Home Blog Page 19

ತಡೆಗೋಡೆ ಇಲ್ಲದ ರಸ್ತೆ ಮತ್ತೊಂದು ಬಲಿ: ಮುದುವಾಡಿ ಕೆರೆಯಲ್ಲಿ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ಸಾವು

0

ಕೋಲಾರ: ಮುದುವಾಡಿ ಕೆರೆಯ ಕಟ್ಟೆಯ ಮೇಲಿರುವ ರಾಜ್ಯ ಹೆದ್ದಾರಿಯಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಟಿ.ಎಂ. ವೆಂಕಟೇಶ್ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷರಾಗಿದ್ದ ವೆಂಕಟೇಶ್, ನಾಳೆಯಿಂದ ಕೋಲಾರ ನಗರದಲ್ಲಿ ನಡೆಯಲಿರುವ ರೈತ ಸಂಘ ಹಾಗೂ ಸಿಪಿಎಂ ಪಕ್ಷದ ರಾಜ್ಯ ಸಮಾವೇಶದ ಸಿದ್ಧತೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲಸ ಮುಗಿಸಿ ರಾತ್ರಿ ತಮ್ಮ ಊರಾದ ತೊರಾಂಡಹಳ್ಳಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮುದುವಾಡಿ ಕೆರೆ ಕೋಲಾರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು, ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಕೆರೆಯ ಎರಡೂ ಬದಿಗಳಲ್ಲೂ ತಡೆಗೋಡೆ ಇಲ್ಲದಿರುವುದು ಹಾಗೂ ರಸ್ತೆ ಕಿರಿದಾಗಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದೀಗ ಕಾರು ಸ್ವತಃ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆಯೋ ಅಥವಾ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಕೆರೆಯ ಕಟ್ಟೆಯ ಮೇಲಿನ ರಸ್ತೆಯನ್ನು ಅಗಲಗೊಳಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೋಲಾರ: ರಸ್ತೆ ಅಪಘಾತದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಾವು!

ಕೋಲಾರ: ರಾಜ್ಯ ಹೆದ್ದಾರಿ ಜಿಲ್ಲೆಯ ಕೇಂದ್ರದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆದ ರಾತ್ರಿ ಸುಮಾರು 1.30 ಗಂಟೆಗೆ ತೊರಾಂಡಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ, ಕಾರು ಕೆರೆಗೆ ಬಿದ್ದ ಪರಿಣಾಮ ಕಾರ್​ ನಲ್ಲಿದ್ದ ತೊರಾಂಡಹಳ್ಳಿ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್​​ ಮೃತಪಟ್ಟಿದ್ದಾರೆ.

ಕಾರು ಕೆರೆಗೆ ಬಿದ್ದಿರುವ ವಿಷಯ ಬೆಳಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿಯಲಿಲ್ಲ. ಸ್ಥಳೀಯರು ಅನುಮಾನಗೊಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾರು ಮತ್ತು ಮೃತದೇಹ ಸತ್ತ ಸ್ಥಿತಿಯಲ್ಲಿ ಇರುವುದು ತಿಳಿದು ಬಂದಿದೆ.

 

ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವು!

ಹಾಸನ:- ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಜರುಗಿದೆ.

42 ವರ್ಷದ ದೇವಾನಂದ್ ಮೃತಪಟ್ಟ ದುರ್ದೈವಿ. ಇವರು ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಮಲಗಿದ್ದ ವೇಳೆಯೇ ಹೃದಯಾಘಾತವಾಗಿದೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಿ ದೇವಾನಂದ್ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ದೇವಾನಂದ್ ಹಲವಾರು ಬಾರಿ ಪೌರಾಣಿಕ ನಾಟಕಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಾಯಿ, ಮಡದಿ, ಇಬ್ಬರು ಮಕ್ಕಳನ್ನು ದೇವಾನಂದ್ ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಟಿ20 ವಿಶ್ವಕಪ್ ಫೈನಲ್: ಮೂರನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸುತ್ತಾ ಭಾರತ?

0

ಟಿ20 ವಿಶ್ವಕಪ್ ಪೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ. ಸಾವಿರಾರು ಭಾರತೀಯರು ದೇಶಾದ್ಯಂತ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದು, ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಟೂರ್ನಿಯ ಆರಂಭಿಕ ದಿನಗಳಲ್ಲಿ ಭಾರತ ತಂಡ 2007 ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ, ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ಇತಿಹಾಸ ರಚಿಸಿತ್ತು. ನಂತರದ 17 ವರ್ಷಗಳಲ್ಲಿ ಭಾರತದ ಸಾಧನೆ ಸತತ ಪ್ರಯತ್ನಗಳಿಗೆ ಬಳಿಕವೂ ಟ್ರೋಫಿ ಗೆಲುವು ದೊರೆಯಲಿಲ್ಲ. 2024 ರಲ್ಲಿ ಭಾರತ ತಂಡ ಮತ್ತೊಮ್ಮೆ ಚಾಂಪಿಯನ್ ಆದ ನಂತರ, ಈಗ ಮತ್ತೆ ಇತಿಹಾಸ ನಿರ್ಮಿಸಲು ಅವಕಾಶ ಸಿಕ್ಕಿದ್ದು, ಮೆನ್ ಇನ್ ಬ್ಲೂ ಗೆಲ್ಲಲು ಸಿದ್ಧವಾಗಿದೆ.

ಈ ಬಾರಿ ಫೈನಲ್ ಪಂದ್ಯದಲ್ಲಿ ಭಾರತ ಎದುರಿಸುತ್ತಿರುವ ತಂಡ ನ್ಯೂಜಿಲೆಂಡ್. ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದಿಲ್ಲ. ಉಭಯ ತಂಡಗಳು ಈ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆದ್ದಿದೆ.

ಈ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟೂರ್ನಿಯಲ್ಲಿ ಭಾರತ ತಂಡ ಈ ಬಾರಿ ಮೂರನೇ ಚಾಂಪಿಯನ್ ಆಗಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ನಿರೀಕ್ಷೆ ಇಟ್ಟಿದೆ.

ನಗರ ಪ್ರಯಾಣ ಸುಗಮ: ದೆಹಲಿಯ 2 ಹೊಸ ಮೆಟ್ರೋ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿದ PM ಮೋದಿ!

0

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ 33,500 ಕೋಟಿ ರೂ. ಮೌಲ್ಯದ ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಪಿಂಕ್ ಲೈನ್‌ನಲ್ಲಿ 12.3 ಕಿ.ಮೀ.ದ ಮಜ್ಲಿಸ್ ಪಾರ್ಕ್–ಮೌಜ್‌ಪುರ್–ಬಾಬರ್‌ಪುರ್ ಕಾರಿಡಾರ್ ಮತ್ತು ಮೆಜೆಂಟಾ ಲೈನ್‌ನಲ್ಲಿ 9.9 ಕಿ.ಮೀ.ದ ದೀಪಾಲಿ ಚೌಕ್–ಮಜ್ಲಿಸ್ ಪಾರ್ಕ್ ವಿಸ್ತರಣೆಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಪಿಂಕ್ ಲೈನ್ ವಿಸ್ತರಣೆಯು ಬುರಾರಿ, ಜಗತ್‌ಪುರ್-ವಜೀರಾಬಾದ್, ಖಜುರಿ ಖಾಸ್, ಭಜನ್‌ಪುರ ಮತ್ತು ಯಮುನಾ ವಿಹಾರ್ ಪ್ರದೇಶಗಳಿಗೆ ಸೇವೆ ನೀಡುತ್ತದೆ. ಇದರಿಂದ ದೆಹಲಿಗೆ ಸಂಪೂರ್ಣ ಕಾರ್ಯನಿರ್ವಹಿಸುವ ರಿಂಗ್ ಮೆಟ್ರೋ ಸಿದ್ಧವಾಗಿದೆ.

ಈ ಸೇರ್ಪಡೆ ದೆಹಲಿಯ ಈಶಾನ್ಯ ಮತ್ತು ವಾಯುವ್ಯ ಭಾಗಗಳ ನಡುವಣ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ದಟ್ಟಣೆಯನ್ನು ನಿವಾರಣೆಗೆ ಸಹಾಯ ಮಾಡುತ್ತದೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಮೆಜೆಂಟಾ ಲೈನ್ ವಿಸ್ತರಣೆಯು ಜಾಲವನ್ನು ಸುಮಾರು 49 ಕಿ.ಮೀ.ಗೆ ವಿಸ್ತರಿಸುತ್ತದೆ ಮತ್ತು ಮಧುಬನ್ ಚೌಕ್, ಉತ್ತರ ಪಿತಂಪುರಾ–ಪ್ರಶಾಂತ್ ವಿಹಾರ್, ಹೈದರ್ಪುರ್ ಬದ್ಲಿ ಮೋರ್, ಭಾಲಸ್ವಾ ಮುಂತಾದ ವಸತಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಈ ಸೇರ್ಪಡೆಗಳು ವಾಣಿಜ್ಯ ಮತ್ತು ವಸತಿ ವಲಯಗಳನ್ನು ಹೇಗೆ ಸಂಯೋಜಿಸುತ್ತವೆ, ಸುಗಮ, ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತವೆ ಎಂಬುದನ್ನು ಮುಖ್ಯಮಂತ್ರಿ ಗುಪ್ತಾ ಒತ್ತಿ ಹೇಳಿದರು.

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ: ಹೆತ್ತ ಮಕ್ಕಳನ್ನೇ ಕೊಂದನಾ ತಂದೆ?

ಕಾಮರೆಡ್ಡಿ: ತೆಲಂಗಾಣಕಾಮರೆಡ್ಡಿ ಜಿಲ್ಲೆಯಲ್ಲಿ ಮೂವರು ಬಾಲಕಿಯರು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮೃತರಾದ ಬಾಲಕಿಯರು 8, 7 ಮತ್ತು 5 ವರ್ಷದ ಸಹೋದರಿಯರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ಬೆಳಿಗ್ಗೆ ತಮ್ಮ ತಂದೆಯೊಂದಿಗೆ ಮನೆ ಹೊರಗೆ ಹೋಗಿದ್ದು, ಬಳಿಕ ಮನೆಗೆ ಮರಳಲಿಲ್ಲ.

ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದರು. ನಂತರ ಶೋಧ ಕಾರ್ಯಾಚರಣೆ ವೇಳೆ ನೀರಿನ ಟ್ಯಾಂಕ್‌ನಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆಯಾಯಿತು. ಬಳಿಕ ಮುಂದುವರೆದ ಹುಡುಕಾಟದಲ್ಲಿ ಮೂರನೇ ಬಾಲಕಿಯ ಶವವೂ ಪತ್ತೆಯಾಗಿದೆ.

ಮಕ್ಕಳ ತಂದೆಯ ಮೇಲೆಯೇ ಅನುಮಾನ ವ್ಯಕ್ತವಾಗಿದ್ದು, ಮಕ್ಕಳನ್ನು ನೀರಿಗೆ ತಳ್ಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಬಳಿಕ ಕಾಮರೆಡ್ಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ರಾಮನಗರದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ: ಕುದೂರು ಪೊಲೀಸರ ಬಲೆಗೆ ಬಿದ್ದ ಖದೀಮರು

0

ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರಭು, ವಸಂತಿ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾರಿನಲ್ಲಿ ಸಂಚರಿಸಿ ಜನರ ಬಳಿ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿ, ಅವರ ಗಮನ ಬೇರೆಡೆ ಸೆಳೆದು ಸರಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 3ರಂದು ಕಳ್ಳಿಪಾಳ್ಯ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಕಳ್ಳತನ ನಡೆದಿತ್ತು. ಅಲ್ಲದೆ ಮುನೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ತೆರಳುತ್ತಿದ್ದ ಭಕ್ತರನ್ನೂ ಗುರಿಯಾಗಿಸಿಕೊಂಡಿದ್ದರು.

ಬಂಧಿತರಿಂದ 112 ಗ್ರಾಂ ತೂಕದ ಮೂರು ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾಗನಾರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ತಂಡ ಒಟ್ಟು ಏಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು–ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ: ಮೂವರು ಯುವಕರ ಸಾವು!

ರಾಮನಗರ: ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು–ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರದ ಆಗರ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಸೈಯದ್ ಪಾಷ (22), ಯೂನಿಫ್ ಬಾನ್ (23) ಹಾಗೂ ಅಜರ್ ಪಾಷ (22) ಎಂದು ಗುರುತಿಸಲಾಗಿದೆ. ಫರಾಜ್ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು, ಅವನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಮುಂಜಾನೆ ಸುಮಾರು 3 ಗಂಟೆ ವೇಳೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ನಾಲ್ವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕಗ್ಗಲೀಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ: ಲೀಟರ್‌ಗೆ 50 ಪೈಸೆ ಹೆಚ್ಚಳ!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘವು ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಸಿಹಿ ಸುದ್ದಿ ನೀಡಿದೆ.

ಲೀಟರ್ ಹಾಲಿನ ದರದಲ್ಲಿ 50 ಪೈಸೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ಹೈನುಗಾರರಿಗೆ ಲಾಭವಾಗಲಿದೆ.

ಹೊಸ ವರ್ಷದ ಆರಂಭದಲ್ಲಿ ಜನವರಿ 1ರಂದು ಲೀಟರ್‌ಗೆ 1 ರೂಪಾಯಿ ಹೆಚ್ಚಳ ಮಾಡಿದ್ದ ಸಂಘವು ಇದೀಗ ಮತ್ತೊಮ್ಮೆ 50 ಪೈಸೆ ಹೆಚ್ಚಳ ಮಾಡಿದೆ. ಇದರ ಫಲವಾಗಿ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 36 ರೂಪಾಯಿ 40 ಪೈಸೆ ಲಭ್ಯವಾಗಲಿದೆ.

ಈ ಹೆಚ್ಚುವರಿ ದರ ಮೇ ತಿಂಗಳ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಲಾಭಾಂಶವನ್ನು ಪರಿಗಣಿಸಿ ದರ ಹೆಚ್ಚಳವನ್ನು ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿಗೆ ಬಂದ ಜ್ಯೂ. ಎನ್‌ಟಿಆರ್‌ ನೋಡಲು ಮುಗಿಬಿದ್ದ ಫ್ಯಾನ್ಸ್:‌ ಎಸ್ಕಲೇಟರ್ ಹಾನಿ

ಬೆಂಗಳೂರು: ತೆಲುಗು ನಟ ಜ್ಯೂ.ಎನ್‌ಟಿಆರ್ ಅವರಿಗಾಗಿ ಅಭಿಮಾನಿಗಳ ಕ್ರೇಜ್ ಮತ್ತೊಮ್ಮೆ ಗೋಚರಿಸಿದ್ದು, ಬೆಂಗಳೂರುದಲ್ಲಿ ಭಾರೀ ಜನಸ್ತೋಮ ಕಂಡುಬಂದಿದೆ.

ನಗರದ ಮಹದೇವಪುರದಲ್ಲಿರುವ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಜ್ಯೂ.ಎನ್‌ಟಿಆರ್ ಭಾಗವಹಿಸಿದ್ದರು. ಈ ವೇಳೆ ಸಾವಿರಾರು ಅಭಿಮಾನಿಗಳು ನಟನನ್ನು ನೋಡಲು ಆಸ್ಪತ್ರೆಗೆ ಧಾವಿಸಿದರು.

ಅಭಿಮಾನಿಗಳ ನೂಕುನುಗ್ಗಲಿನಿಂದ ಆಸ್ಪತ್ರೆಯೊಳಗೆ ಗೊಂದಲ ಉಂಟಾಗಿ, ಎಸ್ಕಲೇಟರ್ ಮುರಿದು ಹಾನಿಗೊಳಗಾಗಿದೆ.

ಜನಸ್ತೋಮ ಹೆಚ್ಚಾಗುತ್ತಿದ್ದಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ನಿಯಂತ್ರಣಕ್ಕೆ ಬರದಿದ್ದರಿಂದ ಲಘು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

error: Content is protected !!