Home Blog Page 12

ನೆದರ್ಲೆಂಡ್ಸ್ ವಿರುದ್ಧ 93 ರನ್‌ಗಳ ಭರ್ಜರಿ ಗೆಲುವು; ಹೊಸ ವಿಶ್ವ ದಾಖಲೆ ಬರೆದ ಅಮೆರಿಕ!

0

ಟಿ20 ವಿಶ್ವಕಪ್ 2026ರಲ್ಲಿ ಅಮೆರಿಕ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್‌ ತಂಡವು ಅಮೆರಿಕವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ ಪರ ಸಾಯಿ ತೇಜ 79 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದ್ದು, ತಂಡವು 20 ಓವರ್‌ಗಳಲ್ಲಿ 196 ರನ್‌ಗಳ ಬಲಿಷ್ಠ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್‌ 15.5 ಓವರ್‌ಗಳಲ್ಲಿ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಅಮೆರಿಕ 93 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಈ ಜಯದೊಂದಿಗೆ ಅಮೆರಿಕ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್‌ಗಳ ಅಂತರದಿಂದ ಗೆದ್ದ ಅಸೋಸಿಯೇಟ್ ರಾಷ್ಟ್ರ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಈ ದಾಖಲೆ ನೇಪಾಳ ತಂಡದ ಹೆಸರಿನಲ್ಲಿ ಇತ್ತು. 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೇಪಾಳವು ಹಾಂಗ್ ಕಾಂಗ್ ವಿರುದ್ಧ 80 ರನ್‌ಗಳ ಜಯ ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ನೆದರ್ಲೆಂಡ್ಸ್ ವಿರುದ್ಧ 93 ರನ್‌ಗಳ ಅಂತರದಿಂದ ಗೆದ್ದು ಅಮೆರಿಕ ತಂಡ ಹೊಸ ಇತಿಹಾಸ ರಚಿಸಿದೆ.

ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: 1.23 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

0

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಹಾವೇರಿ ನಗರದಲ್ಲಿ ಇಂದು ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಆಯೋಜಿಸಲಾಗಿದೆ. ಹಾಡಿ, ಹಟ್ಟಿ, ತಾಂಡಾಗಳಲ್ಲಿ ಹಲವು ವರ್ಷಗಳಿಂದ ದಾಖಲೆ ರಹಿತವಾಗಿ ವಾಸಿಸುತ್ತಿರುವ ಜನರಿಗೆ ಕಂದಾಯ ಇಲಾಖೆಯ ವಿವಿಧ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ.

ಕಾರ್ಯಕ್ರಮಕ್ಕಾಗಿ ನಗರದ ಆರ್ಟಿಒ ಕಚೇರಿ ಬಳಿಯ ಅಜ್ಜಯ್ಯನ ಗದ್ದುಗೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆಯಲಿದ್ದಾರೆ. ಹಾವೇರಿ ಜಿಲ್ಲೆಯಲ್ಲೇ ಕಂದಾಯ ಗ್ರಾಮ 20,186, ಇ-ಪೋತಿ 7,825, ದರ್ಖಾಸ್ತು ಪೋಡಿ 502, ಪಿಎಂಜಿಎ 1,675 ಹಾಗೂ ಬಗರ್ ಹುಕುಂ 16 ಸೇರಿ ಒಟ್ಟು 30,204 ಫಲಾನುಭವಿಗಳಿದ್ದಾರೆ.

ಇದೇ ವೇಳೆ ಚಿತ್ರದುರ್ಗ ಜಿಲ್ಲೆಯಿಂದ 5,500, ದಾವಣಗೆರೆ 20,000, ಶಿವಮೊಗ್ಗ 10,000, ಚಿಕ್ಕಮಗಳೂರು 7,000, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಂದ ತಲಾ 10,000 ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 1,000 ಫಲಾನುಭವಿಗಳು ಭಾಗವಹಿಸಲಿದ್ದು, ಒಟ್ಟು 1.23 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ.

ನಕಲಿ ವರ್ಗಾವಣೆ ಪತ್ರ ವೈರಲ್; ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಸಿದ್ದರಾಮಯ್ಯ ಗರಂ!

0

ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾದ ನಕಲಿ ಪತ್ರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವರ್ಗಾವಣೆ ದಂಧೆ ಆರೋಪ ಮಾಡುತ್ತಿದ್ದ ಭಾರತೀಯ ಪಾರ್ಟಿಗೆ ಇದು ಹೊಸ ಅಸ್ತ್ರ ಸಿಕ್ಕಂತಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಯಾರೋ ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯನ್ನು ಸೃಷ್ಟಿಸಿ, ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ಹರಿಬಿಟ್ಟಿದ್ದಾರೆ.

ಇದು ಖಂಡನೀಯವಾಗಿದ್ದು ಗಂಭೀರ ಅಪರಾಧ” ಎಂದು ತಿಳಿಸಿದ್ದಾರೆ. ಇದೇ ವೇಳೆ ಸಚಿವಾಲಯದ ಅಧಿಕಾರಿಗಳು ಈ ಸಂಬಂಧ ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಪ್ರಕರಣದ ಹಿಂದಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

“ಫೋಟೋಶಾಪ್ ಮತ್ತು ಎಐ ಯುಗದಲ್ಲಿ ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹಂಚಿಕೊಳ್ಳುವುದು ತಪ್ಪು. ಸಕಾರಾತ್ಮಕ ಟೀಕೆಗೆ ನಾವು ಸದಾ ಮುಕ್ತರಾಗಿದ್ದೇವೆ, ಆದರೆ ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ” ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಚಿತ್ರವೇ ಸೆಟ್ಟೇರಲಿಲ್ಲ, 20 ಕೋಟಿ ಪರಿಹಾರ ಬೇಡಿಕೆ: ಧನುಶ್ ವಿರುದ್ಧ ನಿರ್ಮಾಪಕರ ಲೀಗಲ್ ಆಕ್ಷನ್!

ತಮಿಳು ಚಿತ್ರರಂಗದ ನಟ ಧನುಶ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಬಾರಿ ಅವರ ವಿರುದ್ಧ ‘ಥೆಂಡಾಲ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ 20 ಕೋಟಿ ರೂಪಾಯಿ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದೆ.

2016ರಲ್ಲಿ ‘ನಾನ್ ರುದ್ರನ್’ ಚಿತ್ರಕ್ಕೆ ಧನುಶ್ ಸಹಿ ಹಾಕಿದ್ದರು. ನಟನೆಯ ಜೊತೆಗೆ ನಿರ್ದೇಶನ ಮಾಡುವುದಕ್ಕೂ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ವರ್ಷಗಳಾದರೂ ಚಿತ್ರ ಸೆಟ್ಟೇರದೆ ಉಳಿದಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ಕಥೆಯಲ್ಲಿ ಮಾಡಿದ ಬದಲಾವಣೆಗಳಿಗೆ ಒಪ್ಪಿಗೆ ನೀಡಿದ ನಂತರವೂ ಸಂಪೂರ್ಣ ಚಿತ್ರಕಥೆ ಒದಗಿಸಲಿಲ್ಲ. ಇದರಿಂದಾಗಿ ಯೋಜನೆ ವಿಳಂಬವಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೂಡಿಕೆ ಮೊತ್ತವನ್ನು ವಾಪಸ್ ಪಡೆಯಲು 20 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನಿರ್ಮಾಪಕರು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.

ಈ ಬೆಳವಣಿಗೆಯ ನಡುವೆ ಧನುಶ್ ತಮ್ಮ ಮುಂದಿನ ಚಿತ್ರ ‘D55’ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ‘ಅಮರನ್’ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರಕರಣದ ಕುರಿತು ಧನುಶ್ ಪ್ರತಿಕ್ರಿಯೆ ನೀಡಬೇಕಿದೆ.

ಯಾದಗಿರಿ ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!

0

ಯಾದಗಿರಿ:- ಜಿಲ್ಲೆಯ ಶಹಾಪುರದಲ್ಲಿ ಸಾಮಾಜಿಕ ಬಹಿಷ್ಕಾರದ ಘಟನೆ ಬೆಳಕಿಗೆ ಬಂದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಸ್ವಕುಳಿಸಾಳಿ ಸಮುದಾಯದ 20 ಕುಟುಂಬಗಳ ವಿರುದ್ಧ ಸಮುದಾಯದ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಬಹಿಷ್ಕಾರ ಘೋಷಿಸಿದ್ದಾಗಿ ಆರೋಪಿಸಲಾಗಿದೆ. ಸಂಘದ ಆಸ್ತಿ ಮತ್ತು ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು ಹೇಳಿವೆ.

ಶಹಾಪುರದಲ್ಲಿರುವ ಜೀಹ್ವೆಶ್ವರ ಕಲ್ಯಾಣ ಮಂಟಪ ಮತ್ತು 18 ವಾಣಿಜ್ಯ ಮಳಿಗೆಗಳಿಂದ ವರ್ಷಕ್ಕೆ ಸುಮಾರು 25 ಲಕ್ಷ ರೂ. ಆದಾಯ ಬರುತ್ತಿದೆ ಎನ್ನಲಾಗಿದ್ದು, ಅದರ ಲೆಕ್ಕಪತ್ರ ಕುರಿತು ಪ್ರಶ್ನೆ ಮಾಡಿದ ಕುಟುಂಬಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂಬ ಆರೋಪವಿದೆ. 20 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ದಂಡ ಪಾವತಿಸಿದ ಬಳಿಕ ಬಹಿಷ್ಕಾರದಿಂದ ಮುಕ್ತಿಗೊಂಡಿದ್ದರೆ, ಉಳಿದ 12 ಕುಟುಂಬಗಳು ದಂಡ ಕಟ್ಟಲು ನಿರಾಕರಿಸಿದ ಕಾರಣ ಇನ್ನೂ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿವೆ.

ಬಹಿಷ್ಕೃತ ಕುಟುಂಬಗಳೊಂದಿಗೆ ಮದುವೆ ಸಂಬಂಧ ಮಾಡಬಾರದು, ಪಡೆಯಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಜೊತೆಗೆ ಜೀಹ್ವೇಶ್ವರ, ಹನುಮ ಮತ್ತು ಕೃಷ್ಣ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಇತ್ತೀಚೆಗೆ ಜೀಹ್ವೇಶ್ವರ ಜಯಂತಿ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕನನ್ನು ನಿಂದಿಸಿ ಕಳುಹಿಸಿದ ಘಟನೆ ಕೂಡ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಬಹಿಷ್ಕಾರದಿಂದ ಜೀವನೋಪಾಯ, ಸಂಬಂಧಗಳು ಮತ್ತು ಸಾಮಾಜಿಕ ಹಕ್ಕುಗಳು ಹಾನಿಗೊಳಗಾಗಿವೆ ಎಂದು ಕುಟುಂಬಗಳು ಆರೋಪಿಸಿದ್ದು, ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಳಲು ತೋಡಿಕೊಂಡಿವೆ.

ಗ್ರಾಹಕರ ಅಡಮಾನ ಚಿನ್ನ ಕಳವು: ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಅರೆಸ್ಟ್

0

ಬೆಂಗಳೂರು: ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅಡಮಾನ ಚಿನ್ನ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು 2 ಕೆಜಿ 787 ಗ್ರಾಂ ಚಿನ್ನಾಭರಣ ಕಾಣೆಯಾಗಿದ್ದು, ಅದರ ಮೌಲ್ಯವನ್ನು 4 ಕೋಟಿ 12 ಲಕ್ಷ 65 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ಪ್ರಕರಣ ಹೇಗೆ ಬಹಿರಂಗವಾಯಿತು?

ಗಿರಿನಗರ ಶಾಖೆಯಲ್ಲಿ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರ ಬಳಿ ಲಾಕರ್ ಕೀಲಿಗಳು ಇರುತ್ತಿದ್ದವು. ವ್ಯವಸ್ಥಾಪಕರು ಇಲ್ಲದ ಸಂದರ್ಭಗಳಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ಪ್ಯಾಕೇಟ್‌ಗಳಿಂದ ಸ್ವಲ್ಪಸ್ವಲ್ಪವಾಗಿ ಚಿನ್ನ ತೆಗೆದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಫೆಬ್ರವರಿ 2ರಂದು ಗ್ರಾಹಕರೊಬ್ಬರು ತಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಪ್ಯಾಕೇಟ್‌ನಲ್ಲಿ ಚಿನ್ನಾಭರಣ ಕಾಣೆಯಾಗಿರುವುದು ಪತ್ತೆಯಾಯಿತು. ತಕ್ಷಣ ಶಾಖಾ ವ್ಯವಸ್ಥಾಪಕಿ ತೃಪ್ತಿ ಝಾ ಇತರ ಪ್ಯಾಕೇಟ್‌ಗಳನ್ನು ಪರಿಶೀಲಿಸಿದಾಗ 24 ಪ್ಯಾಕೇಟ್‌ಗಳಲ್ಲಿ ತಿರುಚಾಟ ಕಂಡುಬಂದಿತು. ಅದರಲ್ಲಿ 21 ಪ್ಯಾಕೇಟ್‌ಗಳಲ್ಲಿ ಭಾಗಶಃ ಚಿನ್ನ ಮತ್ತು 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನಾಭರಣ ಕಾಣೆಯಾಗಿತ್ತು.

ಈ ಮಾಹಿತಿ ಮುಖ್ಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಅವರಿಗೆ ನೀಡಲಾಗಿದ್ದು, ಬಳಿಕ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂಜಾಟದ ಚಟಕ್ಕೆ ಕಳವು:-

ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಕದ್ದ ಚಿನ್ನವನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದು ಜೂಜಾಟ ಮತ್ತು ಬೆಟ್ಟಿಂಗ್‌ಗೆ ಬಳಸಿರುವುದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಸುಮಾರು 700 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಚಿನ್ನ ವಶಪಡಿಸಿಕೊಳ್ಳಲು ಕ್ರಮ ಮುಂದುವರಿದಿದೆ.

ಕೆಲವು ಹಣಕಾಸು ಸಂಸ್ಥೆಗಳು ಕಳುವಾದ ಚಿನ್ನ ಹಸ್ತಾಂತರಿಸಲು ನಿರಾಕರಿಸಿರುವ ಹಿನ್ನೆಲೆ, ಪೊಲೀಸರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಚಾಮರಾಜನಗರ| 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಕೊನೆಗೂ ಅರೆಸ್ಟ್!

0

ಚಾಮರಾಜನಗರ: ಅಪಘಾತ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ನಂಜನಗೂಡು ಪಟ್ಟಣದ ನೀಲಕಂಠ ನಗರ ನಿವಾಸಿ ಸಫಿ ಬಿನ್ ಸೈಯದ್ ಮಹಮ್ಮದ್ ಎಂಬ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ಪ್ರಕರಣದಲ್ಲಿ 2010ರಲ್ಲಿ ಚಾಮರಾಜನಗರ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೇ ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತನನ್ನು ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಲಾಗಿದೆ.

ಬೈರತಿ ಬಸವರಾಜ್ ಆರೋಗ್ಯದಲ್ಲಿ ಅಸಾಮಾನ್ಯತೆ: ಇಸಿಜಿ ವ್ಯತ್ಯಾಸ, ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಂಗೆ ಸಿದ್ಧತೆ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ಅವರ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆ ಜಯದೇವ ಹೃದಯ ರೋಗ ಸಂಸ್ಥೆಯಲ್ಲಿ ಆಂಜಿಯೋಗ್ರಾಂ ನಡೆಸಲು ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇಸಿಜಿ ವರದಿಯಲ್ಲಿ ಅಸಾಮಾನ್ಯತೆ ಪತ್ತೆಯಾದ ಬೆನ್ನಲ್ಲೇ ಬೈರತಿ ಬಸವರಾಜ್ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಂಜಿಯೋಗ್ರಾಂ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನೂ ವೈದ್ಯರು ಕೈಗೊಳ್ಳಲಿದ್ದಾರೆ.

ಆಸ್ಪತ್ರೆಯಲ್ಲಿರುವ ಅವರ ಕೊಠಡಿ ಬಳಿ ಕಟ್ಟುನಿಟ್ಟಿನ ಭದ್ರತೆ ವಹಿಸಲಾಗಿದೆ. ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡ ನಿಗಾವಹಿಸಿದ್ದು, ತಿಲಕ್ ನಗರ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ.

ಇದೀಗಾಗಲೇ ಬ್ಲಡ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಶಸ್ತಿಗಿಂತ ಜನಪ್ರೇಮವೇ ಸಾಕು ಎಂದ ಜೋ ಸೈಮನ್ ಇನ್ನು ನೆನಪು ಮಾತ್ರ: ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಅಂತಿಮ ದರ್ಶನ

ಕನ್ನಡ ಚಿತ್ರರಂಗ ತನ್ನ ಸರಳ ಮತ್ತು ಮಿತಭಾಷಿ ನಿರ್ದೇಶಕನನ್ನು ಕಳೆದುಕೊಂಡಿದೆ. ಹಿರಿಯ ನಿರ್ದೇಶಕ ಹಾಗೂ ನಟ ಜೋ ಸೈಮನ್ ಫೆಬ್ರವರಿ 13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಫಿಲಂ ಚೇಂಬರ್‌ನಲ್ಲಿ ನಡೆದ ಕಾರ್ಯಕಾರಿ ಸಭೆಯ ವೇಳೆ ಅವರಿಗೆ ಹೃದಯಾಘಾತ ಉಂಟಾಯಿತು.

ಸುದ್ದಿಗೆ ಹಪಹಪಿಸದೆ, ಮೌನವಾಗಿ ಕೆಲಸ ಮಾಡುತ್ತಿದ್ದ ಜೋ ಸೈಮನ್, ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದರೂ ಮಾನ್ಯತೆ ವಿಚಾರದಲ್ಲಿ ಒಂದಿಷ್ಟು ಬೇಸರ ಹೊಂದಿದ್ದರು. ಕೆಲ ವಾರಗಳ ಹಿಂದಷ್ಟೇ ನೀಡಿದ ಸಂದರ್ಶನದಲ್ಲಿ ಅವರು ಈ ಮನದಾಳದ ಮಾತು ಹಂಚಿಕೊಂಡಿದ್ದರು.

ರಾಜ್ಯೋತ್ಸವ ಪ್ರಶಸ್ತಿಗೆ ಹಲವು ಬಾರಿ ಹೆಸರು ಶಿಫಾರಸು ಆಗಿದ್ದರೂ ಪ್ರಶಸ್ತಿ ಸಿಗದಿರುವುದು ಅವರಿಗೆ ನೋವು ತಂದಿತ್ತು. ಕಣಗಾಲ್ ಪ್ರಶಸ್ತಿಗೂ ಅರ್ಜಿ ಹಾಕಿದ್ದರೂ ಪರಿಗಣಿಸಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಪತ್ನಿಯ ಮಾತು ಕೇಳಿ “ಜನರ ಪ್ರೀತಿ ಇದ್ದರೆ ಸಾಕು” ಎಂದು ಪ್ರಶಸ್ತಿ ಅರ್ಜಿಗಳನ್ನು ನಿಲ್ಲಿಸಿದ್ದರಂತೆ.

ಸರಳ ಬದುಕು ನಡೆಸುತ್ತಿದ್ದ ಅವರು ಯಾವುದೇ ಹಂಗಿಲ್ಲದೆ ಜೀವನ ಸಾಗಿಸುತ್ತಿದ್ದರು. ಪರಿಚಯ ಫಲಕ ಇಲ್ಲ, ವಿಸಿಟಿಂಗ್ ಕಾರ್ಡ್ ಇಲ್ಲ – ಇದು ಅವರ ವೈಖರಿ. ಸಮಚಿತ್ತದಿಂದ ಬದುಕುವುದು ಅವರ ಜೀವನದ ತತ್ವವಾಗಿತ್ತು.

ಫೆಬ್ರವರಿ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಕನ್ನಡ ಚಿತ್ರರಂಗದ ಈ ಸರಳ ಸಾಧಕ ಇನ್ನು ನೆನಪುಗಳಲ್ಲಿ ಮಾತ್ರ ಉಳಿದಿದ್ದಾರೆ.

ಇಂದು ಮತ್ತಷ್ಟು ಕಳಪೆ ಮಟ್ಟಕ್ಕಿಳಿದ ಬೆಂಗಳೂರು, ಮಂಗಳೂರಿನ ಏರ್ ಕ್ವಾಲಿಟಿ: ಜನರಲ್ಲಿ ಆತಂಕ!

0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಬೆಂಗಳೂರು ನಗರದ ವಾಯು ಗುಣಮಟ್ಟ (AQI) ಇಂದು ಕಳಪೆಯಾಗಿರುವ ಮಟ್ಟಕ್ಕೆ ತಲುಪಿದೆ. ನಿನ್ನೆ ಸುಧಾರಣೆ ಕಾಣಿಸಿಕೊಂಡಿದ್ದವು ಎಂದು ನಿರೀಕ್ಷಿಸಿದಾಗ, ಇದೀಗ ಮರುಳಿಯಷ್ಟು ಗುಣಮಟ್ಟ ಕುಸಿತ ಕಂಡು ಬಂದಿದೆ.

ಇದೇ ರೀತಿಯಾಗಿ, ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ 150ರ ಮೇಲಿನ ‘ಅನಾರೋಗ್ಯಕರ’ ಶ್ರೇಣಿಗೆ ಏರಿದೆ. ದಿನದಿಂದ ದಿನಕ್ಕೆ ರಾಜ್ಯದ ಅನೇಕ ನಗರಗಳಲ್ಲಿ AQI ಕುಸಿಯುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಆಲೋಚನೆ ಎಸೆಯುತ್ತಿದೆ, ಮತ್ತು ತಜ್ಞರು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಇಂದಿನ ಗಾಳಿಯ ಗುಣಮಟ್ಟ – ಪ್ರಮುಖ ನಗರಗಳು

  • ಬೆಂಗಳೂರು – 140

  • ಮಂಗಳೂರು – 185

  • ಮೈಸೂರು – 126

  • ಬೆಳಗಾವಿ – 165

  • ಕಲಬುರ್ಗಿ – 149

  • ಶಿವಮೊಗ್ಗ – 135

  • ಬಳ್ಳಾರಿ – 132

  • ಹುಬ್ಬಳ್ಳಿ – 154

  • ಉಡುಪಿ – 170

  • ವಿಜಯಪುರ – 160

ಈ ಅಂಕೆಗಳಲ್ಲಿ WHO ಮಾನದಂಡಗಳ ಪ್ರಕಾರ, 100–150 ಶ್ರೇಣೆಯ ಗಾಳಿ “ಕಳಪೆ” ಎಂದು ಪರಿಗಣಿಸಲಾಗುತ್ತದೆ. 150–200 ಮಧ್ಯಂತರ “ಅನಾರೋಗ್ಯಕರ” ಶ್ರೇಣಿಗೂ ಕೆಲವು ನಗರಗಳ ಪೂರ್ಣವಾಗಿ ತಲುಪಿರುವುದು ಆರೋಗ್ಯಕ್ಕೆ ಹೆಚ್ಚು ಗಮನ ಕೆಳಮಟ್ಟದ ಸೂಚನೆ.

ಗಾಳಿ ಗುಣಮಟ್ಟದ ಮಾನದಂಡಗಳು:
ಉತ್ತಮ – 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200-300
ಅಪಾಯಕಾರಿ – 300-500+

ತಜ್ಞರು ತಿಳಿಸಿದ್ದಾರೆ, ಈ ರೀತಿಯ “ಕಳಪೆ” ಮತ್ತು “ಅನಾರೋಗ್ಯಕರ” ಬಾಹ್ಯ ವಾಯು ಗುಣಮಟ್ಟದಲ್ಲಿ ಜನರಿಗೆ outdoor ಚಟುವಟಿಕೆಗಳನ್ನು ನಿರ್ವಹಿಸುತ್ತಾಗ ಎಚ್ಚರಿಕೆ ವಹಿಸಲು ಸೂಕ್ತ. ವಾಯುಮಲಿನ ದೋಷಗಳು ವಿಶೇಷವಾಗಿ ಮಕ್ಕಳ, ವಯೋವೃದ್ಧರ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳಿರುವವರಿಗೆ ಹೆಚ್ಚು ಹಾನಿಕರವಾಗಬಹುದು.

error: Content is protected !!