ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಗದಗ ಅಪ್ಪುರಾಜ್ ಇವೆಂಟ್ಸ್ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2024 ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕ ಮಹನೀಯರಿಗೆ ಕನ್ನಡ ರತ್ನ ಪ್ರಶಸ್ತಿ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಬಾಲಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿರುವ ಅಪ್ಪಟ ಕನ್ನಡದ ವಾಗ್ಮಿ, ನಿರರ್ಗಳ ಮಾತುಗಳಿಂದ ರಾಜ್ಯದ ಗಮನ ಸೆಳೆದಿರುವ ಹಾವೇರಿ ಜಿಲ್ಲೆಯ ಆಡೂರ ಗ್ರಾಮದ ಅನುಷಾ ಹಿರೇಮಠ ಇವಳ ಪ್ರತಿಭೆಯನ್ನು ಗುರುತಿಸಿ ನಗರದ ಗಣ್ಯ ವರ್ತಕರಾದ ವಿಜಯಕುಮಾರ ಹಿರೇಮಠ, ಡಾ. ಸಂತೋಷ ತೋಟಗಂಟಿಮಠ ಹಾಗೂ ರವಿಕುಮಾರ ರೆಡ್ಡಿ ಅತ್ಯಾಧುನಿಕ ತ್ರಂತ್ರಜ್ಞಾನದ ಲ್ಯಾಪ್ಟಾಪ್ನ್ನು ನೀಡಿ ಪ್ರೋತ್ಸಾಹಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರತಿಭೆ ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಚಂದ್ರಣ್ಣ ಬಾಳಿಹಳ್ಳಿಮಠ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಜಿ.ಬಿ. ಬಿಡಿನಹಾಳ, ಎಸ್.ಎಸ್. ಶಿವನಗೌಡರ, ರಾಜು ಗುಡಿಮನಿ, ರಾಜು ಕುರಡಗಿ, ತಾತನಗೌಡ ಪಾಟೀಲ, ಅಪ್ಪುರಾಜ ಭದ್ರಕಾಳಿಮಠ, ಶಿವಯೋಗಿ ಟೆಂಗಿನಕಾಯಿ, ಬಸವರಾಜ ಜಿನಗಾ ಹಾಗೂ ಗಣ್ಯಮಾನ್ಯರು, ಸಂಘಟಕರು ಉಪಸ್ಥಿತರಿದ್ದರು.



