HomeKarnataka Newsಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಸತತ 4ನೇ ಬಾರಿಗೆ ಗಗನಕ್ಕೇರಿದ ಅಕ್ಕಿ ದರ!

ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಸತತ 4ನೇ ಬಾರಿಗೆ ಗಗನಕ್ಕೇರಿದ ಅಕ್ಕಿ ದರ!

For Dai;y Updates Join Our whatsapp Group

ಬೆಂಗಳೂರು: ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದ್ದು, ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಹಾಲಿನ ದರ 8 ರೂಪಾಯಿ ಹೆಚ್ಚಳ ಹಾಗೂ ಸರ್ಕಾರಿ ಬಸ್‌ಗಳ ಟಿಕೆಟ್ ದರ ಪರಿಷ್ಕರಣೆಯ ವರದಿಗಳ ಬೆನ್ನಲ್ಲೇ, ಇದೀಗ ಅಕ್ಕಿ ದರವೂ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಸತತ 4ನೇ ಬಾರಿಗೆ ಅಕ್ಕಿ ದರ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

  • ಕೋಲಂ ಅಕ್ಕಿ: ಹಿಂದೆ ₹75 ಇದ್ದ ದರ ಇದೀಗ ₹110 ಕ್ಕೆ ಏರಿಕೆಯಾಗಿದೆ.
  • ಬಾಸುಮತಿ ಅಕ್ಕಿ: ಹಿಂದೆ ₹105 ಇದ್ದ ದರ ₹120 ತಲುಪಿದೆ.
  • ಜೀರಾ ರೈಸ್: ಹಿಂದೆ ₹115 ಇದ್ದ ದರ ₹125 ಕ್ಕೆ ಹೆಚ್ಚಳವಾಗಿದೆ.
  • ರಾಜಮುಡಿ ಅಕ್ಕಿ: ಹಿಂದೆ ₹125 ಇದ್ದ ದರ ₹150 ಕ್ಕೆ ಜಿಗಿದಿದೆ.
  • ಸ್ಟೀಮ್ ಅಕ್ಕಿ: ಹಿಂದೆ ₹60 ಇದ್ದ ದರ ಇದೀಗ ₹88 ಆಗಿದೆ.

ಅತ್ಯಂತ ಹೆಚ್ಚಾಗಿ ಬಳಕೆಯಾಗುವ ಸೋನಾ ಮಸೂರಿ ಅಕ್ಕಿ ಬೆಲೆಯು ಕೆ.ಜಿ.ಗೆ ₹100ರ ಗಡಿಗೆ ಹತ್ತಿರವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹90 ಕ್ಕೆ ಮಾರಾಟವಾಗುತ್ತಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಚೀಲದ ದರವು ₹1,430 ರಿಂದ ₹1,820 ಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲೇ ಸೋನಾ ಮಸೂರಿ ಚೀಲದ ಬೆಲೆಯಲ್ಲಿ ₹390 ರಿಂದ ₹400 ರಷ್ಟು ಹೆಚ್ಚಳವಾಗಿದೆ. ಸತತ ಬೆಲೆ ಏರಿಕೆಯಿಂದಾಗಿ ಗ್ರಾಹಕರು ದರ ಕೇಳಿ ಅಕ್ಕಿ ಕೊಳ್ಳದೆ ಹಿಂದಿರುಗುವಂತಾಗಿದೆ.

ಸತತ ಬೆಲೆ ಏರಿಕೆಗೆ ಕಾರಣವೇನು?: 

ಮುಂಗಾರು ಅಭಾವ: ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ತೀವ್ರವಾಗಿ ಕುಸಿದಿದೆ. ನೆರೆ ರಾಜ್ಯಗಳಲ್ಲೂ ಇಳುವರಿ ಕುಸಿತ: ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಕೇವಲ ಶೇ. 50 ರಷ್ಟು ಮಾತ್ರ ಅಕ್ಕಿ ಇಳುವರಿ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮುಂಬರುವ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img