• About
  • Advertise
  • Privacy & Policy
  • Contact
Saturday, October 31, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ʼಗೆ ಇ.ಡಿ ಶಾಕ್: ₹427 ಕೋಟಿ ಆಸ್ತಿ ಜಪ್ತಿ, ₹2,459 ಕೋಟಿ ವಂಚನೆ ಆರೋಪ!

Vijaya Sakshi News Desk by Vijaya Sakshi News Desk
October 31, 2026
in Karnataka News
ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ʼಗೆ ಇ.ಡಿ ಶಾಕ್: ₹427 ಕೋಟಿ ಆಸ್ತಿ ಜಪ್ತಿ, ₹2,459 ಕೋಟಿ ವಂಚನೆ ಆರೋಪ!
0
SHARES
6
VIEWS
Share on Facebook

ಬೆಂಗಳೂರು: ಸಾವಿರಾರು ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಹತ್ವದ ಕ್ರಮ ಕೈಗೊಂಡಿದೆ.

ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದವರ ಒಟ್ಟು ₹427 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಸುಮಾರು ₹2,459 ಕೋಟಿ ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.

ಶಿವಂ ಅಸೋಸಿಯೇಟ್ಸ್ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಬಳಕೆ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು, ಬ್ಯಾಂಕ್ ಖಾತೆಗಳು, ನಿಶ್ಚಿತ ಠೇವಣಿಗಳು, ಷೇರು ಹೂಡಿಕೆಗಳು, ಕೃಷಿ ಜಮೀನು ಹಾಗೂ ಬಂಗಲೆ ಸೇರಿದಂತೆ ವಿವಿಧ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಜಪ್ತಿ ಮಾಡಲಾದ ಆಸ್ತಿಗಳ ಪೈಕಿ ಸುಮಾರು ₹367 ಕೋಟಿ ಮೌಲ್ಯದ ನಿಶ್ಚಿತ ಠೇವಣಿಗಳು ಸೇರಿವೆ. 47 ಬ್ಯಾಂಕ್ ಖಾತೆಗಳಲ್ಲಿದ್ದ ₹44 ಕೋಟಿ, ₹13 ಕೋಟಿ ಮೌಲ್ಯದ ಸ್ಥಿರಾಸ್ತಿಗಳು ಹಾಗೂ ₹1.31 ಕೋಟಿ ಮೌಲ್ಯದ ಷೇರು ಹೂಡಿಕೆಗಳನ್ನೂ ಜಪ್ತಿ ಮಾಡಲಾಗಿದೆ. ಒಟ್ಟಾರೆ ಜಪ್ತಿ ಮೌಲ್ಯ ಸುಮಾರು ₹427 ಕೋಟಿ ಎಂದು ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮೊದಲು ಎಫ್‌ಐಆರ್ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆಯ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ಆರಂಭಿಸಿತ್ತು.

2026ರ ಆಗಸ್ಟ್ ತಿಂಗಳಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಎಂಟು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು, ಮೊಬೈಲ್‌ಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಳಿಯ ವೇಳೆ ದೊರೆತ ದಾಖಲೆಗಳ ಆಧಾರದಲ್ಲಿ ಹೂಡಿಕೆದಾರರಿಂದ ಹಣವನ್ನು ಹೇಗೆ ಸಂಗ್ರಹಿಸಲಾಗಿತ್ತು, ಯಾವ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಹಾಗೂ ಎಲ್ಲಿ ಹೂಡಿಕೆ ಮಾಡಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್ ಅವರನ್ನು ಆಗಸ್ಟ್ 8ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ತನಿಖೆಯ ವೇಳೆ 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಸುಮಾರು ₹2,459 ಕೋಟಿ ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಇದೇ ಪ್ರಕರಣದಲ್ಲಿ ಅಕ್ಟೋಬರ್ 9ರಂದು ಶಿವಾನಂದ ನೀಲಣ್ಣನವರ್ ಸೇರಿದಂತೆ ಐವರ ವಿರುದ್ಧ ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಆರೋಪಪಟ್ಟಿ ಸಲ್ಲಿಸಿದೆ.

ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಹೂಡಿಕೆಯಿಂದ ಸುಮಾರು ₹185.95 ಕೋಟಿ ನಿವ್ವಳ ನಷ್ಟ ಉಂಟಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.

ಇದಲ್ಲದೆ, ಸುಮಾರು ₹25 ಕೋಟಿ ಹಣವನ್ನು ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾಯಿಸಿರುವುದು ಪತ್ತೆಯಾಗಿದೆ. ನಿಶ್ಚಿತ ಠೇವಣಿಗಳನ್ನು ಸೃಷ್ಟಿಸಿ, ಅವುಗಳ ಆಧಾರದಲ್ಲಿ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಆ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಶಿವಾನಂದ ನೀಲಣ್ಣನವರ್ ಅವರ ಪತ್ನಿ ಸಂಗೀತಾ ಹಾಗೂ ಪುತ್ರ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೂ ವರ್ಗಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ ಹೇಳಿದೆ.

Tags: BreakingNewsED Attaches 427 Crore AssetsKarnatakaNewsHeadlinesShivam Associates Fraud CaseShivananda NeelannavarVijayasakshivijayasakshinews
ShareSendShare
Previous Post

ಕನ್ನಡಿಗರ ಉದ್ಯೋಗಕ್ಕಾಗಿ ನವೆಂಬರ್ 1ರಿಂದ ಕರವೇ ಅಭಿಯಾನ: ಐಟಿ-ಬಿಟಿ ಕಂಪನಿಗಳ ಉದ್ಯೋಗದ ಅಂಕಿ-ಅಂಶ ಸಂಗ್ರಹಕ್ಕೆ ನಿರ್ಧಾರ

Next Post

ಜೈಲಿನಿಂದಲೇ ಮಗನ ಹುಟ್ಟುಹಬ್ಬಕ್ಕೆ ದರ್ಶನ್ ಸ್ಪೆಷಲ್ ಗಿಫ್ಟ್! ಅಪ್ಪ ಕೊಟ್ಟ ಚಾಕೊಲೇಟ್ ನೋಡಿ ಭಾವುಕನಾದ ವಿನೀಶ್

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಜೈಲಿನಿಂದಲೇ ಮಗನ ಹುಟ್ಟುಹಬ್ಬಕ್ಕೆ ದರ್ಶನ್ ಸ್ಪೆಷಲ್ ಗಿಫ್ಟ್! ಅಪ್ಪ ಕೊಟ್ಟ ಚಾಕೊಲೇಟ್ ನೋಡಿ ಭಾವುಕನಾದ ವಿನೀಶ್

ಜೈಲಿನಿಂದಲೇ ಮಗನ ಹುಟ್ಟುಹಬ್ಬಕ್ಕೆ ದರ್ಶನ್ ಸ್ಪೆಷಲ್ ಗಿಫ್ಟ್! ಅಪ್ಪ ಕೊಟ್ಟ ಚಾಕೊಲೇಟ್ ನೋಡಿ ಭಾವುಕನಾದ ವಿನೀಶ್

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
‘ಇದು ಸೂಕ್ತ ಸಮಯವಲ್ಲ’: ತಮಿಳುನಾಡು ಸಿಎಂ ವಿಜಯ್ ಭೇಟಿ ಮುಂದೂಡಲು ಡಿಕೆ ಶಿವಕುಮಾರ್ ಮನವಿ

ಸಕ್ಕರೆಗೆ 50 ರೂ. ಎಂಎಸ್‌ಪಿ ನಿಗದಿಗೆ ಸಿಎಂ ಒತ್ತಾಯ; ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ!

October 31, 2026
ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

ಬಾಲಿವುಡ್‌ಗೆ ಮತ್ತೊಂದು ಆಘಾತ; ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ದಿಢೀರ್ ನಿಧನ!

October 31, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper