ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಯಿತು.
Advertisement
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈಧ್ಯಾಧಿಕಾರಿ ಅಮೃತ ಹರಿದಾಸ ಮಾತನಾಡಿ, ದಾದಿಯರ ಸಹಾಯವಿಲ್ಲದೇ ವೈದ್ಯರು ಆಸ್ಪತ್ರೆಯನ್ನು ನಡೆಸುವುದು ಅಸಾಧ್ಯವಾಗಿದ್ದು, ಅವರ ಸೇವೆ ಸ್ಮರಣಿಯವಾಗಿದೆ. ರೋಗಿಗಳಿಗೆ ಅವರು ನೀಡುವ ಸೇವೆಯು ಅಪಾರವಾಗಿದ್ದು, ಸಮುದಾಯವು ಅವರನ್ನು ಗೌರವದಿಂದ ಕಂಡು ಅವರ ಸೇವೆಯನ್ನು ಸ್ಮರಿಸಬೇಕು ಎಂದರು.
ಡಾ. ಶರ್ಮಿಳಾ, ರೇಷ್ಮಾ, ಹುಲಿಗೆಮ್ಮ, ಚಂದ್ರಪ್ರಭಾ, ಸುವರ್ಣ, ಆರೀಫಾ ಮಜಾನಾ, ಅಕ್ಷತಾ, ಲಕ್ಷ್ಮೀ, ವಂದನಾ, ಜಯಶ್ರೀ, ಸಲ್ಮಾ ಹಾಜರಿದ್ದರು.