• About
  • Advertise
  • Privacy & Policy
  • Contact
Saturday, November 14, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Life Style

ಸಾಮಾನ್ಯ ಹೊದಿಕೆ ಬಿಟ್ಟು Weighted Blanket ಬಳಸಿದ್ರೆ ನಿದ್ದೆ ಸುಧಾರಿಸುತ್ತಾ? ಅಧ್ಯಯನ ಏನು ಹೇಳುತ್ತೆ?

graochandan1@gmail.com by graochandan1@gmail.com
September 27, 2026
in Life Style
0
SHARES
4
VIEWS
Share on Facebook

ರಾತ್ರಿ ಮಲಗುವಾಗ ದೇಹದ ಮೇಲೆ ಸ್ವಲ್ಪ ಭಾರವಿರುವ ಹೊದಿಕೆ ಹಾಕಿಕೊಂಡರೆ ಆರಾಮವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ‘Weighted Blanket’ಗಳು ಜನಪ್ರಿಯವಾಗಿವೆ.

ಸಾಮಾನ್ಯ ಹೊದಿಕೆಗಳಿಗಿಂತ ಹೆಚ್ಚು ತೂಕ ಹೊಂದಿರುವ ಈ ಹೊದಿಕೆಗಳಲ್ಲಿ ಗಾಜಿನ ಮಣಿಗಳು ಅಥವಾ ಇತರ ಭಾರವಾದ ವಸ್ತುಗಳನ್ನು ತುಂಬಲಾಗಿರುತ್ತದೆ. ಇವು ದೇಹವನ್ನು ಸುತ್ತುವರಿದಿರುವಂತೆ ಅನುಭವ ನೀಡುವುದರಿಂದ ಕೆಲವರಿಗೆ ಮೃದುವಾಗಿ ಅಪ್ಪಿಕೊಂಡಂತೆ ಅಥವಾ ಲಘು ಮಸಾಜ್ ಮಾಡಿದಂತೆ ಅನಿಸಬಹುದು.

ಆದರೆ Weighted Blanket ಬಳಸುವುದರಿಂದ ನಿಜಕ್ಕೂ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆಯೇ ಎಂಬ ಪ್ರಶ್ನೆಗೆ ಸಂಶೋಧನೆಗಳು ಕೆಲವು ಕುತೂಹಲಕಾರಿ ಮಾಹಿತಿಯನ್ನು ನೀಡಿವೆ.

ಮೆಲಟೋನಿನ್ ಪ್ರಮಾಣ ಹೆಚ್ಚಳ:

2023ರಲ್ಲಿ ಸ್ವೀಡನ್‌ನ ನಿದ್ರಾ ಪ್ರಯೋಗಾಲಯದಲ್ಲಿ ನಡೆಸಿದ ಸಣ್ಣ ಅಧ್ಯಯನದಲ್ಲಿ 26 ಆರೋಗ್ಯವಂತ ಯುವಕರನ್ನು ಒಳಪಡಿಸಲಾಗಿತ್ತು. ಒಂದು ರಾತ್ರಿ ಅವರು ಸಾಮಾನ್ಯ ಹೊದಿಕೆ ಬಳಸಿದರೆ, ಮತ್ತೊಂದು ರಾತ್ರಿ ದೇಹದ ತೂಕದ ಸುಮಾರು ಶೇ.12ರಷ್ಟು ತೂಕವಿರುವ Weighted Blanket ಬಳಸಿದ್ದರು.

ಭಾರವಾದ ಹೊದಿಕೆ ಬಳಸಿದಾಗ ನಿದ್ದೆಗೆ ಸಹಾಯ ಮಾಡುವ ಹಾರ್ಮೋನ್ ಮೆಲಟೋನಿನ್ ಪ್ರಮಾಣದಲ್ಲಿ ಸರಾಸರಿ ಶೇ.32ರಷ್ಟು ಹೆಚ್ಚಿನ ಏರಿಕೆ ಕಂಡುಬಂದಿತ್ತು. ಆದರೆ ಇದರಿಂದ ಅವರು ಹೆಚ್ಚು ಸಮಯ ನಿದ್ದೆ ಮಾಡಿದರು ಎಂದು ಹೇಳಲು ಸಾಧ್ಯವಿಲ್ಲ. ಅಧ್ಯಯನವು ಕೇವಲ ಒಂದು ರಾತ್ರಿಗೆ ಸೀಮಿತವಾಗಿದ್ದರಿಂದ ದೀರ್ಘಕಾಲದ ಪರಿಣಾಮದ ಬಗ್ಗೆ ಸ್ಪಷ್ಟತೆ ಇಲ್ಲ.

ನಿದ್ರಾಹೀನತೆ ಇರುವವರಿಗೆ ಸ್ವಲ್ಪ ಪ್ರಯೋಜನ?

2024ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದ 95 ವಯಸ್ಕರನ್ನು ಒಂದು ತಿಂಗಳ ಕಾಲ ಗಮನಿಸಲಾಗಿತ್ತು. ಕೆಲವರಿಗೆ 5.5 ಕೆ.ಜಿ. ತೂಕದ ಹೊದಿಕೆ ಹಾಗೂ ಉಳಿದವರಿಗೆ 3.5 ಕೆ.ಜಿ. ತೂಕದ ಹೊದಿಕೆ ನೀಡಲಾಗಿತ್ತು.

ಅಧ್ಯಯನದ ಅಂತ್ಯದಲ್ಲಿ ಎರಡೂ ಗುಂಪಿನ ನಿದ್ದೆಯ ಸಮಸ್ಯೆಯಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಭಾರವಾದ ಹೊದಿಕೆ ಬಳಸಿದವರು ನಿದ್ದೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಅನುಭವಿಸಿದ್ದಾಗಿ ವರದಿ ಮಾಡಿದ್ದರು. ಜೊತೆಗೆ ದಣಿವು, ಆತಂಕ, ಒತ್ತಡ ಮತ್ತು ನೋವಿನ ಅನುಭವವೂ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲರಿಗೂ ಒಂದೇ ಪರಿಣಾಮವಿಲ್ಲ:

Weighted Blanket ಎಲ್ಲರಿಗೂ ಒಂದೇ ರೀತಿಯ ಪರಿಣಾಮ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಟಿಸಂ ಹೊಂದಿದ್ದ ಮಕ್ಕಳ ಮೇಲಿನ ಮತ್ತೊಂದು ಅಧ್ಯಯನದಲ್ಲಿ ಭಾರವಾದ ಹೊದಿಕೆ ಬಳಸುವುದರಿಂದ ಬೇಗ ನಿದ್ದೆ ಬರುವುದು, ರಾತ್ರಿ ಕಡಿಮೆ ಬಾರಿ ಎಚ್ಚರಗೊಳ್ಳುವುದು ಅಥವಾ ಹೆಚ್ಚು ಸಮಯ ನಿದ್ದೆ ಮಾಡುವುದರಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿರಲಿಲ್ಲ.

ಆದರೂ ಮಕ್ಕಳು ಹಾಗೂ ಅವರ ಪೋಷಕರು Weighted Blanket ಅನ್ನು ಇಷ್ಟಪಟ್ಟಿದ್ದರು. ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದ ವಯಸ್ಕರ ಮೇಲಿನ ಮತ್ತೊಂದು ಅಧ್ಯಯನದಲ್ಲಿಯೂ ನೋವಿನ ತೀವ್ರತೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರಲಿಲ್ಲ.

ಹಾಗಾದರೆ Weighted Blanket ಬಳಸಬಹುದೇ?

ಸದ್ಯದ ಅಧ್ಯಯನಗಳ ಪ್ರಕಾರ Weighted Blanket ಕೆಲವರಿಗೆ ಆರಾಮ ನೀಡುವುದರ ಜೊತೆಗೆ ನಿದ್ದೆಯ ಗುಣಮಟ್ಟದಲ್ಲೂ ಸ್ವಲ್ಪ ಪ್ರಯೋಜನ ನೀಡಬಹುದು. ಆದರೆ ನಿದ್ರಾಹೀನತೆಗೆ ಇದು ಖಚಿತ ಪರಿಹಾರ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಪುರಾವೆಗಳು ಇನ್ನೂ ಇಲ್ಲ.

ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹೀಗಾಗಿ Weighted Blanket ಬಳಸಲು ಬಯಸುವವರು ಖರೀದಿಸುವ ಮೊದಲು ಅದರ ತೂಕ, ದೇಹಕ್ಕೆ ಹೊಂದಿಕೊಳ್ಳುವಿಕೆ ಹಾಗೂ ಬಳಸುವಾಗ ಉಂಟಾಗುವ ಆರಾಮವನ್ನು ಗಮನಿಸುವುದು ಮುಖ್ಯ.

Tags: kannadanewsKarnatakaSleepSleepQualityVijayasakshivijayasakshinewsWeightedBlanket
ShareSendShare
Previous Post

ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೂಷ್ ಏನು ಹೇಳಲಿದ್ದಾರೆ? ನಾಳೆ ಕೋರ್ಟ್‌ನಲ್ಲಿ ಮಹತ್ವದ ಸಾಕ್ಷಿ ವಿಚಾರಣೆ

Next Post

ಉತ್ತರಾಖಂಡದಲ್ಲಿ ಮಳೆಯ ಅಬ್ಬರ; ಭೂಕುಸಿತದಿಂದ ಬದರಿನಾಥ್–ರಿಷಿಕೇಶ ಹೆದ್ದಾರಿ ಬಂದ್!

graochandan1@gmail.com

graochandan1@gmail.com

Next Post

ಉತ್ತರಾಖಂಡದಲ್ಲಿ ಮಳೆಯ ಅಬ್ಬರ; ಭೂಕುಸಿತದಿಂದ ಬದರಿನಾಥ್–ರಿಷಿಕೇಶ ಹೆದ್ದಾರಿ ಬಂದ್!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಸ್ಫೋಟ! ರಸಗುಲ್ಲಾ ಎಂದುಕೊಂಡು ಸಿಡಿಮದ್ದು ತಿಂದ ವ್ಯಕ್ತಿ ಸಾವು

ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಸ್ಫೋಟ! ರಸಗುಲ್ಲಾ ಎಂದುಕೊಂಡು ಸಿಡಿಮದ್ದು ತಿಂದ ವ್ಯಕ್ತಿ ಸಾವು

November 13, 2026
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

November 13, 2026
ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

November 13, 2026
ಜಾಗತಿಕ ಮಟ್ಟದಲ್ಲಿ ಮಿಂಚಿದ ಗದಗದ ಪ್ರತಿಭೆ; ACCA ಪರೀಕ್ಷೆಯಲ್ಲಿ ಪೂಜಾ ದಾನಿ ಸಾಧನೆ

ಜಾಗತಿಕ ಮಟ್ಟದಲ್ಲಿ ಮಿಂಚಿದ ಗದಗದ ಪ್ರತಿಭೆ; ACCA ಪರೀಕ್ಷೆಯಲ್ಲಿ ಪೂಜಾ ದಾನಿ ಸಾಧನೆ

November 14, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಸ್ಫೋಟ! ರಸಗುಲ್ಲಾ ಎಂದುಕೊಂಡು ಸಿಡಿಮದ್ದು ತಿಂದ ವ್ಯಕ್ತಿ ಸಾವು

ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಸ್ಫೋಟ! ರಸಗುಲ್ಲಾ ಎಂದುಕೊಂಡು ಸಿಡಿಮದ್ದು ತಿಂದ ವ್ಯಕ್ತಿ ಸಾವು

November 13, 2026
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

November 13, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper