ಬೆಂಗಳೂರು:- ಪತ್ನಿಯ ಶೀಲದ ಮೇಲೆ ಶಂಕಿಸಿದ ಪತಿಯೋರ್ವ ಆಕೆಗೆ ಪೆಟ್ರೋಲ್ ನಿಂದ ಬೆಂಕಿ ಹಚ್ಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ರಾಜಧಾನಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪ್ರಭು ಜಂಗ್ಲಿ ಎಂಬಾತನೇ ಈ ಕೃತ್ಯ ಎಸಗಿದ್ದು, ಪತ್ನಿ ಪ್ರಿಯಾಂಕಾಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.
ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಪ್ರಭುಗೆ ಪ್ರಿಯಾಂಕಾ ಮೇಲೆ ಅನುಮಾನ ಇತ್ತಂತೆ. ಪತ್ನಿ ಮೇಲೆ ಅನುಮಾನ ಪಟ್ಟು ಪದೇ ಪದೇ ಜಗಳ ಕೂಡ ಆಡುತ್ತಿದ್ದನಂತೆ. ಮೊನ್ನೆ ಸಂಜೆ ಕುಡಿಯ ಮತ್ತಿನಲ್ಲಿ ಪೆಟ್ರೋಲ್ ತಂದ ಪ್ರಭು ಪತ್ನಿ ಪ್ರಿಯಾಂಕ್ ಮೇಲೆ ಸುರಿದು ತಾನೂ ಸುರಿದುಕೊಂಡಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಪತ್ನಿಗೂ ಬೆಂಕಿ ಹಾಕಿದ್ದ. ಆದ್ರೆ ಬೆಂಕಿ ಉರಿ ತಾಳಲಾರದೆ ಮನೆಯಿಂದ ಹೊರಗಡೆ ಓಡಿ ಬಂದಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆರೋಪಿ ಪತಿ ಪ್ರಭು ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.