ತವರು ಮೈದಾನದಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ರಾಜಸ್ಥಾನ್ ಕೊನೆಯ ಓವರ್ವರೆಗೆ ನಡೆದ ರೋಮಾಂಚಕ ಪಂದ್ಯದಲ್ಲಿ 6 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ, ರಾಜಸ್ಥಾನ ಮೂರನೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಪಂದ್ಯ ಮುಗಿದ ಬಳಿಕ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಪವರ್ ಪ್ಲೇ ಪಂದ್ಯದ ಪ್ರಮುಖ ಕ್ಷಣ. ನಿತೀಶ್ ರಾಣ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅವರು ಸ್ಕ್ವೇರ್ ಹಿಂದೆ ಹೋಗುತ್ತಿದ್ದಾರೆಂದು ತಿಳಿದು ನಾವು ಅಂದುಕೊಂಡಿರಲಿಲ್ಲ,
ನಾವು ಅವರನ್ನು ವಿಕೆಟ್ ಮುಂದೆ ಆಡುವಂತೆ ಮಾಡಬೇಕಾಗಿತ್ತು. ಮಿಸ್‌ಫೀಲ್ಡ್‌ಗಳ ಮೂಲಕವೂ 8-10 ರನ್‌ಗಳು ಬಂದವು. ನಾವು ಈ ವಿಚಾರದಲ್ಲಿ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. 180 ರನ್ ಚೇಸಿಂಗ್ ಆಗಿತ್ತು. ನೀವು ಚೆನ್ನಾಗಿ ಆಡಿದರೆ ಇದು ಇನ್ನೂ ಉತ್ತಮ ವಿಕೆಟ್ ಆಗಿತ್ತು ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ರುತುರಾಜ್, ಇನ್ನಿಂಗ್ಸ್ ಬ್ರೇಕ್‌ನಲ್ಲಿ ನಾನು ನಿಜವಾಗಿಯೂ ಸಂತೋಷಪಟ್ಟೆ. ಅವರು 210 ರನ್‌ಗಳನ್ನು ಹೊಡೆಯುವಂತೆ ಉತ್ತಮವಾಗಿ ಆಡುತ್ತಿದ್ದರು, ಆದರೆ 180 ರನ್ ಚೇಸಿಂಗ್ ಆಗಿತ್ತು ಎಂದು ಹೇಳಿದರು.



