಆರೋಪಿಗಳ ಬಂಧನ- ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಪ್ರಶಂಸೆ

ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಕೇವಲ 48 ಗಂಟೆಗಳೊಳಗೆ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಮಾರ್ಚ್ 28ರಂದು ಹುಯಿಲಗೋಳ–ಹೊಂಬಳ ರಸ್ತೆಯ ಆಲಿ ಹಳ್ಳದ ಬ್ರಿಡ್ಜ್ ಕೆಳ ಭಾಗದಲ್ಲಿ ಸುಮಾರು 30ರಿಂದ 35 ವರ್ಷದ ಗಂಡಸಿನ ಅರ್ಧ ಸುಟ್ಟ, ಗುರುತಿಸಲಾಗದ ಶವ ಪತ್ತೆಯಾಗಿತ್ತು. ಶವದ ಸ್ಥಿತಿ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ಪ್ರಕರಣ ಸಂಖ್ಯೆ 14/2026 ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು.

ತನಿಖೆ ಮುಂದುವರಿದಂತೆ ಹುಯಿಲಗೋಳ ಗ್ರಾಮದ ಬಸವರಾಜ ಕುರಿ ಅವರು ತಮ್ಮ ಮಗ ಚಂದ್ರು ಕುರಿ (28) ಮಾರ್ಚ್ 24ರಂದು ರಾತ್ರಿ ಮನೆಯಿಂದ ಹೊರಟು ಮರಳಿ ಬಾರದಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಕುಟುಂಬ ಸದಸ್ಯರು ಗದಗ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಶವವನ್ನು ಗುರುತಿಸಿ ಅದು ಚಂದ್ರುವಿನದೇ ಎಂದು ದೃಢಪಡಿಸಿದರು. ಇದನ್ನಾಧರಿಸಿ ಪೊಲೀಸರು ಗುನ್ನಾ ಸಂಖ್ಯೆ 75/2026 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದರು.

ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಮಹಾಂತೇಶ ಸಜ್ಜನ ಹಾಗೂ ಡಿ.ಎಸ್.ಪಿ ಮುರ್ತಜಾ ಖಾದ್ರಿ ಅವರ ಮೇಲ್ವಿಚಾರಣೆಯಲ್ಲಿ, ಪಿಐ ಸಿದ್ದರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಎಸ್. ಬಿ ಕವಲೂರು, ವಿ. ಜಿ. ಪವಾರ, ಸಿಬ್ಬಂದಿಗಳಾದ ಪ್ರಕಾಶ್ ಗಾಣಿಗೇರ, ಎನ್. ಜಿ ಮಜ್ಜಗಿ, ಎಮ್. ಬಿ ವಡ್ಡಟ್ಟಿ, ಎಮ್. ಆಯ್ ಪಾಟೀಲ, ಖಾಜಾ ಮುಲ್ಲಾನವರ್, ಎಲ್. ಬಿ ಪೂಜಾರ, ತಾಂತ್ರಿಕ ವಿಭಾಗದ ಎಆರ್ ಎಸ್ ಐ ಗುರುರಾಜ ಬೂದಿಹಾಳ, ಎ.ಪಿ ದೊಡ್ಡಮನಿ, ಸಂಜಯ ಕೊರಡೂರು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಯಿತು.

ವಿಶೇಷ ತಂಡ ತಾಂತ್ರಿಕ ಮಾಹಿತಿ, ಕಾಲ್ ಡೀಟೈಲ್ಸ್ ಹಾಗೂ ಸ್ಥಳೀಯ ಮಾಹಿತಿಯನ್ನು ಆಧರಿಸಿ ಶಂಕಿತರ ಚಲನವಲನವನ್ನು ಪರಿಶೀಲನೆ ನಡೆಸಿ ಇಡೀ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿದರು.

ತನಿಖೆಯ ವೇಳೆ ಆರೋಪಿಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಅಡಗಿ ಕುಳಿತಿರುವುದು ಪತ್ತೆಯಾಗಿ, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಾಪೂರ ಗ್ರಾಮದ
ಈರಪ್ಪ ಹನುಮಂತಪ್ಪ ಕುದರಿ (34) ಹಾಗೂ ಪತ್ನಿ ರತ್ನಾ @ ರಾಮವ್ವ ಈರಪ್ಪ ಕುದರಿ (27) ಹಾಗೂ ಹುಯಿಲಗೋಳ ಗ್ರಾಮದ ಮಹಾಂತೇಶ ರಂಗಪ್ಪ ಹದ್ಲಿ (30)ಎಂದು ಗುರುತಿಸಲಾಗಿದೆ.

ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಂತೆ, ಮೃತ ಚಂದ್ರು ಕುರಿ ಆರೋಪಿತಳಾದ ರತ್ನಾಳೊಂದಿಗೆ ಕಳೆದ ನಾಲ್ಕು–ಐದು ವರ್ಷಗಳಿಂದ ಸಲುಗೆಯಿಂದಿದ್ದು, ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದನು. ಈ ವಿಷಯಕ್ಕೆ ಸಂಬಂಧಿಸಿದಂತೆ ರತ್ನಾಳ ಪತಿ ಈರಪ್ಪ ಹಾಗೂ ಆಕೆಯ ಸಹೋದರ ಮಹಾಂತೇಶ ವಿಷಯ ಗೊತ್ತಾಗಿ ಅಸಮಾಧಾನಗೊಂಡಿದ್ದರು.

ಈ ಬಗ್ಗೆ ಚಂದ್ರುಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಚಂದ್ರು ವರ್ತನೆ ಬದಲಾಯಿಸದ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಮಾರ್ಚ್ 24ರಂದು ಪೂರ್ವ ಯೋಜನೆಯಂತೆ ರತ್ನಾಳಿಂದ ಚಂದ್ರುವಿಗೆ ಕರೆ ಮಾಡಿಸಿ ಮನೆಗೆ ಬರಮಾಡಿಕೊಂಡು, ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಮನೆ ಸಮೀಪಕ್ಕೆ ಬಂದಾಗ ಮೊದಲು ಹಲ್ಲೆ ನಡೆಸಿ, ಬಳಿಕ ಬೈಕ್‌ನಲ್ಲಿ ಕೂರಿಸಿಕೊಂಡು ಆಲಿ ಹಳ್ಳದ ಬ್ರಿಡ್ಜ್ ಕೆಳಗೆ ಕರೆದೊಯ್ದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ನಂತರ ಶವವನ್ನು ಗುರುತಿಸಲು ಆಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷಿ ನಾಶಪಡಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಕೊಲೆಗೈಯಲು ಬಳಸಿದ ಚಾಕು ಹಾಗೂ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇವಲ 48 ಗಂಟೆಗಳೊಳಗೆ ಪ್ರಕರಣವನ್ನು ಭೇದಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸಿಡಿಲು ಬಡಿದು ಕೋಳಿ ಅಂಗಡಿ ಮಾಲೀಕ ಸಾವು!

ಶಿವಮೊಗ್ಗ: ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಅಂಗಡಿ ಮಾಲೀಕ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ರಾಮನಗರದಲ್ಲಿ ನಡೆದಿದೆ.

ಮೃತರನ್ನು ಹಾರನಹಳ್ಳಿ ನಿವಾಸಿ ಮುಶೇಖ್ ಮುಜೀಬ್ ಉರ್ ರಹಮಾನ್ (45) ಎಂದು ಗುರುತಿಸಲಾಗಿದೆ. ಅವರು ಹಾರನಹಳ್ಳಿ ಸಮೀಪದ ರಾಮನಗರದ ಸವಳಂಗ ರಸ್ತೆಯ ಪಕ್ಕದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು.

ಸೋಮವಾರ ಸಂಜೆ ಮಳೆ-ಗಾಳಿಯ ನಡುವೆ ಬಂದ ಸಿಡಿಲು ಮೊದಲು ಅಂಗಡಿ ಪಕ್ಕದಲ್ಲಿದ್ದ ಮರಕ್ಕೆ ಬಡಿದಿದ್ದು, ಅದರ ಪ್ರಭಾವದಿಂದ ಅಂಗಡಿಗೂ ತಗುಲಿದೆ. ಸಿಡಿಲಿನ ತೀವ್ರತೆಗೆ ಅಂಗಡಿಯಲ್ಲಿದ್ದ ಕೋಳಿಗಳು ಸಾವನ್ನಪ್ಪಿದ್ದು, ಮಾಲೀಕ ರಹಮಾನ್ ಕೂಡ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ಬಳಿಕ ಸ್ಥಳೀಯರು ಧಾವಿಸಿ ಪರಿಶೀಲನೆ ನಡೆಸಿದರೂ ಆಗಲೇ ರಹಮಾನ್ ಮೃತಪಟ್ಟಿದ್ದರು. ಕುಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಡುಗೋಡಿ ಪೊಲೀಸರ ಕಾರ್ಯಾಚರಣೆ: ಮೂವರು ಗಾಂಜಾ ಪೆಡ್ಲರ್ ಗಳ ಬಂಧನ

0

ಬೆಂಗಳೂರು: ಆಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಸಂತೋಷ, ರಂಜಿತ್ ಅಲಿಯಾಸ್ ಡೋರಿ, ಅರುಣ್ ಅಲಿಯಾಸ್ ಮುನ್ನ ಬಂಧಿತ ಆರೋಪಿಗಳಾಗಿದ್ದು,

ಬಂಧಿತರಿಂದ 27 ಕೆಜಿ ಗಾಂಜಾ ಹಾಗೂ 220 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಶೋಕಿ ಜೀವನಕ್ಕಾಗಿಮಹಿಳೆಯರು ಹಾಗೂ ಅಂಗವಿಕಲರ ಕೈಯಲ್ಲಿ ಗಾಂಜಾ ಮಾರಾಟ ಮಾಡಿಸುತ್ತಿದ್ದರು. ಇವರು ವಿವೇಕ ನಗರದ ಖಾಲಿ ಜಾಗದಲ್ಲಿ ಡ್ರಂಗಳೊಳಗೆ ಗಾಂಜಾವನ್ನು ಅಡಗಿಸಿ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು “ಗಾಂಜಾ ಆರ್ಗಾನಿಕ್, ಇದರಿಂದ ಯಾವುದೇ ಹಾನಿ ಇಲ್ಲ” ಎಂಬ ತಪ್ಪು ಭ್ರಮೆಯಲ್ಲಿ ಇದ್ದರು. “MDMA ಮಾತ್ರ ಅಪಾಯಕಾರಿ” ಎಂಬ ತಪ್ಪು ಕಲ್ಪನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಸಿಲಿಕಾನ್ ಸಿಟಿಯಲ್ಲಿ ನಕಲಿ ಬ್ರಾಂಡೆಡ್ ವಾಚ್‌‌ʼಗಳ ದಂಧೆ ಪತ್ತೆ! ಐವರು ಅರೆಸ್ಟ್

0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್‌ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಹೆಸರಿನಲ್ಲಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

“ಆಫ್ ರೇಟ್”, “ಚೀಪ್ ರೇಟ್” ಎಂದು ಗ್ರಾಹಕರನ್ನು ಆಕರ್ಷಿಸಿ, ಸಾವಿರಾರು ರೂಪಾಯಿ ಮೌಲ್ಯದ ವಾಚ್‌ಗಳನ್ನು ಅರ್ಧ ಬೆಲೆಯಲ್ಲಿ ನೀಡುವ ಮೂಲಕ ಮೋಸ ಮಾಡಲಾಗುತ್ತಿತ್ತು. ಉದಾಹರಣೆಗೆ ₹5,000 ಮೌಲ್ಯದ ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಹೇಳಿ ನಕಲಿ ವಾಚ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಈ ಪ್ರಕರಣ ಸಂಬಂಧ ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಹಾಗೂ ಅಬ್ದುಲ್ ರೆಹಮಾನ್ ಎಂಬ ಐವರನ್ನು ಬಂಧಿಸಲಾಗಿದೆ.

ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳವು ಸುಮಾರು ₹25 ಲಕ್ಷ ಮೌಲ್ಯದ 670 ನಕಲಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ಆರ್.ಟಿ. ನಗರ ಹಾಗೂ ಚಿಕ್ಕಪೇಟೆ ಪ್ರದೇಶಗಳ ಅಂಗಡಿಗಳಲ್ಲಿ ಈ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಬ್ರಾಂಡೆಡ್ ವಾಚ್ ಕಂಪನಿಯಾದ ಟೈಟನ್ ತನ್ನ ಉತ್ಪನ್ನಗಳನ್ನು ನಕಲು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಸಿಸಿಬಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಕಲಿ ವಾಚ್‌ಗಳನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಮತ್ತು ಇನ್ನೂ ಯಾರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರತಿದಿನ “ಎಳನೀರು” ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

0

ಎಳನೀರು ದೇಹಕ್ಕೆ ಅತ್ಯಂತ ಆರೋಗ್ಯಕರ ಪಾನೀಯವಾಗಿದ್ದು, ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಆದರೆ ಚಳಿಗಾಲದಲ್ಲಿ ಇದನ್ನು ಕುಡಿಯಬೇಕೇ ಬೇಡವೇ ಎಂಬ ಗೊಂದಲ ಹಲವರಲ್ಲಿದೆ. ತಜ್ಞರ ಪ್ರಕಾರ, ಎಳನೀರು ಕೇವಲ ಬೇಸಿಗೆಗಷ್ಟೇ ಸೀಮಿತವಲ್ಲ; ವರ್ಷಪೂರ್ತಿ ಸೇವಿಸಬಹುದಾದ ಆರೋಗ್ಯಕರ ಪಾನೀಯವಾಗಿದೆ.

ಚಳಿಗಾಲದಲ್ಲೂ ಎಳನೀರು ಏಕೆ ಕುಡಿಯಬೇಕು?

ನಿರ್ಜಲೀಕರಣ ತಡೆಯುತ್ತದೆ
ಚಳಿಗಾಲದಲ್ಲಿ ಗಾಳಿ ಒಣವಾಗಿರುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ವೇಳೆ ಎಳನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಎಳನೀರಿನಲ್ಲಿ ವಿಟಮಿನ್ C, B ಹಾಗೂ ಅಗತ್ಯ ಖನಿಜಗಳು ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ತ್ವಚೆ ಆರೋಗ್ಯಕರವಾಗಿರುತ್ತದೆ
ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಸಾಮಾನ್ಯ. ಎಳನೀರು ಕುಡಿಯುವುದರಿಂದ ತ್ವಚೆ ತೇವಾಂಶದಿಂದ ಕೂಡಿದ್ದು, ಹೊಳಪು ಉಳಿಯುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ
ನಾರಿನಂಶ ಮತ್ತು ಎಲೆಕ್ಟ್ರೋಲೈಟ್‌ಗಳಿರುವ ಎಳನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ತೂಕ ನಿಯಂತ್ರಣಕ್ಕೆ ಸಹಾಯ
ಕಡಿಮೆ ಕ್ಯಾಲೋರಿ ಹೊಂದಿರುವ ಎಳನೀರು ತೂಕ ಹೆಚ್ಚುವ ಭಯವಿಲ್ಲದೆ ಸೇವಿಸಬಹುದಾದ ಉತ್ತಮ ಪಾನೀಯ.

ರಕ್ತದೊತ್ತಡ ನಿಯಂತ್ರಣ
ಪೊಟ್ಯಾಸಿಯಮ್ ಅಂಶ ಅಧಿಕವಾಗಿರುವುದರಿಂದ ದೇಹದಲ್ಲಿನ ಸೋಡಿಯಂ ಮಟ್ಟ ಸಮತೋಲನದಲ್ಲಿರಲು ನೆರವಾಗುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣ ಸುಧಾರಿಸುತ್ತದೆ.

ಶಕ್ತಿ ಹೆಚ್ಚಿಸುತ್ತದೆ
ಎಳನೀರಿನಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ತ್ವರಿತ ಶಕ್ತಿ ನೀಡುತ್ತವೆ.

ಕೌಟುಂಬಿಕ ಕಲಹ: ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣು!

0

ಬೆಂಗಳೂರು:- ಕೌಟುಂಬಿಕ ಕಲಹ ಹಿನ್ನಲೆ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬಾಬು ರೆಡ್ಡಿ ಹಾಗೂ ಶಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಮೊದಲು ನೇಣುಬಿಗಿದುಕೊಂಡು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನ ಮೃತದೇಹ ಕಂಡು ಪತ್ನಿ ಸಹ 17 ನೇ ಫ್ಲೋರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪತಿ ಬಾಬು ರೆಡ್ಡಿ ಗೆ ಆರೋಗ್ಯ ಸಮಸ್ಯೆ ಇತ್ತು. ಇದೇ ವಿಚಾರವಾಗಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂಬುವ ಶಂಕೆ ಪೊಲೀಸರಿಗೆ ಮೂಡಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ: ಹೋಗಲಿ ಅಂತ ಬಿಟ್ಟು ಕಳಿಸಿದ್ದ ಪೊಲೀಸರನ್ನೇ ನಿಂದಿಸಿದ್ದ ವ್ಯಕ್ತಿ ವಿರುದ್ದ FIR

ದೇವನಹಳ್ಳಿ:- ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಹಾರುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಆರೋಪಿ ಉತ್ಕರ್ಷ್ ಗೌತಮ್, ಹೋಗಲಿ ಎಂದು ಬಿಟ್ಟು ಕಳುಹಿಸಿದ ಬೆಂಗಳೂರು ಪೊಲೀಸರನ್ನೇ ‘ಬಸ್ಟರ್ಡ್ಸ್’ ಎಂದು ನಿಂದಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಎಕ್ಸ್ (X) ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಹಾಕಿದ್ದ ಆರೋಪಿಯ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

FIR ಬೆನ್ನಲ್ಲೇ ಆರೋಪಿ ಎಸ್ಕೇಪ್ ಆಗಿದ್ದು, ಆತನ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.

Crime News: ಖರ್ಚಿಗೆ ಹಣ ಕೊಟ್ಟಿಲ್ಲ ಅಂತ ಮಂಗಳಮುಖಿಯರ ಮೇಲೆ ಯುವಕರಿಂದ ಹಲ್ಲೆ!

0

ಮೈಸೂರು: ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ಖರ್ಚಿಗೆ ಹಣ ನೀಡಿಲ್ಲವೆಂದು ಕೋಪಗೊಂಡು ಮಂಗಳಮುಖಿಯರ ಮೇಲೆ ಯುವಕರು ತಲ್ವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಅಮೃತ ಬಡಾವಣೆಯ ಕೆಲ ಯುವಕರು, ಆನಮ್ ಎಂಬ ಮಂಗಳಮುಖಿ ಬಳಿ ಖರ್ಚಿಗೆ ಹಣ ಕೇಳಿದ್ದಾರೆ. ಇದಕ್ಕೆ ಆನಮ್ ನಿರಾಕರಿಸಿದಾಗ ಯುವಕರು ಗಲಾಟೆ ತೆಗೆದಿದ್ದಾರೆ. ಆಗ ಸ್ನೇಹಿತೆಯಾದ ಆನಮ್ ತನ್ನ ಮತ್ತೊಬ್ಬ ಸ್ನೇಹಿತೆ ಪಾರಿಯನ್ನು ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಪಾರಿ ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕರ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

error: Content is protected !!